Cafe Blast Case | ಮಾಸ್ಟರ್‌ ಮೈಂಡ್‌ ಮತೀನ್‌ ನಿವೃತ್ತ ಯೋಧನ ಮಗ!
x

Cafe Blast Case | ಮಾಸ್ಟರ್‌ ಮೈಂಡ್‌ ಮತೀನ್‌ ನಿವೃತ್ತ ಯೋಧನ ಮಗ!

ನಿವೃತ್ತ ಯೋಧನ ಪುತ್ರನಾಗಿರುವ ಅಬ್ದುಲ್‌ ಮತೀನ್‌ ತಹಾ ಈ ಹಿಂದೆ ಅನೇಕ ದುಷ್ಕೃತ್ಯಗಳಿಗೆ ಮಾಸ್ಟರ್‌ ಮೈಂಡ್‌ ಆಗಿದ್ದ.ಮಂಗಳೂರು ಗೋಡೆ ಬರಹ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ತುಂಗಾ ನದಿ ಟ್ರಯಲ್ ಬಾಂಬ್ ಸ್ಫೋಟದ ಮಾಸ್ಟರ್​​ ಮೈಂಡ್ ಆಗಿದ್ದಾನೆ. ಉಗ್ರ ಮತೀನ್​ ತಂದೆ, ನಿವೃತ್ತ ಯೋಧ ಮನ್ಸೂರ್ ಅವರು ದೇಶಕ್ಕಾಗಿ ಸೇವೆ ಸಲ್ಲಿಸಿದರ,, ಮಗ ಮತೀನ್ ತಾಹಾ ದೇಶ ದ್ರೋಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಬಾಂಬರ್‌ ಹಾಗೂ ಮಾಸ್ಟರ್‌ ಮೈಂಡ್‌ ಅನ್ನು ಎನ್‌ಐಎ ಅಧಿಕಾರಿಗಳು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತೆ ಮುನ್ನೆಲೆಗೆ ಬಂದಿದೆ. ಏಕೆಂದರೆ ಬಂಧಿತ ಮುಸಾವೀರ್‌ ಹುಸೇನ್‌ ಶಜೀಬ್‌ ಹಾಗೂ ಅಬ್ದುಲ್‌ ಮತೀನ್‌ ತಹಾ ಇಬ್ಬರು ಕೂಡ ತೀರ್ಥಹಳ್ಳಿಯವರು. ಬಂಧಿತ​ ಉಗ್ರ ಅಬ್ದುಲ್ ಮತೀನ್ ತಾಹಾ ನಿವೃತ್ತ ಯೋಧನ ಪುತ್ರ ಎನ್ನುವುದು ತಿಳಿದುಬಂದಿದೆ.

ನಿವೃತ್ತ ಯೋಧನ ಪುತ್ರನಾಗಿರುವ ಅಬ್ದುಲ್‌ ಮತೀನ್‌ ತಹಾ ಈ ಹಿಂದೆ ಅನೇಕ ದುಷ್ಕೃತ್ಯಗಳಿಗೆ ಮಾಸ್ಟರ್‌ ಮೈಂಡ್‌ ಆಗಿದ್ದ.ಮಂಗಳೂರು ಗೋಡೆ ಬರಹ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ತುಂಗಾ ನದಿ ಟ್ರಯಲ್ ಬಾಂಬ್ ಸ್ಫೋಟದ ಮಾಸ್ಟರ್​​ ಮೈಂಡ್ ಆಗಿದ್ದಾನೆ. ಉಗ್ರ ಮತೀನ್​ ತಂದೆ, ನಿವೃತ್ತ ಯೋಧ ಮನ್ಸೂರ್ ಅವರು ದೇಶಕ್ಕಾಗಿ ಸೇವೆ ಸಲ್ಲಿಸಿದರ,, ಮಗ ಮತೀನ್ ತಾಹಾ ದೇಶ ದ್ರೋಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅಬ್ದುಲ್ ಮತೀನ್ ತಾಹಾ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾನೆ. ಬೆಂಗಳೂರಿನಲ್ಲಿ ‌ಐಸಿಸ್ ಉಗ್ರರ ಜೊತೆ ನಂಟು ಬೆಳೆಸಿಕೊಂಡಿದ್ದಾನೆ. ಅಲ್ಲದೆ ತೀರ್ಥಹಳ್ಳಿಯ ತನ್ನ ಕೆಲವು ಸ್ನೇಹಿತರನ್ನು ಉಗ್ರ ಸಂಘಟನೆಗೆ ‌ಬಳಸಿಕೊಂಡಿದ್ದಾನೆ ಎಂಬ ಆರೋಪಗಳನ್ನು ಹೊತ್ತಿದ್ದಾನೆ.

