
ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ದೇಶ ನಿರ್ಧರಿಸಿದೆ: ಅಮಿತ್ ಶಾ
ಭಾನುವಾರ (ಫೆಬ್ರವರಿ 18): ಮುಂಬರುವ ಲೋಕಸಭೆ ಚುನಾವಣೆಯನ್ನು ಮಹಾಭಾರತ ಯುದ್ಧಕ್ಕೆ ಹೋಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ನೇತೃತ್ವದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಇಂಡಿಯ ಮೈತ್ರಿ ಕೂಟದಲ್ಲಿ ಕುಟುಂಬ ನಡೆಸುವ ಪಕ್ಷಗಳು ಮತ್ತು ಭ್ರಷ್ಟಾಚಾರ ತುಂಬಿಹೋಗಿದೆ ಎಂದು ಟೀಕಿಸಿದರು.
"ಬಿಜೆಪಿ ದೇಶ್ ಕಿ ಆಶಾ, ವಿಪಕ್ಷ್ ಕಿ ಹತಾಶಾʼ ನಿರ್ಣಯ ಕುರಿತು ಮಾತನಾಡುತ್ತಿದ್ದರು. ʻವಿರೋಧವು 2ಜಿ, 3ಜಿ ಮತ್ತು 4ಜಿ ಪಕ್ಷಗಳಿಂದ ತುಂಬಿದೆ. ಈ ಪಕ್ಷಗಳನ್ನು ಎರಡನೇ, ಮೂರನೇ ಮತ್ತು ನಾಲ್ಕನೇ ತಲೆಮಾರು ಮುನ್ನಡೆಸುತ್ತಿದೆ. ಆದರೆ, ಪ್ರಧಾನ ಮಂತ್ರಿ ಅವರು ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಮತ್ತು ದೇಶದ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಕುಟುಂಬ ರಾಜಕೀಯ: ಪ್ರಧಾನಿ ಮೋದಿ ಬಡವರು ಮತ್ತು ದೇಶದ ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದರೆ, ಇಂಡಿಯ ಮೈತ್ರಿಕೂಟದ ನಾಯಕರು ತಮ್ಮ ಮಕ್ಕಳನ್ನು ಪ್ರಧಾನಿ ಮತ್ತು ಮುಖ್ಯಮಂತ್ರಿ ಮಾಡಲು ಯೋಚಿಸುತ್ತಾರೆ ಎಂದು ಅವರು ಸೋನಿಯಾ ಗಾಂಧಿ, ಶರದ್ ಪವಾರ್, ಲಾಲು ಪ್ರಸಾದ್ ಮತ್ತು ಎಂಕೆ ಸ್ಟಾಲಿನ್ ಇತರರನ್ನು ಉಲ್ಲೇಖಿಸಿ ಹೇಳಿದರು.
ಬಿಜೆಪಿಯಲ್ಲಿ ಕುಟುಂಬ ಕೌಟುಂಬಿಕ ರಾಜಕಾರಣ ಇದ್ದಿದ್ದರೆ ಚಹಾ ಮಾರುವವನ ಮಗ ದೇಶದ ಪ್ರಧಾನಿಯಾಗುತ್ತಿರಲಿಲ್ಲ. ಎಲ್ಲಾ ಕುಟುಂಬಗಳ ʻರಾಜಕುಮಾರರುʼ ಮೋದಿ ವಿರುದ್ಧ ಒಗ್ಗೂಡಿದ್ದಾರೆ. ಒಂದು ಕಡೆ ಕುಟುಂಬ ನಡೆಸುವ ಪಕ್ಷಗಳು, ಮತ್ತೊಂದೆಡೆ ಬಡ ತಾಯಿಯ ಮಗ ಎಂದು ಹೇಳಿದರು.
ʻಈ ಹಿಂದೆ ಅಭಿವೃದ್ಧಿ ಪ್ರಕ್ರಿಯೆಯಿಂದ ಹೊರಗುಳಿದಿದ್ದ 60 ಕೋಟಿ ಬಡವರ ಜೀವನ ಮಟ್ಟವನ್ನು ಮೇಲಕ್ಕೆತ್ತಲು ಸರ್ಕಾರ ಕೆಲಸ ಮಾಡಿದೆ . ವಿರೋಧ ಪಕ್ಷಗಳು ನಿರಾಕರಣೆ ಮೋಡ್‌ನಲ್ಲಿವೆ. 370 ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ನಿಷೇಧ, ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣವನ್ನು ವಿರೋಧಸಲಿಕ್ಕಾಗಿಯೇ ವಿರೋಧಿಸುತ್ತಾರೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದಿಂದಾಗಿ ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲʼ ಎಂದರು.
ರಾಮ ರಾಜ್ಯ: ರಾಷ್ಟ್ರೀಯ ಸಮಾವೇಶದಲ್ಲಿ ರಾಮ ಮಂದಿರ ಕುರಿತು ನಿರ್ಣಯವನ್ನು ಅಂಗೀಕರಿಸಿತು. ಮಂದಿರ ʻರಾಮ ರಾಜ್ಯʼ ಸ್ಥಾಪನೆಗೆ ನಾಂದಿ ಹಾಡುತ್ತದೆ. ರಾಮ ಮಂದಿರ ಐತಿಹಾಸಿಕ ಮತ್ತು ಅದ್ಭುತವಾದ ಸಾಧನೆಯಾಗಿದೆ. ಸಮಾವೇಶವು ಪ್ರಧಾನಿಯವರ ನಾಯಕತ್ವವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ ಎಂದು ಅದು ಹೇಳಿದೆ. ʻಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಎಲ್ಲರಿಗೂ ನ್ಯಾಯಕ್ಕೆ ಕಾರಣವಾದ ಸಂವಿಧಾನವು ರಾಮರಾಜ್ಯದ ಆದರ್ಶಗಳಿಂದ ಪ್ರೇರಿತವಾಗಿದೆ. ಮಹಾತ್ಮ ಗಾಂಧಿಯವರ ಹೃದಯದಲ್ಲಿಯೂ ರಾಮರಾಜ್ಯದ ಕಲ್ಪನೆ ಇತ್ತುʼ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.