![Youth Congress Election | ಡಿಕೆಶಿ ಬೆಂಬಲಿಗ ಮಂಜುನಾಥ್ ಅಧ್ಯಕ್ಷ; ಜಾರಕಿಹೊಳಿ ಪುತ್ರ ರಾಹುಲ್ ಪ್ರ. ಕಾರ್ಯದರ್ಶಿ Youth Congress Election | ಡಿಕೆಶಿ ಬೆಂಬಲಿಗ ಮಂಜುನಾಥ್ ಅಧ್ಯಕ್ಷ; ಜಾರಕಿಹೊಳಿ ಪುತ್ರ ರಾಹುಲ್ ಪ್ರ. ಕಾರ್ಯದರ್ಶಿ](https://karnataka.thefederal.com/h-upload/2025/02/08/511401-congressyuth.webp)
Youth Congress Election | ಡಿಕೆಶಿ ಬೆಂಬಲಿಗ ಮಂಜುನಾಥ್ ಅಧ್ಯಕ್ಷ; ಜಾರಕಿಹೊಳಿ ಪುತ್ರ ರಾಹುಲ್ ಪ್ರ. ಕಾರ್ಯದರ್ಶಿ
Youth Congress Election| ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಮತ್ತು ದೀಪಿಕಾ ರೆಡ್ಡಿ ನಡುವೆ ಪೈಪೋಟಿ ನಡೆದಿತ್ತು. 2,71,638 ಮತಗಳಿಂದ ಜಯಗಳಿಸುವ ಮೂಲಕ ಮಂಜುನಾಥ್ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ.
ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿತ ಅಭ್ಯರ್ಥಿ ಮಂಜುನಾಥ್ ಹೆಚ್ ಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಮತ್ತು ದೀಪಿಕಾ ರೆಡ್ಡಿ ನಡುವೆ ಪೈಪೋಟಿ ನಡೆದಿತ್ತು. 2,71,638 ಮತಗಳ ಅಂತರದಿಂದ ಜಯಗಳಿಸುವ ಮೂಲಕ ಮಂಜುನಾಥ್ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ. ಮಂಜುನಾಥ್ 5,67,343 ಮತಗಳನ್ನು ಪಡೆದರೆ ದೀಪಿಕಾ ರೆಡ್ಡಿ ಅವರು 2,95,705 ಮತಗಳನ್ನು ಪಡೆದಿದ್ದಾರೆ.
ಎಐಸಿಸಿ ಚುನಾವಣೆ ಸಮಿತಿ ಯುವ ಕಾಂಗ್ರೆಸ್‌ನ ಎಲ್ಲ ಹಂತದ ಘಟಕಗಳಿಗೆ ನೋಂದಣಿ ಮಾಡಿಕೊಂಡಿತ್ತು. ರಾಜ್ಯ ಘಟಕ, ಜಿಲ್ಲಾ ಘಟಕ, ಬ್ಲಾಕ್ ಘಟಕಗಳಿಗೆ ವಿವಿಧ ಹುದ್ದೆಗಳಿಗೆ ಏಕ ಕಾಲಕ್ಕೆ ಮತದಾನ ನಡೆದಿತ್ತು.
ರಾಹುಲ್ ಜಾರಕಿಹೊಳಿ ಪ್ರಧಾನ ಕಾರ್ಯದರ್ಶಿ
ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಹುಲ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆಯಲ್ಲಿ 1.80 ಲಕ್ಷ ಮತ ಪಡೆದು ರಾಹುಲ್ ಜಾಲಕಿಹೊಳಿ ಗೆಲುವು ದಾಖಲಿಸಿದ್ದಾರೆ.