ಅನಂತ್ ಅಂಬಾನಿ-ರಾಧಿಕಾ ವಿವಾಹಪೂರ್ವ ಸಂಭ್ರಮ: ಮೂವರು ಖಾನ್ ಗಳಿಂದ   ನಾಟು ನಾಟು ನೃತ್ಯ
x
ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್ , ಅನಂತ್ ಅಂಬಾನಿ ಮತ್ತು ಆಕಾಶ್ ಅಂಬಾನಿ

ಅನಂತ್ ಅಂಬಾನಿ-ರಾಧಿಕಾ ವಿವಾಹಪೂರ್ವ ಸಂಭ್ರಮ: ಮೂವರು ಖಾನ್ ಗಳಿಂದ 'ನಾಟು ನಾಟು' ನೃತ್ಯ


ಬಾಲಿವುಡ್‌ನ ಮೂವರು ಖಾನ್‌ಗಳು -- ಶಾರುಖ್, ಸಲ್ಮಾನ್ ಮತ್ತು ಅಮೀರ್ - ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದ ಎರಡನೇ ದಿನದಂದು ವೇದಿಕೆ ಮೇಲೆ ನೃತ್ಯ ಪ್ರದರ್ಶಿಸಿದರು. ಆರ್‌ಆರ್‌ಆರ್‌ ನ ʻನಾಟು ನಾಟುʼ ಹಾಡಿಗೆ ಹೆಜ್ಜೆ ಹಾಕಿದರು.

ಜಾಮ್‌ನಗರ ನಗರದ ಸಮೀಪದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಪೆಟ್ರೋಲಿಯಂ ಸಂಸ್ಕರಣಾಗಾರದ ಸಮೀಪವಿರುವ ವಸತಿ ಟೌನ್‌ ಶಿಪ್‌ನಲ್ಲಿ ಚಲನಚಿತ್ರ ತಾರೆಯರ ದಂಡು ಆಗಮಿಸಿತ್ತು.

ʻಆರ್‌ ಆರ್‌ ಆರ್‌ʼ ಸ್ಟಾರ್ ರಾಮ್ ಚರಣ್ ಅವರ ಸಹಾಯದಿಂದ ʻನಾಟು ನಾಟುʼ ಹಾಡಿಗೆ ಹೆಜ್ಜೆ ಹಾಕಲು ಶಾರುಖ್, ಸಲ್ಮಾನ್ ಮತ್ತು ಅಮೀರ್ ಮುಂದಾದರು.ಆದರೆ, ಅದು ಅಂದುಕೊಂಡಂತೆ ನಡೆಯದಿದ್ದಾಗ, ಸಲ್ಮಾನ್ ಅವರು ʻಮುಜ್ಸೆ ಶಾದಿ ಕರೋಗಿʼ ಚಿತ್ರದ ಹಿಟ್ ಹಾಡು ʻಜೀನೆ ಕೆ ಹೈ ಚಾರ್ ದಿನ್ʼ ಗೆ ನರ್ತಿಸಿದಾಗ, ಅಮೀರ್ ಮತ್ತು ಶಾರುಖ್ ಅವರ ಹೆಜ್ಜೆಗಳನ್ನು ನಕಲು ಮಾಡಿದರು.

ಆನಂತರ, ಅಮೀರ್ ಮತ್ತು ಶಾರುಖ್ ಅವರ ಹಾಡುಗಳಾದ ʻಮಸ್ತಿ ಕಿ ಪಾಠಶಾಲಾʼ (ರಂಗ್ ದೇ ಬಸಂತಿ), ಮತ್ತು ʻಚೈಯ್ಯಾ ಚೈಯಾ ʼ(ದಿಲ್ ಸೆ) ಗೆ ಮೂವರೂ ಹೆಜ್ಜೆ ಹಾಕಿದರು. ಆನಂತರ ಖಾನ್‌ ಜೋಡಿ ʻನಾಟು ನಾಟುʼ ಹಿಂದಿ ಆವೃತ್ತಿಯಾದ ʻನಾಚೋ ನಾಚೋʼ ಗೆ ನೃತ್ಯ ಮಾಡಿತು ಮತ್ತು ಶಾರುಖ್ ಅವರ ತೆರೆದ ತೋಳುಗಳ ಭಂಗಿಯನ್ನು ಮರುಸೃಷ್ಟಿಸಿದರು.

