
ಜೆಫ್ ಬೆಜೋಸ್ ಭಾರಿ ಶ್ರೀಮಂತ
ಬೆಜೋಸ್ ಆಸ್ತಿ ಮೌಲ್ಯ 200 ಶತಕೋಟಿ ಡಾಲರ್. ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ
ಜೆಫ್ ಬೆಜೋಸ್ ಮತ್ತೊಮ್ಮೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮಾಹಿತಿ ಪ್ರಕಾರ, ಬೆಜೋಸ್ ಅವರ ನಿವ್ವಳ ಮೌಲ್ಯ 200 ಶತಕೋಟಿ ಡಾಲರಿಗೆ ಏರಿದೆ. ಮಸ್ಕ್ ಅವರ ಸಂಪತ್ತು 198 ಶತಕೋಟಿ ಡಾಲರ್ ಇದೆ. ಕಳೆದ ವರ್ಷ ಬೆಜೋಸ್ ಸಂಪತ್ತು 23 ಶತಕೋಟಿ ಡಾಲರ್‌ನಿಂದ ಹೆಚ್ಚಿದರೆ, ಮಸ್ಕ್ ಸಂಪತ್ತು 31 ಶತಕೋಟಿ ಡಾಲರ್ ಕುಸಿಯಿತು.
ಟೆಸ್ಲಾ ಷೇರುಗಳ ಕುಸಿತ: ಮಾರ್ಚ್ 4 ರಂದು ಟೆಸ್ಲಾ ಷೇರುಗಳು ಶೇ.7 ರಷ್ಟು ಕುಸಿದಿವೆ. ಜನವರಿ 2021ರಲ್ಲಿ ಮಸ್ಕ್(195 ಬಿಲಿಯನ್ ಡಾಲರ್) ಬೆಜೋಸ್ ಅವರನ್ನು ಹಿಂದಿಕ್ಕಿದರು. ಆದರೆ, ಮೇ 2023 ರಲ್ಲಿ ಮಸ್ಕ್, ಮೋಯೆಟ್ ಹೆನ್ನೆಸ್ಸಿ ಲೂಯಿಸ್ ವೂಯಿಟ್ಟನ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ದಾಟಿದರು. ಅರ್ನಾಲ್ಟ್ ಈಗ 197 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ 179 ಶತಕೋಟಿ ಮತ್ತುಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ 150 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ.
ಅಂಬಾನಿ, ಅದಾನಿ: ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ 11 ಮತ್ತು ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿ 12ನೇ ಸ್ಥಾನದಲ್ಲಿದ್ದಾರೆ. ಅಂಬಾನಿ 115 ಶತಕೋಟಿ ಡಾಲರ್ ಹಾಗೂ ಅದಾನಿ 104 ಶತಕೋಟಿ ಡಾ. ಮೌಲ್ಯ ಹೊಂದಿದ್ದಾರೆ.