
ರಂಜಾನ್ ಮಾಸ | ಮುಸ್ಲಿಂ ಸಿಬ್ಬಂದಿಗೆ ಬೇಗ ಹೊರಡಲು ಅವಕಾಶ: ಸಿಎಂಗೆ ಕೆಪಿಸಿಸಿ ಒತ್ತಾಯ
ಕರ್ನಾಟಕ ಕಾಂಗ್ರೆಸ್ ಉಪಾಧ್ಯಕ್ಷರಾದ ವೈ ಸೈಯದ್ ಅಹ್ಮದ್ ಮತ್ತು ಎಆರ್ ಎಂ ಹುಸೇನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಂಜಾನ್ ಮಾಸದಲ್ಲಿ ಎಲ್ಲಾ ಮುಸ್ಲಿಂ ಸರ್ಕಾರಿ ನೌಕರಿಗೆ ಸಂಜೆ 4 ಗಂಟೆಯ ನಂತರ ಎರಡು ಗಂಟೆ ಬೇಗ ಕರ್ತವ್ಯದಿಂದ ತೆರಳಲು ಅವಕಾಶ ನೀಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಉಪಾಧ್ಯಕ್ಷರಾದ ವೈ ಸೈಯದ್ ಅಹ್ಮದ್ ಮತ್ತು ಎಆರ್ ಎಂ ಹುಸೇನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮುಸ್ಲಿಂ ಸರ್ಕಾರಿ ನೌಕರರಿಗೆ ರಂಜಾನ್ ಸಂದರ್ಭದಲ್ಲಿ ಎರಡು ಗಂಟೆ ಮುಂಚಿತವಾಗಿ ಕರ್ತವ್ಯದಿಂದ ತೆರಳಲು ಅವಕಾಶ ನೀಡಬೇಕು. ಮುಸ್ಲಿಂ ಸಿಬ್ಬಂದಿ ಉಪವಾಸ (ಇಫ್ತಾರ್) ಮುರಿಯಲು ಸಂಜೆ 4 ಗಂಟೆಗೆ ಕೆಲಸ ಬಿಡಲು ಸಾಧ್ಯವಾಗುವಂತೆ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಪವಿತ್ರ ರಂಜಾನ್ ಮಾಸ ಸಮೀಪಿಸುತ್ತಿರುವುದರಿಂದ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಈಗಾಗಲೇ ಮುಸ್ಲಿಂ ನೌಕರರು ಒಂದು ಗಂಟೆ ಮುಂಚಿತವಾಗಿ ಕರ್ತವ್ಯದಿಂದ ತೆರಳಲು ಅವಕಾಶ ಮಾಡಿಕೊಟ್ಟಿವೆ.