4 ನೇ ಟೆಸ್ಟ್:  ಭಾರತ 134 ರನ್‌  ಹಿನ್ನಡೆ
x
ಜೆಎಸ್‌ಸಿಎ ಇಂಟರ್‌ನ್ಯಾಶನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಎರಡನೇ ದಿನದಂದು ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಪಡೆದ ನಂತರ ಇಂಗ್ಲೆಂಡ್‌ನ ಶೋಯೆಬ್ ಬಶೀರ್ (ಎಡ), ನಾಯಕ ಬೆನ್ ಸ್ಟೋಕ್ಸ್ (ಮಧ್ಯ) ಮತ್ತು ವಿಕೆಟ್ ಕೀಪರ್ ಬೆನ್ ಫೋಕ್ಸ್ ಅವರೊಂದಿಗೆ ಸಂಭ್ರಮಿಸಿದರು.

4 ನೇ ಟೆಸ್ಟ್: ಭಾರತ 134 ರನ್‌ ಹಿನ್ನಡೆ


ರಾಂಚಿ, ಫೆಬ್ರವರಿ 24- ನಾಲ್ಕನೇ ಟೆಸ್ಟ್‌ನ ಎರಡನೇ ದಿನದಂದು ಆತಿಥೇಯರು ಏಳು ವಿಕೆಟ್‌ಗೆ 219 ರನ್‌ ಗಳಿಸಿದ್ದು,ಇಂಗ್ಲೆಂಡ್ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

ಬಶೀರ್(20) ತನ್ನ ಎರಡನೇ ಟೆಸ್ಟ್ ಆಡುತ್ತಿದ್ದು, ಅಸಮವಾದ ಬೌನ್ಸ್ ಮತ್ತು ಬಿರುಕುಗಳನ್ನು ಹೊಂದಿರುವ ಪಿಚ್‌ನಲ್ಲಿ ಭಾರತದ ಅಗ್ರ ಮತ್ತು ಮಧ್ಯಮ ಹಂತದ ಬ್ಯಾಟರ್‌ ಗಳನ್ನು ಕಾಡಿದರು. ಶುಭಮನ್ ಗಿಲ್ (38), ರಜತ್ ಪಾಟಿದಾರ್ (17) ಮತ್ತು ರವೀಂದ್ರ ಜಡೇಜಾ (12) ಅವರ ಸ್ಪಿನ್‌ ಚಳಕಕ್ಕೆ ಬಲಿಯಾದರು.

ಟೀ ವಿರಾಮದ ನಂತರ ತಮ್ಮಎರಡು ಅವಧಿಗಳ 31 ಓವರ್ ಗಳಲ್ಲಿ ಯಶಸ್ವಿ ಜೈಸ್ವಾಲ್ (73) ಅವರನ್ನುಔಟ್‌ ಮಾಡಿದರು. ಆತಿಥೇಯರು 134 ರನ್‌ಗಳಿಂದ ಹಿಂದುಳಿದಿದ್ದಾರೆ. ಧ್ರುವ್ ಜುರೆಲ್ (30 ಬ್ಯಾಟಿಂಗ್) ಮತ್ತು ಕುಲದೀಪ್ ಯಾದವ್ (17) ನಡುವಿನ ಹೋರಾಟದ ಜೊತೆಯಾಟ ಇಲ್ಲದಿದ್ದರೆ ಭಾರತ 200 ರನ್ ಗಡಿ ದಾಟಲು ಕಷ್ಟವಾಗುತ್ತಿತ್ತು. ಅಜೇಯ 42 ರನ್‌ಗಳ ಜೊತೆಯಾಟ ಉತ್ತಮವಾಗಿತ್ತು. ಜೈಸ್ವಾಲ್(22) ಮತ್ತೊಮ್ಮೆ ಆತ್ಮವಿಶ್ವಾಸದಿಂದ ಆಟವಾಡಿದರು. ಅವರು ಈ ಸರಣಿಯಲ್ಲಿ 103 ಸರಾಸರಿಯೊಂದಿಗೆ 618 ರನ್ ಗಳಿಸಿದ್ದಾರೆ.

ಟಾಮ್‌ ಹಾರ್ಟ್ಲಿ(2/47) ಗಳಿಸಿದ ವಿಕೆಟ್‌ ಗಳಲ್ಲಿ ಸರ್ಫರಾಜ್ ಖಾನ್ (14) ವಿಕೆಟ್‌ ಒಂದು. ಮೂರನೇ ಓವರ್‌ನಲ್ಲಿ ರೋಹಿತ್ ಶರ್ಮಾ (2) ಪೆವಿಲಿಯಗ್‌ ಮರಳಿದರು. ನಂತರ ಆಗಮಿಸಿದ ಜೈಸ್ವಾಲ್ ಮತ್ತು ನಂ. 3 ಗಿಲ್ ಊಟದ ನಂತರದ ವಿರಾಮದ ನಂತರ ರನ್‌ ವೇಗ ಹೆಚ್ಚಿಸಿದರು. ಆಂಡರ್ಸನ್ ಅವರನ್ನು ಎರಡು ಬಾರಿ ಬೌಂಡರಿಗೆ ಅಟ್ಟಿದರು. ಗಿಲ್ ಮತ್ತು ಜೈಸ್ವಾಲ್ ನಡುವಿನ 82 ರನ್‌ಗಳ ಮೈತ್ರಿಯನ್ನು ಬಶೀರ್ ಗಿಲ್ ಮುರಿದರು. ಪಾಟಿದಾರ್, ಆಂಡರ್ಸನ್ ಎಸೆದ ಚೆಂಡನ್ನು ಬೌಂಡರಿಗೆ ಕಳಿಸಿದಾಗ ತಂಡ 100 ರನ್‌ ದಾಟಿತು.

7 ವಿಕೆಟ್‌ಗೆ 302 ರನ್‌ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 353 ರನ್‌ಗಳಿಗೆ ಮುಗಿಯಿತು. ಆಲಿ ರಾಬಿನ್ಸನ್ (58) ರವೀಂದ್ರ ಜಡೇಜಾ ಅವರನ್ನು ರಿವರ್ಸ್ ಸ್ವೀಪ್ ಮಾಡಲು ಹೋಗಿ ವಿಫಲರಾದರು. ಇಂಗ್ಲೆಂಡ್ ತನ್ನ ರಾತ್ರಿಯ ಮೊತ್ತಕ್ಕೆ 51 ರನ್‌ ಸೇರಿಸಿತು. ಆರು ಗಂಟೆಗಳಿಗಿಂತ ಹೆಚ್ಚು ಕಾಲ ಕ್ರೀಸ್‌ ನಲ್ಲಿದ್ದ ಜೋ ರೂಟ್, 274 ಎಸೆತಗಳಲ್ಲಿ 122 ರನ್ ಗಳಿಸಿದರು. ರೂಟ್ ಮತ್ತು ರಾಬಿನ್ಸನ್ ಎಂಟನೇ ವಿಕೆಟ್ ಗೆ 102 ರನ್‌ ಸೇರಿಸಿದರು.

ಮೊಹಮ್ಮದ್ ಸಿರಾಜ್ (2/78), ಆಕಾಶ್ ದೀಪ್ 19 ಓವರ್‌ಗಳಲ್ಲಿ 3/38 ಮತ್ತು ಜಡೇಜಾ 32.5 ಓವರ್‌ಗಳಲ್ಲಿ 4/67 ಸಾಧನೆ ಮಾಡಿದರು.

Read More
Next Story