ಪ್ರಾಧ್ಯಾಪಕಿಗೆ ಪ್ರವೇಶ ನಿರಾಕರಣೆ: ಕಾಂಗ್ರೆಸ್ ವಾಗ್ದಾಳಿ, ಬಿಜೆಪಿ ತಿರುಗೇಟು
x

ಪ್ರಾಧ್ಯಾಪಕಿಗೆ ಪ್ರವೇಶ ನಿರಾಕರಣೆ: ಕಾಂಗ್ರೆಸ್ ವಾಗ್ದಾಳಿ, ಬಿಜೆಪಿ ತಿರುಗೇಟು


ಫೆ. 26ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಸಂವಿಧಾನದ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಇಂಗ್ಲೆಂಡಿನ ಪ್ರಾಧ್ಯಾಪಕಿ ನಿತಾಶಾ ಕೌಲ್‌ ಅವರಿಗೆ ದೇಶಕ್ಕೆ ಪ್ರವೇಶವನ್ನು ನಿರಾಕರಿಸಿರುವ ಪ್ರಕರಣವು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಘಟನೆ ಕೇಂದ್ರವು ಹೇಗೆ ವೈಯಕ್ತಿಕ ಹಕ್ಕುಗಳು ಮತ್ತು ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಹೇಗೆ ತುಳಿಯಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಸಚಿವ ಎ‌ಚ್.ಸಿ.ಮಹದೇವಪ್ಪ ಆರೋಪಿಸಿದರು. ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾನಿಲಯದ ಪ್ರೊ.ನಿತಾಶಾ ಕೌಲ್ ಅವರು ಭಾರತ ವಿರೋಧಿ ಪ್ರಚಾರವನ್ನು ಹರಡುವವರು ಎಂದು ದೂರಿದೆ.

'ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ 2024'ಕ್ಕೆ ಕರ್ನಾಟಕ ಸರ್ಕಾರದ ಆಹ್ವಾನದ ಮೇರೆಗೆ ಭಾಗವಹಿಸಲು ಆಗಮಿಸಿದ್ದ ತಮಗೆ ಪ್ರವೇಶ ನಿರಾಕರಿಸಲಾಯಿತು ಎಂದು ಕೌಲ್ ದೂರಿದ್ದರು. ʻಕರ್ನಾಟಕ ಸರ್ಕಾರದ ಆಹ್ವಾನದಂತೆ ಆಗಮಿಸಿದ್ದ ತಮಗೆ ಕೇಂದ್ರವು ಪ್ರವೇಶ ನಿರಾಕರಿಸಿತು. ನನ್ನ ಪಾಸ್‌ಪೋರ್ಟ್‌ ಮತ್ತು ಇತರ ದಾಖಲೆಗಳು ಮಾನ್ಯವಾದಂಥವುʼ ಎಂದು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದರು.

ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ,ʻರಾಜ್ಯ ಸರ್ಕಾರಗಳ ಹಕ್ಕುಗಳನ್ನು ಹೇಗೆ ಪದೇ ಪದೇ ತುಳಿಯಲಾಗುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆ ಇದುʼ ಎಂದಿದ್ದರು.

ʻಸಂವಿಧಾನ ಸಮಾವೇಶ ಆಯೋಜಿಸುವುದು ಮತ್ತು ರಾಜ್ಯದ ಅಭಿವೃದ್ಧಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೇಗೆ ಹೆಚ್ಚಿಸಬಹುದು ಎಂಬ ಕುರಿತು ತಜ್ಞರನ್ನು ಮಾತುಕತೆ ಆಯೋಜಿಸುವುದು ಕರ್ನಾಟಕ ಸರ್ಕಾರದ ಹಕ್ಕು. ರಾಜ್ಯಗಳ ಹಕ್ಕುಗಳು ಮತ್ತು ಸಂವಿಧಾನದ ಪ್ರತಿಪಾದಿಸಿದ ಫೆಡರಲ್ ತತ್ವಗಳನ್ನು ಒಕ್ಕೂಟ ಸರ್ಕಾರ ದುರ್ಬಲಗೊಳಿಸಿದೆʼ ಎಂದು ಬರೆದಿದಿದ್ದರು.

ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ: ಪ್ರೊ. ನಿತಾಶಾ ಅವರನ್ನು ಆಹ್ವಾನಿಸಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ.

'ನಿತಾಶಾ ಕೌಲ್ ಅವರನ್ನು ಆಹ್ವಾನಿಸುವ ಮೂಲಕ 'ತುಕ್ಡೆ ತುಕ್ಡೆ ಗ್ಯಾಂಗ್' ಅಪರಾಧಗಳನ್ನು ಬಿಳಿಯಾಗಿಸಲು ಸಿದ್ದರಾಮಯ್ಯ ಸರ್ಕಾರ ಪ್ರಯತ್ನಿಸಿದೆʼ ಎಂದು ವಿಜಯೇಂದ್ರ ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖ ನಾಯಕರು ಸಮಾವೇಶದಲ್ಲಿ ಭಾಗವಹಿಸಿರುವುದು ಅಸಹ್ಯಕರ. ಬರ ಮತ್ತು ತೀವ್ರ ನೀರಿನ ಬಿಕ್ಕಟ್ಟಿನಿಂದ ರಾಜ್ಯ ಮತ್ತು ರೈತರು ಸಂಕಷ್ಟದಲ್ಲಿರುವಾಗ ಸಿದ್ದರಾಮಯ್ಯ ಸರ್ಕಾರ ಅನಗತ್ಯವಾಗಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿರುವುದು ಆತಂಕಕಾರಿ ಮತ್ತು ಕಿರಿಕಿರಿʼ ಎಂದು ವಿಜಯೇಂದ್ರ ಬರೆದಿದ್ದಾರೆ.

'ನಮ್ಮ ದೇಶಕ್ಕೆ ಒಳ್ಳೆಯದಲ್ಲ': ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ʻದೇಶದಲ್ಲಿ ಯಾವ ರೀತಿಯ ಪ್ರಜಾಪ್ರಭುತ್ವವಿದೆ, ಬಿಜೆಪಿ ಸಂವಿಧಾನ ಮತ್ತು ವಾಕ್ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಹೇಗೆ ಗೌರವಿಸುತ್ತದೆ ಎಂಬುದನ್ನು ಈ ಘಟನೆ ತೋರಿಸುತ್ತದೆʼ ಎಂದಿದ್ದಾರೆ.

ʻಅವರು (ಬಿಜೆಪಿ) ಅವರನ್ನು (ಸ್ವಾತಂತ್ರ್ಯವನ್ನು) ಹತ್ತಿಕ್ಕಲು ಪ್ರಯತ್ನಿಸುತ್ತಾರೆ. ಇದು ದೇಶಕ್ಕೆ ಒಳ್ಳೆಯದಲ್ಲ. ಏಕೆಂದರೆ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿಶ್ವದರ್ಜೆಯ ಸಂವಿಧಾನವನ್ನು ನೀಡಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಗೌರವಿಸಲಾಗುತ್ತದೆ. ಮಾತನಾಡಲು ಸ್ವಾತಂತ್ರ್ಯವಿದೆ' ಎಂದು ಪಾಟೀಲ್ ಹೇಳಿದರು.

ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ʻದೇಶದಲ್ಲಿ ಸರ್ವಾಧಿಕಾರಿ ವ್ಯವಸ್ಥೆ ಇದೆಯೇ? ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದಾರೆʼ ಎಂದು ದೂರಿದ್ದಾರೆ.

Read More
Next Story