
ಹಿಂದಿ ಕವನ ಕಂಠಪಾಠ ಮಾಡಿಲ್ಲವೆಂದು ವಿದ್ಯಾರ್ಥಿಗೆ ಪೆಟ್ಟಿನ ಶಿಕ್ಷೆ ; ಶಿಕ್ಷಕ ಅಮಾನತು
ಶಾಲೆಯ ನಿಯಮಾವಳಿಯ ಪ್ರಕಾರ, ದೈಹಿಕ, ಮೌಖಿಕ ಅಥವಾ ಮಾನಸಿಕ ಹಿಂಸೆ ನಿಷಿದ್ಧವಾಗಿರುವುದರಿಂದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿದೆ.
ಹಿಂದಿ ಕವನವನ್ನು ಕಂಠಪಾಠ ಮಾಡಿ ಹೇಳಿಲ್ಲವೆಂದು ಒಂಭತ್ತನೇ ತರಗತಿಯ ವಿದ್ಯಾರ್ಥಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚೆನ್ನೈನ ಭವನ್ಸ್ ರಾಜಾಜಿ ವಿದ್ಯಾಶ್ರಮದ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ.
ಶಾಲೆಯ ಆಡಳಿತ ಮಂಡಳಿ ಫೆಬ್ರವರಿ 21ರಂದು ವಿಚಾರಣೆ ನಡೆಸಿ ಶಿಕ್ಷಕರನ್ನು ಅಮಾನತು ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಕಳೆದ ಶುಕ್ರವಾರ ತರಗತಿ ನಡೆಯುವಾ ವಿದ್ಯಾರ್ಥಿ ಹಿಂದಿ ಕವನ ಪಠಿಸಿರಲಿಲ್ಲ. ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಗೆ ಹೊಡೆದಿದ್ದರು. ವಿಷಯ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಬಂದಿತ್ತು ಶಿಕ್ಷಕರನನ್ನು ವಿಚಾರಣೆ ಮಾಡಿ ಬಳಿಕ ಅಮಾನತು ಮಾಡಲಾಗಿದೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣವು ಕೇವಲ ಪೆಟ್ಟು ತಿಂದ ವಿದ್ಯಾರ್ಥಿಯ ಪೋಷಕರು ಮತ್ತು ಶಿಕ್ಷಕರ ನಡುವಿನ ವಿಷಯವಷ್ಟೇ ಎಂದು ಅವರು ಹೇಳಿದ್ದಾರೆ.
ಭವನ್ಸ್ ರಾಜಾಜಿ ವಿದ್ಯಾಶ್ರಮದ ಸಿಬಿಎಸ್ಇ 9ನೇ ತರಗತಿಯ ವಿದ್ಯಾರ್ಥಿಯ ಪೋಷಕರು ಶಾಲಾ ಆಡಳಿತದ ಮುಂದಿಟ್ಟಿದ್ದರು. ಈ ಶಾಲೆಯು ವಿದ್ಯಾರ್ಥಿಗಳನ್ನು ಹಿಂಸಿಸುವ ನೀತಿಯನ್ನು ವಿರೋಧಿಸುತ್ತದೆ. ಹೀಗಾಗಿ ಈ ಪ್ರಕರಣ ಶಾಲೆಯ ನೀತಿಗೆ ವಿರುದ್ಧ ಎಂದು ಅವರು ವಾದಿಸಿದ್ದರು.
ಶಾಲೆಯ ನಿಯಮಾವಳಿಯ ಪ್ರಕಾರ, ದೈಹಿಕ, ಮೌಖಿಕ ಅಥವಾ ಮಾನಸಿಕ ಹಿಂಸೆ ನಿಷಿದ್ಧವಾಗಿರುವುದರಿಂದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿದೆ.