ಬಿಜೆಪಿ ಹಿಸ್ಸಾರ್ ಸಂಸದ ಕಾಂಗ್ರೆಸ್ ಸೇರ್ಪಡೆ
ಹಿಸಾರ್, ಮಾ.10- ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಎಕ್ಸ್ನಲ್ಲಿ ರಾಜೀನಾಮೆ ಘೋಷಿಸಿದ ನಂತರ ಅವರು ನವದೆಹಲಿಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸವನ್ನು ತಲುಪಿ ವಿರೋಧ ಪಕ್ಷಕ್ಕೆ ಸೇರಿದರು. ಅವರು ಬಿಜೆಪಿ ನಾಯಕ ಬಿರೇಂದರ್ ಸಿಂಗ್ ಅವರ ಪುತ್ರ ಹಾಗೂ ಪ್ರಮುಖ ಜಾಟ್ ನಾಯಕ ಸರ್ ಛೋಟು ರಾಮ್ ಅವರ ಮೊಮ್ಮಗ.
ʻನಾನು ಬಲವಾದ ರಾಜಕೀಯ ಕಾರಣಗಳಿಂದಾಗಿ ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪಕ್ಷ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಶಾ ಅಮಿತ್ ಶಾ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆʼ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ. ಅವರು ಕಾಂಗ್ರೆಸ್ ಸೇರಿದ ವೇಳೆ ಅಜಯ್ ಮಾಕನ್, ಮುಕುಲ್ ವಾಸ್ನಿಕ್ ಮತ್ತು ದೀಪಕ್ ಬಬಾರಿಯಾ ಉಪಸ್ಥಿತರಿದ್ದರು.
ಹಿಸಾರ್ ಅಭ್ಯರ್ಥಿ?: ಅವರು ಹಿಸಾರ್ನಿಂದ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ದುಷ್ಯಂತ್ ಚೌಟಾಲಾ ಮತ್ತು ಆಗ ಕಾಂಗ್ರೆಸ್ನಲ್ಲಿದ್ದ ಭವ್ಯಾ ಬಿಷ್ಣೋಯ್ ಅವರನ್ನು ಸೋಲಿಸಿ, ಹಿಸಾರ್ ಲೋಕಸಭೆ ಸ್ಥಾನವನ್ನು ಗೆದ್ದಿದ್ದರು.