ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ ಆಕಾಶ್‌ ದೀಪ್‌

4 ನೇ ಟೆಸ್ಟ್: ಜೋ ರೂಟ್ ಶತಕ. ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಆಕಾಶ್ ದೀಪ್


ರಾಂಚಿ, ಫೆ.23- ನಾಲ್ಕನೇ ಟೆಸ್ಟ್‌ನ ಮೊದಲ ದಿನ ಇಂಗ್ಲೆಂಡ್‌ 7 ವಿಕೆಟ್‌ಗೆ 302 ರನ್ ಗಳಿಸಿದೆ.

ರೂಟ್ 226 ಎಸೆತದಲ್ಲಿ 106 ರನ್‌ ಮಾಡಿ, ಅಜೇಯರಾಗಿ ಉಳಿದಿದ್ದರು. ಚೊಚ್ಚಲ ವೇಗಿ ಆಕಾಶ್ ದೀಪ್ ನೀಡಿದ ಆರಂಭಿಕ ಆಘಾತಗಳಿಂದ ಇಂಗ್ಲೆಂಡ್ ತಕ್ಕಮಟ್ಟಿಗೆ ಚೇತರಿಸಿಕೊಂಡಿದ್ದು, ಇನ್ನೊಂದು ತುದಿಯಲ್ಲಿ ಒಲ್ಲಿ ರಾಬಿನ್ಸನ್ (26) ಅವರಿಗೆ ಜೊತೆಯಾದರು.

ಆಕಾಶ್ ಗೆ ಮೂರು ವಿಕೆಟ್: ಬಿಹಾರ ಮೂಲದ ಆಕಾ‌ಶ್‌ (27) ತಮ್ಮ ಚೊಚ್ಚಲ ಪಂದ್ಯದಲ್ಲಿ 17 ಓವರ್‌ಗಳಲ್ಲಿ ಮೂರು ವಿಕೆಟ್‌ ಕಬಳಿಸಿದರು. ಹೊಸ ಚೆಂಡಿನೊಂದಿಗೆ ದಾಳಿ ನಡೆಸಿ, ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಆಟಗಾರರನ್ನು ಪೆವಿಲಿಯನ್ನಿಗೆ ವಾಪಸ್‌ ಕಳಿಸಿದರು. 10 ಎಸೆತಗಳಲ್ಲಿ ಮೂರು ವಿಕೆಟ್ ಪತನಗೊಂಡಿತು.

ಆದರೆ‌, ರೂಟ್ ಕಾಯುವ ಆಟವನ್ನು ಆಡುವ ತಮ್ಮ ಸ್ವಾಭಾವಿಕ ಶೈಲಿಗೆ ಮರಳಿದರು. 15 ಇನ್ನಿಂಗ್ಸ್‌ಗಳಲ್ಲಿ ಮೊದಲ ಶತಕ ಬಾರಿಸಿದ ಅವರಿಂದಾಗಿ, ಇಂಗ್ಲೆಂಡ್‌ಗೆ ಅಪೇಕ್ಷಿತ ಫಲಿತಾಂಶ ನೀಡಿತು. ಟೆಸ್ಟ್ ವೃತ್ತಿಜೀವನದಲ್ಲಿ 31 ನೇ ಬಾರಿಗೆ ಮೂರು ಅಂಕಿಗಳ ಗುರಿಯನ್ನು ತಲುಪಿದರು. ಶತಕಕ್ಕೆ ಅವರಿಗೆ 219 ಎಸೆತ ಬೇಕಾಯಿತು. ರೂಟ್‌ ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹೊಡೆದರು.

ವಿಶಾಖಪಟ್ಟಣಂ ಮತ್ತು ರಾಜ್‌ಕೋಟ್‌ನಲ್ಲಿ ಸತತ ಸೋಲಿನಿಂದ ತತ್ತರಿಸಿರುವ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 1-2 ರಿಂದ ಹಿನ್ನಡೆ ಸಾಧಿಸಿದೆ.

ಬೂಮ್ರಾ ಇಲ್ಲ: ಈ ಸರಣಿಯಲ್ಲಿ ರೂಟ್‌ ಅವರನ್ನು ಮೂರು ಬಾರಿ ಔಟ್ ಮಾಡಿದ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ಇಂಗ್ಲೆಂಡಿಗೆ ಶುಭ ಸೂಚನೆಯಾಗಿತ್ತು. ಇಂಗ್ಲೆಂಡಿನ ಚೇತರಿಕೆಯಲ್ಲಿ ದೊಡ್ಡ ಪಾಲು ನೀಡಿದವರು ವಿಕೆಟ್‌ಕೀಪರ್-ಬ್ಯಾಟರ್ ಬೆನ್ ಫೋಕ್ಸ್ (126 ಎಸೆತಗಳಲ್ಲಿ 47). ಊಟದ ನಂತರದ ಅವಧಿಯಲ್ಲಿ 86 ರನ್‌ಗಳನ್ನು ಸೇರಿಸಿದರು.