ಉಗ್ರ ಅಬ್ದುಲ್ ಮತೀನ್ ತಾಹಾ ಕಳೆದ 4-5 ವರ್ಷದಿಂದ ನಾಪತ್ತೆಯಾಗಿದ್ದನು. ಉಗ್ರ ಸಂಘಟನೆ ಜೊತೆ ಸೇರಿಕೊಂಡ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಸ್ಥಳೀಯ ಪೊಲೀಸರು, ಆತನಿಗಾಗಿ ಹುಡುಕಾಡಲು ಆರಂಭಿಸಿದ್ದಾರೆ. ಅಬ್ದುಲ್ ಮತೀನ್ ತಾಹಾ ತೀರ್ಥಹಳ್ಳಿಯ ಶಾರೀಖ್, ಮುಸಾವೀರ್ ಹುಸೇನ್ ಸಹಾಯದೊಂದಿಗೆ ‌ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಅಲ್ಲದೆ ತೀರ್ಥಹಳ್ಳಿಯ ಯುವಕರನ್ನು ಉಗ್ರ ಚಟುವಟಿಕೆಗೆ ಬೆಳಸಿಕೊಂಡಿದ್ದನು. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಉಗ್ರ ಚಟುವಟಿಕೆ ಆಪರೇಟ್ ಮಾಡುತ್ತಿದ್ದನು ಎನ್ನಲಾಗಿದೆ.

ಉಗ್ರ ಅಬ್ದುಲ್ ಮತೀನ್ ತಾಹಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆಯ ನಿವಾಸಿಯಾಗಿದ್ದಾನೆ. ಉಗ್ರ ಅಬ್ದುಲ್ ಮತೀನ್ ತಾಹಾ ತಂದೆ ಮನ್ಸೂರ್​ ‌22 ವರ್ಷಕ್ಕೂ ಹೆಚ್ಚು ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.ತಮ್ಮ ಪುತ್ರ ಅಬ್ದುಲ್ ಮತೀನ್ ತಾಹಾ ಉಗ್ರ ಎನ್ನುವ ಸುದ್ದಿ ತಿಳಿದು ತಂದೆ ಮನ್ಸೂರ್ ಆಘಾತಕ್ಕೆ ಒಳಗಾಗಿದ್ದರು. ಒಬ್ಬ ಯೋಧನ ಮಗ ಉಗ್ರನಾದ ಬಗ್ಗೆ ನೋವು ಪಟ್ಟಿದ್ದರು. ನನ್ನ ‌ಮಗ‌ ಉಗ್ರ ಅಂತ ಸಾಬೀತಾದರೆ ಗಲ್ಲಿಗೇರಿಸಿ ಅಂತ ತಂದೆ ಮನ್ಸೂರ್ ಹೇಳಿದ್ದರು. ನಿವೃತ್ತ ಯೋಧ ಮನ್ಸೂರ್​ ಕಳೆದ ವರ್ಷ ಅನಾರೋಗ್ಯದ ಹಿನ್ನೆಲೆಯಲ್ಲಿ ‌ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ಮೃತಪಟ್ಟಾಗಲಾದರೂ ಅಬ್ದುಲ್ ಮತೀನ್ ತಾಹಾ ಊರಿಗೆ ಬರಬಹುದು ಎಂದು ಪೊಲೀಸರು ಕಾದು ಕುಳಿತಿದ್ದರು. ಆದರೆ ಆತ ಬರಲೇ ಇಲ್ಲ. ಇದೀಗ ರಾಮೇಶ್ವರಂ ಕೆಫೆ ಬಾಂಬ ಸ್ಫೋಟ ಪ್ರಕರಣದಲ್ಲಿ ಎನ್​ಐಎ ಅಧಿಕಾರಿಗಳು ಕೊಲ್ಕತ್ತಾದಲ್ಲಿ ಉಗ್ರ ಅಬ್ದುಲ್ ಮತೀನ್ ತಾಹಾನನ್ನು ಬಂಧಿಸಿದ್ದಾರೆ. ಆತನ ಜೊತೆಗೆ ಇನ್ನು ಹಲವರು ಸ್ಲೀಪರ್ ಸೆಲ್ ಆಗಿ ಕೆಲಸ ಮಾಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಅಬ್ದುಲ್ ಮತೀನ್ ತಾಹಾ ಹಾಗೂ ಬಾಂಬರ್​ ಮುಸಾವೀರ್ ಹುಸೇನ್​​ನನ್ನು ಎನ್​ಐಎ ತೀರ್ಥಹಳ್ಳಿಗೆ ಕರೆತರುವ ಸಾಧ್ಯತೆ ಇದೆ. ತೀರ್ಥಹಳ್ಳಿಯಲ್ಲಿ ಹಲವರನ್ನು ವಿಚಾರಣೆಗೆ‌ ಒಳಪಡಿಸುವ ಸಂಭವವೂ ಇದೆ.

Read More
Next Story