CAFE BLAST | ಶಂಕಿತ ನಾಲ್ವರು ಪೊಲೀಸ್‌ ವಶಕ್ಕೆ; ಸ್ಫೋಟಕ್ಕೆ ನಡೆದಿತ್ತೆ ಮೂರು ತಿಂಗಳ ತಯಾರಿ?
x

CAFE BLAST | ಶಂಕಿತ ನಾಲ್ವರು ಪೊಲೀಸ್‌ ವಶಕ್ಕೆ; ಸ್ಫೋಟಕ್ಕೆ ನಡೆದಿತ್ತೆ ಮೂರು ತಿಂಗಳ ತಯಾರಿ?


ಬೆಂಗಳೂರು: ಶುಕ್ರವಾರ ಮಧ್ಯಾಹ್ನ ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಧಾರವಾಡ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿರೋದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, 'ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿನ ಗಾಯಾಳುಗಳು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿರುವುದುದಿಲ್ಲ' ಎಂದು ತಿಳಿಸಿದ್ದಾರೆ.

ಬಾಂಬ್ ಬ್ಲಾಸ್ಟ್‌ಗೆ 3 ತಿಂಗಳಿನಿಂದ ನಡೆದಿತ್ತಂತೆ ತಯಾರಿ:

ಬಾಂಬ್ ಬ್ಲಾಸ್ಟ್ ಆರೋಪಿ ವೆಲ್‌ ಟ್ರೈನ್ಡ್‌ ಬಾಂಬರ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಈ ಆರೋಪಿ ತನ್ನ ಸ್ಥಳದಿಂದ 'ಬಿಎಂಟಿಸಿ ವಜ್ರ 500ಡಿ' ಬಸ್‌ನಲ್ಲಿ ಬಂದು 400 ಮೀ. ದೂರದಲ್ಲಿ ಇಳಿದು ನಂತರ ಕೆಫೆಗೆ ಬಂದು ಬಾಂಬ್ ಇಟ್ಟು ಬ್ಲ್ಯಾಸ್ಟ್‌ ಮಾಡಿದ್ದಾನೆ. ಆದರೆ, ಈತ ಬಾಂಬ್‌ ಬ್ಲ್ಯಾಸ್ಟ್‌ಗೆ ಬರೋಬ್ಬರಿ 3 ತಿಂಗಳಿಂದ ತಯಾರಿ ಮಾಡಿಕೊಂಡಿದ್ದನು. ರಾಮೇಶ್ವರಂ ಕೆಫೆಗೆ ಬಂದಿದ್ದ ಶಂಕಿತ ಯಾರೆಂಬ ಮಾಹಿತಿ ಕಲೆ ಹಾಕುತ್ತಿದ್ದಾಗ ಬೆಂಗಳೂರಿಗೆ ಬಂದಿದ್ದವನು ವೆಲ್ ಟ್ರೈನೈಡ್ ಬಾಂಬರ್ ಎಂಬ ಸುಳಿವು ಸಿಕ್ಕಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರ ಕೆಲವರ ಆಜ್ಞೆಯ ಮೇರೆಗೆ ಬಂದು ಸ್ಫೋಟ ಮಾಡಿದ್ದಾನೆ. ನಂತರ, ಕೆಲವರ ಆಜ್ಞೆಯ ನಂತರ ತನ್ನ ಕೆಲಸ ಮುಗಿಸಿ ವಾಪಸ್ ಆಗಿದ್ದಾನೆ. ಇನ್ನು ರಾಮೇಶ್ವರಂ ಕೆಫೆಗೆ ಬಾಂಬ್ ಇಡಲು ಮೂರು ತಿಂಗಳ ತಯಾರಿ ಕೂಡ ಮಾಡಿಕೊಂಡಿದ್ದಾನೆ.

Read More
Next Story