ಪ್ರತಿಪಕ್ಷಗಳಿಗೆ ಮಾರ್ಗಸೂಚಿಯೆಂಬುದೇ ಇಲ್ಲ:ಪ್ರಧಾನಿ
x

ಪ್ರತಿಪಕ್ಷಗಳಿಗೆ ಮಾರ್ಗಸೂಚಿಯೆಂಬುದೇ ಇಲ್ಲ:ಪ್ರಧಾನಿ

ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡ ಶತ್ರುಗಳು; ಇತರ ರಾಜ್ಯಗಳಲ್ಲಿ ಬಿಎಫ್‌ಎಫ್‌ಗಳು


ತಿರುವನಂತಪುರಂ,ಫೆ. ೨೭- ಕೇರಳದಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಬದ್ಧ ವೈರಿಗಳು. ಆದರೆ, ಇತರ ರಾಜ್ಯಗಳಲ್ಲಿ ಬಿಎಫ್‌ಎಫ್‌ಗಳು ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.

ಕೇರಳದ ರಾಜಧಾನಿಯ ಸೆಂಟ್ರಲ್ ಸ್ಟೇಡಿಯಂನಲ್ಲಿ ಬಿಜೆಪಿ ರಾಜ್ಯ ಘಟಕದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ʻಬಿಎಫ್‌ಎಫ್‌ʼ ಎಂದರೆ ʻಶಾಶ್ವತವಾಗಿ ಉತ್ತಮ ಸ್ನೇಹಿತರುʼ. ಇದು ಮಿಲೇನಿಯಲ್ಸ್ ಮತ್ತು ಜನರಲ್ ಝಡ್‌ನಲ್ಲಿ ಜನಪ್ರಿಯ ಪದ ಎಂದು ವಿವರಿಸಿದರು.

"ಪ್ರತಿಪಕ್ಷಗಳಿಗೆ ಮಾರ್ಗಸೂಚಿಯೆಂಬುದೇ ಇಲ್ಲ: ಪ್ರತಿಪಕ್ಷಗಳಿಗೆ ರಾಷ್ಟ್ರದ ಪ್ರಗತಿಗೆ ಅಗತ್ಯವಾದ ಮಾರ್ಗಸೂಚಿಯ ಕೊರತೆಯಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಅದರ ನಾಯಕರಿಗೆ ಗೊತ್ತಿದೆ. ಅದಕ್ಕಾಗಿಯೇ ಅವರು ನನ್ನನ್ನು ನಿಂದಿ ಸಲು ಮುಂದಾಗುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್, ಎಡ ಪಕ್ಷಗಳ ದ್ವಂದ್ವ: ʻಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಎಡ ಸರ್ಕಾರ ಫ್ಯಾಸಿಸ್ಟ್ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರತಿಯಾಗಿ ಕಮ್ಯುನಿಸ್ಟರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಆದರೆ, ಕೇರಳದ ಹೊರಗೆ ಇಂಡಿಯ ಒಕ್ಕೂಟದ ಸಭೆಗಳಲ್ಲಿ ಒಟ್ಟಿಗೆ ಕುಳಿತು ಸಮೋಸಾ ಮತ್ತು ಬಿಸ್ಕತ್‌ ತಿನ್ನುತ್ತಾರೆ, ಚಹಾ ಕುಡಿಯುತ್ತಾರೆ,ʼ ಎಂದು ಪ್ರಧಾನಿ ಹೇಳಿದರು. ʻತಿರುವನಂತಪುರದಲ್ಲಿ ಒಂದು ಮಾತು ಮತ್ತು ದೆಹಲಿಯಲ್ಲಿ ಬೇರೆಯದನ್ನು ಹೇಳುತ್ತಾರೆ. ಈ ದ್ರೋಹಕ್ಕೆ ಕೇರಳದ ಜನತೆ ತಕ್ಕ ಉತ್ತರ ನೀಡಲಿದ್ದಾರೆʼ ಎಂದರು.

ʻಮೋದಿಯುಡೆ ಗ್ಯಾರಂಟಿʼ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎರಡಂಕಿ ಸ್ಥಾನ ನೀಡಿ ಆಶೀರ್ವದಿಸಬೇಕೆಂದು ಪ್ರಧಾನಿ ಕೋರಿದರು. ʻಬಿಜೆಪಿ ರಾಜ್ಯವನ್ನು ವೋಟ್ ಬ್ಯಾಂಕ್ ಆಗಿ ನೋಡುವುದಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಂತೆ ಕೇರಳ ಕೂಡ 10 ವರ್ಷಗಳಲ್ಲಿ ಅಭಿವೃದ್ಧಿಯಿಂದ ಲಾಭ ಪಡೆದಿದೆ. ಕೇರಳದ ಜನರಿಗೆ ಅವರ ಕನಸುಗಳು ಮತ್ತು ನಿರೀಕ್ಷೆಗಳನ್ನು ನನಸಾಗಿಸಲು ಸಹಾಯ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುತ್ತದೆ. ದೇಶವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದು ಮತ್ತು ಬಡತನ-ಭ್ರಷ್ಟಾಚಾರವನ್ನು ತೊಡೆದುಹಾಕುವುದು ಮೋದಿಯುಡೆ ಗ್ಯಾರಂಟಿ (ಮೋದಿ ಅವರ ಖಾತರಿ)ʼ ಎಂದು ಅವರು ಹೇಳಿದರು.

ರಾಜ್ಯದಲ್ಲಿ 20 ಲೋಕಸಭೆ ಸ್ಥಾನಗಳಿವೆ.

Read More
Next Story