ಶೇ.34 ಭಾರತೀಯ ಬಳಕೆದಾರರಿಗೆ ಸೈಬರ್‌ ಬೆದರಿಕೆ: ಕ್ಯಾಸ್ಪರ್‌ಸ್ಕಿ
x
wikimedia

ಶೇ.34 ಭಾರತೀಯ ಬಳಕೆದಾರರಿಗೆ ಸೈಬರ್‌ ಬೆದರಿಕೆ: ಕ್ಯಾಸ್ಪರ್‌ಸ್ಕಿ


ಹೊಸದಿಲ್ಲಿ, ಫೆ.20 - ಭಾರತದಲ್ಲಿ ಶೇ.34 ಬಳಕೆದಾರರು 2023 ರಲ್ಲಿ ಸೈಬರ್‌ ಬೆದರಿಕೆಗಳಿಗೆ ಗುರಿಯಾಗಿದ್ದಾರೆ ಮತ್ತು ಕಂಪನಿಯ ಉತ್ಪನ್ನಗಳು ಇಂಥ 74.3 ದಶಲಕ್ಷ ಪ್ರಕರಣಗಳನ್ನು ಪತ್ತೆ ಹಚ್ಚಿ ನಿರ್ಬಂಧಿಸಿದೆ ಎಂದು ಜಾಗತಿಕ ಸೈಬರ್ ಸೆಕ್ಯುರಿಟಿ ಮತ್ತು ಡಿಜಿಟಲ್ ಗೌಪ್ಯತೆ ಕಂಪನಿ ಕ್ಯಾಸ್ಪರ್‌ಸ್ಕಿ ಮಂಗಳವಾರ ಹೇಳಿದೆ.

ಬಳಕೆದಾರರ ಕಂಪ್ಯೂಟರ್‌ಗಳಲ್ಲಿ ದುರುದ್ದೇಶಪೂರಿತ ಪ್ರೋಗ್ರಾಂ ಅಥವಾ ಅವುಗಳಿಗೆ ಸಂಪರ್ಕಗೊಳಿಸುವ ತೆಗೆದುಹಾಕಬಹುದಾದ ಮಾಧ್ಯಮ (ಫ್ಲಾಶ್ ಡ್ರೈವ್‌ಗಳು, ಕ್ಯಾಮೆರಾ ಮೆಮೊರಿ ಕಾರ್ಡ್‌ಗಳು, ಫೋನ್‌ಗಳು, ಬಾಹ್ಯ ಹಾರ್ಡ್ ಡ್ರೈವ್‌ಗಳು) ಇಲ್ಲವೇ ಆರಂಭದಲ್ಲೇ ಕಂಪ್ಯೂಟರ್‌ನಲ್ಲಿ ಇರುವಂಥವು ಸೈಬರ್‌ ಬೆದರಿಕೆಗೆ ಕಾರಣವಾಗುತ್ತಿವೆ.

ಇಂಡಿಯ ಸೈಬರ್‌ ಸುರಕ್ಷತೆ ಕ್ರಮಾಂಕದಲ್ಲಿ 80ನೇ ಸ್ಥಾನದಲ್ಲಿದೆ. ದೇಶದ ಸೈಬರ್ ಸೆಕ್ಯುರಿಟಿ ಮಾರುಕಟ್ಟೆ ಮೌಲ್ಯ 2023 ರಲ್ಲಿ 6.06 ಬಿಲಿಯನ್ ಡಾಲರ್. ಡಿಜಿಟಲ್ ಸಂಪರ್ಕ ಹೆಚ್ಚುತ್ತಿದ್ದಂತೆ, ಸೈಬರ್ ಬೆದರಿಕೆ ಕ್ಷೇತ್ರ ನಿರಂತರವಾಗಿ ವಿಕಸನಗೊಳ್ಳುತ್ತಿದೆ.

ʻಉದ್ಯಮಗಳು ಮತ್ತು ವ್ಯಕ್ತಿಗಳು ಸೈಬರ್‌ ಸುರಕ್ಷತೆಗೆ ದೋಷರಹಿತ ವಿಶ್ವಾಸಾರ್ಹ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಎಐ ಬಳಕೆ ಹೆಚ್ಚಳ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯಿಂದಾಗಿ ಸಂಸ್ಥೆಗಳು ತಮ್ಮ ಸೈಬರ್‌ ಸುರಕ್ಷತೆ ವ್ಯವಸ್ಥೆಯನ್ನು ನಿರಂತರವಾಗಿ ಉತ್ತಮಗೊಳಿಸಿಕೊಳ್ಳುವುದು ಅನಿವಾರ್ಯʼ ಎಂದು ದಕ್ಷಿಣ ಏಷ್ಯಾ ವಿಭಾಗದ ಜನರಲ್ ಮ್ಯಾನೇಜರ್ ಜಯದೀಪ್ ಸಿಂಗ್ ಹೇಳಿದರು.

Read More
Next Story