ಚಹಾ ವಿರಾಮದ ನಂತರ, ಮೊಹಮ್ಮದ್ ಸಿರಾಜ್ (2/60), ಫೋಕ್ಸ್‌ರನ್ನು ಔಟ್ ಮಾಡಿದರು. ಪೋಕ್ಸ್‌ ಶಾರ್ಟ್ ಮಿಡ್ ವಿಕೆಟ್‌ನಲ್ಲಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿದರು. ಈ ಮೂಲಕ 113 ರನ್ ಗಳ ಆರನೇ ವಿಕೆಟ್ ಜೊತೆಯಾಟ ಅಂತ್ಯಗೊಂಡಿತು. ಸಿರಾಜ್ ಅವರು ಟಾಮ್ ಹಾರ್ಟ್ಲಿ (26 ಎಸೆತಗಳಲ್ಲಿ 13) ಅವರನ್ನು ಅದ್ಭುತ ಎಸೆತದೊಂದಿಗೆ ಔಟ್ ಮಾಡಿದರು. ಇದರಲ್ಲಿ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್‌ ನಲ್ಲಿ ಲಾಂಗ್ಆ ನ್‌ನಲ್ಲಿ ಹೊಡೆದ ಸಿಕ್ಸರ್ ಸೇರಿತ್ತು. ಅಶ್ವಿನ್ 35 ಎಸೆತಗಳಲ್ಲಿ 38 ರನ್ ಗಳಿಸಿದ ಜಾನಿ ಬೈರ್‌ಸ್ಟೋ ಅವರ ವಿಕೆಟ್‌ ಪಡೆದರು.

ಆಕಾಶ್‌ ದೀಪ್‌ ಪ್ರದರ್ಶನ: ಆಕಾಶ್ ದೀಪ್ 10 ಎಸೆತಗಳಲ್ಲಿ ಬೆನ್ ಡಕೆಟ್ (11), ಆಲಿ ಪೋಪ್ (0) ಮತ್ತು ಝಾಕ್ ಕ್ರಾಲಿ (42) ಅವರನ್ನು ಔಟ್ ಮಾಡಿದರು. ಅವರ ಚೆಂಡೆಸೆತ ಸಾಧನೆ 7-0-24-3.

ಅವರು ತಮ್ಮ ಚೊಚ್ಚಲ ಟೆಸ್ಟ್ ವಿಕೆಟ್‌ಗಾಗಿ ಸ್ವಲ್ಪ ಕಾಯಬೇಕಾಯಿತು. ಎರಡನೇ ಓವರ್‌ನಲ್ಲಿ ಕ್ರಾಲಿ ಅವರ ಆಫ್-ಸ್ಟಂಪ್ ಅನ್ನು ಕಿತ್ತುಹಾಕಿದರು. ಆದರೆ, ಚೆಂಡು ಎಸೆಯುವಾಗ ಗೆರೆ ದಾಟಿದ್ದರಿಂದ ಬ್ಯಾಟರ್‌ ಉಳಿದುಕೊಂಡರು. ಇನ್ನೊಂದು ತುದಿಯಲ್ಲಿ ಹಿರಿಯ ವೇಗಿ ಸಿರಾಜ್ ಸ್ವಿಂಗ್ ಅನ್ನು ಪಡೆಯಲು ಹೆಣಗಾಡಿದರು; ಇದರಿಂದ ಆರಂಭಿಕ ಜೋಡಿ ಕುದುರಲು ಆರಂಭಿಸಿತು. ಸಿರಾಜ್‌ ಬೌಲಿಂಗಿನಲ್ಲಿ ಕ್ರಾಲಿ ಸತತ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು.

ನಾಯಕ ರೋಹಿತ್ ಶರ್ಮಾ ಅವರು ದೂರದ ತುದಿಯಿಂದ ರವೀಂದ್ರ ಜಡೇಜಾ ಅವರನ್ನು ತರುವ ಮೊದಲು, ಕ್ರಾಲಿ 32 ಎಸೆತಗಳಲ್ಲಿ 32 ರನ್ ಗಳಿಸಿದರು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೇವಲ 10 ಓವರ್ ಬೌಲ್ ಮಾಡಿದ್ದು, ಯಾವುದೇ ವಿಕೆಟ್ ಪಡೆಯಲಿಲ್ಲ.

ಆಗ ಆಕಾಶ್ ದೀಪ್ 10 ನೇ ಓವರ್‌ನಲ್ಲಿ ಎರಡು ವಿಕೆಟ್‌ ಗಳಿಸಿದರು- ಪೋಪ್ ಮತ್ತು ಕ್ರಾಲಿ. ರಕ್ಷಣಾತ್ಮಕ ಆಟ ಆರಂಭಿಸಿದ ರೂಟ್‌, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ ನಲ್ಲಿ ಗೌರವಾನ್ವಿತ ಮೊತ್ತ ಗಳಿಸಲು ನೆರವಾದರು.


Read More
Next Story