ಬೆಂಗಳೂರಿನ ಮೂರು ಪ್ರತಿಷ್ಠಿತ ಹೊಟೇಲ್‌ಗೆ ಹುಸಿ ʻಬಾಂಬ್‌ʼ ಕರೆ
x
ಬೆಂಗಳೂರಿನ ಪ್ರತಿಷ್ಟಿತ ಹೊಟೇಲ್‌ಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ.

ಬೆಂಗಳೂರಿನ ಮೂರು ಪ್ರತಿಷ್ಠಿತ ಹೊಟೇಲ್‌ಗೆ ಹುಸಿ ʻಬಾಂಬ್‌ʼ ಕರೆ

ಬೆಂಗಳೂರಿನ ದಿ ಒಟೆರಾ ಸೇರಿದಂತೆ ಮೂರು ಪ್ರತಿಷ್ಠಿತ ಹೊಟೇಲ್‌ಗಳಿಗೆ ಗುರುವಾರ (ಮೇ 23) ಬಾಂಬ್ ಬೆದರಿಕೆಯ ಇ- ಮೇಲ್ ಬಂದಿದ್ದು, ಮಧ್ಯರಾತ್ರಿ 2 ಗಂಟೆಗೆ ಬಾಂಬ್​ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.


Click the Play button to hear this message in audio format

ಬೆಂಗಳೂರಿನ ʼದಿ ಒಟೆರಾʼ ಸೇರಿದಂತೆ ಮೂರು ಪ್ರತಿಷ್ಠಿತ ಹೊಟೇಲ್‌ಗಳಿಗೆ ಗುರುವಾರ (ಮೇ 23) ಬಾಂಬ್ ಬೆದರಿಕೆಯ ಇ- ಮೇಲ್ ಬಂದಿದ್ದು, ಮಧ್ಯರಾತ್ರಿ 2 ಗಂಟೆಗೆ ಬಾಂಬ್​ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರಮುಖ ಒಟೆರಾ ಹೋಟೆಲ್ ಸೇರಿದಂತೆ ಬೆಂಗಳೂರಿನ ಮೂರು ಹೋಟೆಲ್‌ಗಳಿಗೆ ಗುರುವಾರ ಮುಂಜಾನೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ. ಬೆಳಗ್ಗೆ ಸುಮಾರು 2 ಗಂಟೆಗೆ ಇ ಮೇಲ್ ಗಳು ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇ ಮೇಲ್ ಬಂದ ತಕ್ಷಣವೇ ಅಲರ್ಟ್‌ಗೊಂಡಿದ್ದ ಸಿಬಂದಿ ಸ್ಥಳೀಯ ಪೊಲೀಸ್ ಇನ್ನಿತರ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಒಟೆರಾ ಹೋಟೆಲ್‌ನಲ್ಲಿ ಅತ್ಯಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದರು. ಬಳಿಕ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಆರಂಂಭಿಸಿದೆ. ಅಧಿಕಾರಿಗಳು ಸಹ ಸ್ಥಳದಲ್ಲಿದ್ದು, ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಪೊಲೀಸರು, ಅದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಘೋಷಿಸಿದರು. ಜೊತೆಗೆ ಈ ಹೋಟೆಲ್‌ಗಳಲ್ಲಿ ಯಾವುದೇ ಸ್ಪೋಟಕ, ಬಾಂಬ್ ನಂತಹ ವಸ್ತುಗಳು ಪತ್ತೆ ಆಗಿಲ್ಲ ಎಂದು ಅವರು ತಿಳಿಸಿದ್ದು, ಹೋಟೆಲ್‌ನಲ್ಲಿ ತಂಗಿದ್ದವರು, ಹೋಟೆಲ್ ಸಿಬ್ಬಂದಿ ಮತ್ತು ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಹಿಂದೆ ʼದಿ ರಾಮೇಶ್ವರಂ ಕೆಫೆʼಯಲ್ಲಿ ಬಾಂಬ್ ಇಟ್ಟು ಸ್ಪೋಟಿಸಲಾಗಿತ್ತು. ಅದಾದ ಬಳಿಕ ಇಂತಹ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚಾಗಿದೆ. ಮೇ 13ರಂದು ಕೆಂಪಾಪುರದ ಜೈನ್ ಹೆರಿಟೇಜ್ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಅದರ ಮರುದಿನವೇ ಬೆಂಗಳೂರು ಕನಕಪುರ ರಸ್ತೆ ಸೋಮನಹಳ್ಳಿ ಬಳಿಯ ಈಡಿಫೈ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಕಳೆದ ತಿಂಗಳು ಜಾಲಹಳ್ಳಿ ಠಾಣೆ ವ್ಯಾಪ್ತಿಯ ಎಚ್‌ಎಂಟಿ ಮೈದಾನ ಬಳಿಯ ಕದಂಬ ಹೋಟೆಲ್ ಸುತ್ತಮುತ್ತ ಬಾಂಬ್ ಇರಿಸಲಾಗಿದೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಬಂದಿತ್ತು. ಪೊಲೀಸ್ ಪರಿಶೀಲನೆಯ ಬಳಿಕ ಈ ಎಲ್ಲಾ ಕರೆಗಳು ಹುಸಿ ಬೆದರಿಕೆ ಎಂಬುದು ತಿಳಿದುಬಂದಿತ್ತು.

Read More
Next Story