‌CM Seat Debate | ಅಣ್ಣ ಸಿ.ಎಂ ಆಗಬೇಕು ಎಂಬುವುದು ನನ್ನ ಆಸೆ: ಡಿ.ಕೆ ಸುರೇಶ್‌ ಬ್ಯಾಟಿಂಗ್
x
ಡಿಕೆ ಸುರೇಶ್

‌CM Seat Debate | ಅಣ್ಣ ಸಿ.ಎಂ ಆಗಬೇಕು ಎಂಬುವುದು ನನ್ನ ಆಸೆ: ಡಿ.ಕೆ ಸುರೇಶ್‌ ಬ್ಯಾಟಿಂಗ್

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್, ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೇರಬೇಕಾದ ತೆರಿಗೆ ಹಣವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು.


ನನ್ನ ಅಣ್ಣ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಆಸೆ. ಆದರೆ ಈಗ ಆ ಸ್ಥಾನದಲ್ಲಿ ಸಿದ್ದರಾಮಯ್ಯ ಅವರಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ನನ್ನ ಆಸೆ ಏನೆಂದರೆ ನನ್ನ ಅಣ್ಣ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬುದು. ಆದರೆ ಈಗ ಆ ಸ್ಥಾನದಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ. ಮೊದಲು ಸ್ಥಾನ ಖಾಲಿ ಆಗಬೇಕು, ಆಮೇಲೆ ಮುಂದಿನ ಮಾತು. ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ಕೇವಲ ಪಕ್ಷದ ಕೆಲಸದ ನಿಮಿತ್ತ ಮಾತ್ರ ಎಂದು ಸ್ಪಷ್ಟಪಡಿಸಿದ ಸುರೇಶ್, "ಪಕ್ಷದ ಅಧ್ಯಕ್ಷರು ದೆಹಲಿಗೆ ಹೋಗುವುದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಸಾಮಾನ್ಯ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ," ಎಂದರು.

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್, ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೇರಬೇಕಾದ ತೆರಿಗೆ ಹಣವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು. "ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದೆ. ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ," ಎಂದು ಕಿಡಿಕಾರಿದರು.

ಕೊರಂಗು- ಮುನಿರತ್ನ ಪ್ರತಿಮೆ!

ಎಸ್.ಎಂ.ಕೃಷ್ಣ, ಡಿ.ಕೆ ರವಿ ಪ್ರತಿಮೆ ಮಾಡಿ ಎಂಬ ಮುನಿರತ್ನ ಪತ್ರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ನನಗೂ ಒಂದು ಅರ್ಜಿ ಬಂದಿದೆ. ಕೊರಂಗು- ಮುನಿರತ್ನ ನಾಯ್ಡು ಕಬ್ಬಿಣದ ಪ್ರತಿಮೆ ಮಾಡಿ ಎಂದು ