ಕಲಬುರಗಿಯ ಶಿಕ್ಷಣ ಕ್ರಾಂತಿಯ ಹರಿಕಾರ ; ಶರಣಬಸಪ್ಪ ಅಪ್ಪ ಅವರ ಸೇವೆ ಎಂತಹದ್ದು?
x

ಶರಣಬಸಪ್ಪ ಅಪ್ಪ

ಕಲಬುರಗಿಯ ಶಿಕ್ಷಣ ಕ್ರಾಂತಿಯ ಹರಿಕಾರ ; ಶರಣಬಸಪ್ಪ ಅಪ್ಪ ಅವರ ಸೇವೆ ಎಂತಹದ್ದು?

2003ರ ಏಪ್ರಿಲ್ 28ರಲ್ಲಿ ಸಂಸತ್ ಭವನದಲ್ಲಿ ಬಸವೇಶ್ವರ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2017ರಲ್ಲಿ ಕರ್ನಾಟಕ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆ ಅಡಿ ಶರಣಬಸವ ವಿಶ್ವವಿದ್ಯಾಲಯ ಆರಂಭಿಸಿದ್ದರು.


ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿಯಾಗಿದ್ದ ಶರಣಬಸಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕದಲ್ಲಿ ಅಕ್ಷರ ಬೀಜ ಬಿತ್ತಿದ ಶಿಕ್ಷಣ ಕ್ರಾಂತಿಯ ಹರಿಕಾರ ಎಂದೇ ಹೆಸರಾಗಿದ್ದರು.

ಬಿಸಿಲ ನಾಡಿನಲ್ಲಿ ದಾಸೋಹ, ಶಿಕ್ಷಣದ ಮೂಲಕ ಕಲಬುರಗಿ ಕಲ್ಯಾಣಕ್ಕಾಗಿ ಶ್ರಮಿಸಿದ್ದ ಅವರನ್ನೂ ಈ ಭಾಗದ ಭಕ್ತರು ಅಪ್ಪ ಎಂದೇ ಸಂಭೋದಿಸುತ್ತಿದ್ದರು.

1935ರ ನ. 14ರಂದು ಜನಿಸಿದ ಡಾ.ಶರಣಬಸಪ್ಪ ಅಪ್ಪ ಅವರು ಸಂಸ್ಥಾನದ 7ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಹಾಗೂ ಗೋದುತಾಯಿ ಅವರ ಸುಪುತ್ರ. 1957ರ ಫೆಬ್ರವರಿ 17ರಂದು ಕೋಮಲಾದೇವಿ ಅವರೊಂದಿಗೆ ವಿವಾಹವಾದರು. 1983ರಲ್ಲಿ ಸಂಸ್ಥಾನದ 8ನೇ ಪೀಠಾಧಿಪತಿಯಾಗಿ ನೇಮಕವಾದರು. 1993ರ ಮಾರ್ಚ್‌ 23ರಂದು ಕೋಮಲಾದೇವಿ ಅನಾರೋಗ್ಯದಿಂದ ನಿಧನ ಹೊಂದಿದರು. ಅದಾದ ಬಳಿಕ ಅಪ್ಪ ಅವರು 1993ರ ನ.30ರಂದು ಡಾ.ದ್ರಾಕ್ಷಯಣಿ ಅವ್ವಾಜಿ ಅವರೊಂದಿಗೆ 2ನೇ ವಿವಾಹವಾದರು.

ಅವರಿಗೆ 82 ನೇ ವಯಸ್ಸಿನಲ್ಲಿ ಪುತ್ರ ಸಂತಾನವಾಗಿತ್ತು. ಈಗ ಅದೇ ಪುತ್ರ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ನೇಮಕವಾಗಿದ್ದಾರೆ.

ಮಠದಲ್ಲೇ ಇಂದು ಅಂತ್ಯಕ್ರಿಯೆ

ಡಾ.ಶರಣಬಸಪ್ಪ ಅಪ್ಪ‌ ಅವರನ್ನು ಶ್ರೀಮಠದಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

ಅಂತ್ಯ ಸಂಸ್ಕಾರದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ಸಾಧ್ಯತೆ ಇದ್ದು, ಬಿಗಿ ಬಂದೋಬಸ್ತ್‌ ಮಾಡಿಕೊಳ್ಳಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ತಿಳಿಸಿದ್ದಾರೆ. ಗುರುವಾರ ರಾತ್ರಿಯಿಂದಲೇ ಭಕ್ತರು ಆಗಮಿಸುತ್ತಿದ್ದು, ಭಕ್ತರ ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಶಿಕ್ಷಣದ ಕ್ರಾಂತಿಯ ಬೀಜ ಬಿತ್ತಿದ ಅಪ್ಪ