ಅಂಬಾನಿ ಕುಟುಂಬದ ʻತೀನ್ ದೇವಿಯಾನ್ʼ,ಕೋಕಿಲಾಬೆನ್ ಧೀರೂಭಾಯಿ ಅಂಬಾನಿ, ಪೂರ್ಣಿಮಾ ದಲಾಲ್ (ನೀತಾ ಅಂಬಾನಿ ತಾಯಿ), ಮತ್ತು ದೇವಯಾನಿ ಖಿಮ್ಜಿ, ಅವರನ್ನು ಪರಿಚಯಿಸಿದ ಶಾರೂಖ್‌, ʻಜೈ ಶ್ರೀ ರಾಮ್ʼ ಎಂದು ಜಪಿಸಿದರು. ಸಮಾರಂಭದಲ್ಲಿ ಶಾರುಖ್ ಮತ್ತು ಸಲ್ಮಾನ್ ಅವರ ಏಕವ್ಯಕ್ತಿ ಪ್ರದರ್ಶನವೂ ಇತ್ತು.

ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ದಿಲ್ಜಿತ್ ದೋಸಾಂಜ್, ಕರೀನಾ ಕಪೂರ್ ಖಾನ್-ಸೈಫ್ ಅಲಿ ಖಾನ್, ಸಾರಾ ಅಲಿ ಖಾನ್, ಜಾನ್ಹವಿ ಕಪೂರ್, ಖುಷಿ ಕಪೂರ್ ಮತ್ತು ಅನನ್ಯಾ ಪಾಂಡೆ ಅವರು ವೇದಿಕೆಗೆ ಬಂದರು. ಕೆಲವು ದಿನಗಳ ಹಿಂದೆ ತಾವು ತಂದೆ-ತಾಯಿ ಆಗುವುದಾಗಿ ಘೋಷಿಸಿದ್ದ ದೀಪಿಕಾ ಮತ್ತು ರಣವೀರ್, ʻದಿಲ್ ಧಡಕ್ನೆ ದೋʼ ದ ʻಗಲ್ಲಾ ಗುಡಿಯನ್ʼ ಹಾಡಿಗೆ ನೃತ್ಯ ಮಾಡಿದರು.

ಕರೀನಾ ಮತ್ತು ಸೈಫ್ ಜೊತೆಗೂಡಿದ ದಿಲ್ಜಿತ್, ಕರೀನಾ ಅವರನ್ನು ಹೊಗಳಿದರು. ʻರಿಹಾನ್ನಾ, ಬೆಯೋನ್ಸ್ ಯಾರೇ ಇರಲಿ; ಕರೀನಾ ನಮಗೆ ಎಲ್ಲವೂʼ ಎಂದು ಹೇಳಿದರು. ಆನಂತರ ಅವರು ಕರೀನಾ ಅವರ ಸೂಪರ್‌ಹಿಟ್ ಟ್ರ್ಯಾಕ್ ʼಪ್ರಾಪರ್ ಪಟೋಲಾʼ ಹಾಡಿದರು.

ಎಂಟು ವರ್ಷಗಳ ನಂತರ ರಿಹಾನ್ನಾ ಲೈವ್ ಶೋ ನೀಡಿದ್ದಾರೆ. 2018ರಲ್ಲಿ ಆನಂದ್ ಪಿರಾಮಲ್ ಮತ್ತು ಇಶಾ ವಿವಾಹಕ್ಕೆ ಬಿಯಾನ್ಸ್‌ ಆಗಮಿಸಿದ್ದರು.

Read More
Next Story