ಅಶ್ವಿನ್ : 100ನೇ ಟೆಸ್ಟ್ ನಲ್ಲಿ ವಿಶ್ವದಾಖಲೆ, ವಿಶಿಷ್ಟ ಸಾಧನೆ
x
ಭಾರತದ ರವಿಚಂದ್ರನ್ ಅಶ್ವಿನ್ ಅವರು ಐದನೇ ಟೆಸ್ಟ್‌ನ 3 ನೇ ದಿನದಂದು ಐದನೇ ವಿಕೆಟ್‌ ಪಡೆದಾಗ ಚೆಂಡನ್ನು ತೋರಿಸಿದರು

ಅಶ್ವಿನ್ : 100ನೇ ಟೆಸ್ಟ್ ನಲ್ಲಿ ವಿಶ್ವದಾಖಲೆ, ವಿಶಿಷ್ಟ ಸಾಧನೆ

ಭಾರತಕ್ಕೆ ಇನ್ನಿಂಗ್ಸ್‌ ಮತ್ತು 64 ರನ್‌ ಜಯ


ಧರ್ಮಶಾಲಾ,ಮಾ.9- ರವಿಚಂದ್ರನ್ ಅಶ್ವಿನ್ ಅವರು ತಮ್ಮ 100 ನೇ ಟೆಸ್ಟ್‌ನಲ್ಲಿ ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಶನಿವಾರ (ಮಾರ್ಚ್ 9) ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಭಾರತದ ಇನ್ನಿಂಗ್ಸ್ ಮತ್ತು 64 ರನ್‌ಗಳ ಜಯದಲ್ಲಿ ವಿಶ್ವದಾಖಲೆ ಮಾಡಿದ್ದಾರೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಪಿಸಿಎ) ಸ್ಟೇಡಿಯಂನಲ್ಲಿ ನಡೆದ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅವರ ಐದು ವಿಕೆಟ್ ಗಳಿಕೆ ಸಾಧನೆಯಿಂದ ಭಾರತ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು.

ವಿಶ್ವ ದಾಖಲೆ:

ಅಶ್ವಿನ್ ಧರ್ಮಶಾಲಾದಲ್ಲಿ 9/128 ಸಾಧನೆ ಮಾಡಿದದರು. 2011ರಲ್ಲಿ ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಆಡಿದ ಅವರು, 100 ನೇ ಟೆಸ್ಟ್‌ ನಲ್ಲಿ ಐದು ವಿಕೆಟ್ ಕಬಳಿಸಿದ ಮೊದಲ ಬೌಲರ್ ಆಗಿದ್ದಾರೆ.

ಮತ್ತೊಂದು ವಿಶಿಷ್ಟ ಸಾಧನೆಯೆಂದರೆ, ಅವರು ಮೊದಲ ಮತ್ತು 100 ನೇ ಟೆಸ್ಟ್ ಎರಡರಲ್ಲೂ ಒಂದೇ ರೀತಿಯ ಬೌಲಿಂಗ್ ದಾಖಲೆ ಹೊಂದಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ 9/128 (3/81, 6/47) ಹಾಗೂ 100 ನೇ ಟೆಸ್ಟ್‌ನಲ್ಲಿ ಅದೇ ಅಂಕಿಅಂಶ (4/51, 5/77) ಹೊಂದಿದ್ದಾರೆ.

ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ಅವರೊಂದಿಗೆ ಚೊಚ್ಚಲ ಮತ್ತು 100 ನೇ ಟೆಸ್ಟ್‌ನಲ್ಲಿ ಐದು ವಿಕೆಟ್ ಕಬಳಿಸಿದ ನಾಲ್ಕನೇ ಬೌಲರ್ ಅಶ್ವಿನ್. ಅವರು ಕುಂಬ್ಳೆ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ಐದು ವಿಕೆಟ್ (36) ಪಡೆದ ಭಾರತೀಯ ಟೆಸ್ಟ್ ದಾಖಲೆ ಹೊಂದಿದ್ದಾರೆ.

ಅಶ್ವಿನ್ ಹೇಳಿದ್ದೇನು?: ಶ್ರೇಷ್ಠ ಬೌಲರ್‌ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಅಶ್ವಿನ್, 100 ಟೆಸ್ಟ್‌ಗಳಲ್ಲಿ 516 ವಿಕೆಟ್‌ ಗಳಿಸಿದ್ದಾರೆ. ಅಲ್ಲದೆ, ಐದು ಟೆಸ್ಟ್ ಶತಕ ಹಾಗೂ 3,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಧರ್ಮಶಾಲಾದಲ್ಲಿ ಸರಣಿ ಗೆಲುವಿನ ನಂತರ ಮಾತನಾಡಿದ ಅಶ್ವಿನ್, ʻತುಂಬ ಸಂತೋಷವಾ ಗಿದೆ. ನನ್ನ ಭಾವನೆಗಳನ್ನು ಮುಚ್ಚಿಡಲು ಸಾಧ್ಯವಾಗುತ್ತಿಲ್ಲ.100ನೇ ಟೆಸ್ಟ್‌ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ವಿಕೆಟ್‌ ಗಳಿಸಿ, ಟೆಸ್ಟ್ ಗೆಲ್ಲುವುದಕ್ಕಿಂತ ಬೌಲರ್‌ಗೆ ಇನ್ನೇನು ಬೇಕಿದೆ?"

ʻಸರಣಿಯಲ್ಲಿ ವಿಭಿನ್ನ ವಿಧಾನ, ವೇಗ ಮತ್ತು ಎಸೆತಗಳನ್ನು ಪ್ರಯತ್ನಿಸಿದೆ. ಇಂಡಿಯದಲ್ಲಿ ಇಂಥ ಕೌಶಲ ಬೇಕಾಗುತ್ತದೆ. ಚೆಂಡು ಹೇಗೆ ಎಸೆಯಲ್ಪಟ್ಟಿತು ಎಂದು ಸಂತೋಷವಾಗಿದೆ. ಕ್ರಿಕೆಟ್ ಬುದ್ಧಿ ಬಳಸಿ ಆಡುವ ಆಟ. ಹೊಸ ಚೆಂಡು ಮೇಲ್ಮೈಯಲ್ಲಿ ಪುಟಿಯುತ್ತಿರುವುದರಿಂದ ಇದೆಲ್ಲ ಸಂಭವಿಸುತ್ತಿದೆ ಎಂದುಕೊಂಡಿದ್ದೇನೆʼ ಎಂದು ಹೇಳಿದರು.

Read More
Next Story