6ನೇ ಬಾರಿಯ ಸಮನ್ಸ್‌ ಗೂ ಡೋಂಟ್‌ ಕೇರ್:‌ ಇಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು
x

6ನೇ ಬಾರಿಯ ಸಮನ್ಸ್‌ ಗೂ ಡೋಂಟ್‌ ಕೇರ್:‌ ಇಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು

ಕೇಜ್ರಿವಾಲ್‌ಗೆ ಪದೇ ಪದೇ ಸಮನ್ಸ್ ಕಳುಹಿಸುವ ಬದಲು ನ್ಯಾಯಾಲಯದ ಆದೇಶಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಕಾಯಬೇಕು ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ.


ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ವಿಚಾರಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೋಮವಾರ (ಫೆಬ್ರವರಿ 19) ಹಾಜರಗುವಂತೆ ಸಮನ್ಸ್‌ ಜಾರಿ ಮಾಡಿತ್ತು ಆದರೆ ಅವರು ಈ ಬಾರಿಯೂ ಹಾಜರಾಗಿಲ್ಲ. ಈ ಸಮನ್ಸ್ ಅನ್ನು "ಕಾನೂನುಬಾಹಿರ" ಎಂದು ಆಮ್‌ ಆದ್ಮಿ ಪಕ್ಷ ಬಣ್ಣಿಸಿದೆ.

ಕೇಜ್ರಿವಾಲ್‌ ಗೆ ಪದೇ ಪದೇ ಸಮನ್ಸ್ ಕಳುಹಿಸುವ ಬದಲು ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯಬೇಕು ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ.

ಕೇಜ್ರಿವಾಲ್ ಅವರಿಗೆ ಇಡಿ ಆರು ಬಾರಿ ಸಮನ್ಸ್ ನೀಡಿದೆ ಆದರೆ ಕೇಜ್ರಿವಾಲ್ ಅವರು ತನಿಖೆಗೆ ಹಾಜರಾಗಿಲ್ಲ ಹಾಗಾಗಿ ಈ ತಿಂಗಳ ಆರಂಭದಲ್ಲಿ ಇಡಿ ನಗರ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ಬಗ್ಗೆ ದೆಹಲಿ ವಿಧಾನಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರೀವಾಲ್‌ ಅವರು, ʼʼಇಡಿಗೆ ಕಾನೂನಿನ ಪ್ರಕಾರ ಉತ್ತರ ನೀಡಲಾಗುತ್ತಿದೆ. ನಾವು ಕಾನೂನಿನ ಪ್ರಕಾರ ಉತ್ತರಿಸುತ್ತಿದ್ದೇವೆ, ಈಗ, ಇಡಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದೆ ಮತ್ತು ಅವರು ಯಾವುದೇ ಹೊಸ ಸಮನ್ಸ್ ನೀಡುವ ಮೊದಲು ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯಬೇಕು" ಎಂದು ಅವರು ಹೇಳಿದರು.

ಕೇಂದ್ರೀಯ ಸಂಸ್ಥೆ ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಶನಿವಾರ ರೂಸ್ ಅವೆನ್ಯೂ ನ್ಯಾಯಾಲಯವು ಕೇಜ್ರಿವಾಲ್‌ಗೆ ಹಾಜರಾಗುವಂತೆ ಆದೇಶ ನೀಡಿತ್ತು.

ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವು ಫೆಬ್ರವರಿ 15 ರಂದು ಪ್ರಾರಂಭವಾಗಿದೆ ಮತ್ತು ಮಾರ್ಚ್ ಮೊದಲ ವಾರದವರೆಗೆ ಮುಂದುವರಿಯುತ್ತದೆ ಎಂದು ಕೇಜ್ರಿವಾಲ್ ಅವರ ವಕೀಲರು ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

ಮಾರ್ಚ್ 16 ರಂದು ಮುಂದಿನ ವಿಚಾರಣೆಯ ದಿನಾಂಕದಂದು ಅವರು ದೈಹಿಕವಾಗಿ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎಂದು ವಕೀಲರು ಹೇಳಿದ್ದಾರೆ.

Read More
Next Story