ಧಾರವಾಡ ಕರ್ನಾಟಕ ವಿವಿಯ ಎಂ.ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅಪ್ಪ ಅವರು ಧಾರವಾಡ ಕರ್ನಾಟಕ ವಿವಿಯ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. 1980ರಲ್ಲಿ ಗುಲಿ ವಿವಿಯ ಮೂಲಸೌಕರ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದರು.

2003ರ ಏಪ್ರಿಲ್ 28ರಲ್ಲಿ ಸಂಸತ್ ಭವನದಲ್ಲಿ ಬಸವೇಶ್ವರ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2017ರಲ್ಲಿ ಕರ್ನಾಟಕ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆ ಅಡಿ ಶರಣಬಸವ ವಿಶ್ವವಿದ್ಯಾಲಯ ಆರಂಭಿಸಿದ್ದರು.

1973 ರಿಂದ 2017 ರವರೆಗೆ ಬರೋಬ್ಬರಿ 60 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾರಂಭ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮಾಡಿದರು. IAS ಮತ್ತು IPS ತರಬೇತಿ ಕೇಂದ್ರ ಸ್ಥಾಪನೆ ಮಾಡಿದರು. ಜೊತೆಗೆ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. 1935 ರಲ್ಲಿ ಮಹಾದೇವಿ ಕನ್ಯಾಪ್ರೌಢಶಾಲೆ ಸ್ಥಾಪನೆ ಮಾಡಿದರು.

ಮಹಿಳೆಯರಿಗಾಗಿ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದ್ದರು. 2017ರಲ್ಲಿ ಶರಣಬಸವ ವಿಶ್ವವಿದ್ಯಾಲಯ ಪ್ರಾರಂಭ ಮಾಡಿದರು.

ಅಪ್ಪ ಅವರು ಆರಂಭಿಸಿರುವ 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಅಪ್ಪ ಅವರ ಧಾರ್ಮಿಕ ಕೈಂಕರ್ಯ

• 1963ರಲ್ಲಿ ಅಖಿಲ ಭಾರತ ಶಿವಾನುಭವ ಮಂಟಪ ಸ್ಥಾಪನೆ

• ಶರಣಬಸಪ್ಪ ಅಪ್ಪ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಅನುಭವ ಮಂಟಪಗಳ ಮಹಾ ಸಮ್ಮೇಳನ

• 1996ರಲ್ಲಿ ದಾಸೋಹ ಜ್ಞಾನರತ್ನ ಸಾಹಿತ್ಯಿಕ ಪಾಕ್ಷಿಕ ಪತ್ರಿಕೆ ಪ್ರಾರಂಭ

• ಮಹಾದಾಸೋಹಿ ಶರಣಬಸವ ಎಂಬ ಅಂಕಿತವಿಟ್ಟು 21 ವಚನಗಳ ರಚನೆ

• ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸತತ 15 ವರ್ಷ ಸೇವೆ.

ಅಪ್ಪ ಅವರಿಗೆ ಸಂದ ಪ್ರಶಸ್ತಿ, ಗೌರವ

*ಕರ್ನಾಟಕ ಸರ್ಕಾರದಿಂದ 1988ರಲ್ಲಿ ಕರ್ನಾಟಕ ರಾಜ್ಯೋ ಪ್ರಶಸ್ತಿ

* 1999ರಲ್ಲಿ ಗುಲಬರ್ಗಾ ವಿವಿ ಇಂದ ಗೌರವ ಡಾಕ್ಟರೇಟ್ ಪ್ರಧಾನ

* ಹಲವಾರು ವರ್ಷಗಳ ಕಾಲ ಧಾರವಾಡ ವಿವಿ ಸಿಂಡಿಕೇಟ್ ಸದಸ್ಯರಾಗಿ ಸೇವೆ

* ಲಲಿತ ಕಲಾ ಅಕಾಡೆಮಿ ವತಿಯಿಂದ ಕಲಾ ಪೋಷಿತ್ ಪ್ರಶಸ್ತಿ ಪ್ರಧಾನ.

Read More
Next Story