ರೈತ ಹೋರಾಟ | ಚಿತ್ರಗಳಲ್ಲಿ ಅನ್ನದಾತರ ಚಳವಳಿ
x

ರೈತ ಹೋರಾಟ | ಚಿತ್ರಗಳಲ್ಲಿ ಅನ್ನದಾತರ ಚಳವಳಿ



ದೆಹಲಿಯತ್ತ ಹೊರಟಿರುವ ರೈತರ ರ್ಯಾಲಿಯ ಮೇಲೆ ಮಂಗಳವಾರ ಹರ್ಯಾಣ ಪೊಲೀಸರು ಡ್ರೋನ್‌ ಬಳಸಿ ಅಶ್ರುವಾಯು ಪ್ರಯೋಗ ನಡೆಸಿದರು. ಆದರೆ, ಹೋರಾಟವನ್ನು ಹತ್ತಿಕ್ಕುವ ಸರ್ಕಾರಗಳ ಯತ್ನಗಳಿಗೆ ಸೊಪ್ಪು ಹಾಕದ ರೈತರು ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.


ರೈತ ಹೋರಾಟಗಾರರು ದೆಹಲಿ ಗಡಿಯೊಳಗೆ ಪ್ರವೇಶಿಸದಂತೆ ತಡೆಯಲು ಹೆದ್ದಾರಿಗೆ ಅಡ್ಡಲಾಗಿದೆ ಸರ್ಕಾರ ನಿರ್ಮಿಸಿರುವ ಬ್ಯಾರಿಕೇಡ್‌, ಕಾಂಕ್ರೀಟ್‌, ಕಬ್ಬಿಣದ ಮೊಳೆಗಳ ತಡೆಗೋಡೆಗಳು. ಆದರೆ, ಹರ್ಯಾಣ, ಚಂಡೀಗಢ, ಪಂಜಾಬ್‌ ಗಡಿಗಳನ್ನು ಸರ್ಕಾರ ಅಂತಾರಾಷ್ಟ್ರೀಯ ಗಡಿಗಳಾಗಿ ಪರಿವರ್ತಿಸಿದೆ. ಆದರೆ, ಇಂತಹ ತಡೆಗೋಡೆಗಳನ್ನು ಅನ್ನದಾತರನ್ನು ತಡೆಯಲಾರವು ಎಂದು ರೈತ ನಾಯಕರು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.


ನಡೆ ಮುಂದೆ ನಡೆ ಮುಂದೆ,, ನುಗ್ಗಿ ನಡೆ ಮುಂದೆ.. ಇದು ಸದ್ಯ ದೆಹಲಿ ಗಡಿಯತ್ತ ದಾಪುಗಾಲು ಇಡುತ್ತಿರುವ ರೈತರ ಒಕ್ಕೊರಲ ದನಿ. ಸಾಲುಸಾಲು ಟ್ರ್ಯಾಕ್ಟರುಗಳಲ್ಲಿ ದೆಹಲಿ ಗಡಿಯತ್ತ ನುಗ್ಗುತ್ತಿರುವ ರೈತರು. ಮೂರು ವರ್ಷಗಳ ಹಿಂದೆ ಸರ್ಕಾರ ತಮ್ಮನ್ನು ತಡೆಯಲು ಭಾರೀ ತಡೆಗೋಡೆಗಳನ್ನು ನಿರ್ಮಿಸಿದ್ದನ್ನು ಮರೆತಿರದ ಹೋರಾಟಗಾರರು ಈ ಬಾರಿ ತಡೆಗೋಡೆಗಳನ್ನು ಪುಡಿಗಟ್ಟಿ ನುಗ್ಗುವ ಭಾರೀ ಸಾಮರ್ಥ್ಯದ ಟ್ರ್ಯಾಕ್ಟರುಗಳೊಂದಿಗೆ ಧಾವಿಸಿದ್ದಾರೆ.


ದೆಹಲಿ ಹರ್ಯಾಣ ಗಡಿಯಲ್ಲಿ ರೈತರನ್ನು ತಡೆಯಲು ನಿರ್ಮಿಸಿರುವ ಮುಳ್ಳುತಂತಿಯ ಭಾರೀ ತಡೆಗೋಡೆ. ದೇಶ- ದೇಶಗಳ ಗಡಿಯಲ್ಲಿ ಶತ್ರುಗಳ ಒಳನುಸುಳುವಿಕೆ ತಡೆಯಲು ನಿರ್ಮಿಸುವ ಈ ತಂತಿ ಸುರಳಿ ಬೇಲಿಯನ್ನು ನಮ್ಮದೇ ಅನ್ನದಾತರ ಪ್ರಜಾಸತ್ತಾತ್ಮಕ ಹೋರಾಟವನ್ನು ಹತ್ತಿಕ್ಕಲು ಬಳಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.


ಶಂಭು ಗಡಿಯಲ್ಲಿ ನಿರ್ಮಿಸಿದ್ದ ಕಾಂಕ್ರೀಟ್‌ ತಡೆಗೋಡೆಗಳನ್ನು ಕಿತ್ತೆಸೆದು ಒಳನುಗ್ಗಿದ ರೈತ ಹೋರಾಟಗಾರರು. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು ಎಂಬುದೂ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಎರಡು ವರ್ಷಗಳ ಹಿಂದೆ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಈಗ ಮರೆತು ಕೂತಿದೆ. ಅದಕ್ಕೆ ನೆನಪಿಸುವ ಉದ್ದೇಶದಿಂದ ಈ ಹೋರಾಟ ಎಂಬುದು ರೈತ ನಾಯಕರ ವಾದ.


ದೆಹಲಿಯತ್ತ ಸಾಲುಗಟ್ಟಿ ಹೊರಟಿರುವ ರೈತ ಹೋರಾಟಗಾರರ ಟ್ರ್ಯಾಕ್ಟರ್‌ಗಳು. ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ರೈತ ಮಹಾ ಸಂಗ್ರಾಮದ ಬಳಿಕ ಟ್ರ್ಯಾಕ್ಟರ್‌ ಅನ್ನದಾತರ ಇಚ್ಛಾಶಕ್ತಿ, ಹೋರಾಟದ ಕೆಚ್ಚು ಮತ್ತು ಪ್ರಾಮಾಣಿಕ ಆಕ್ರೊಶದ ಹೆಗ್ಗುರುತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದಿತ್ತು.








Read More
Next Story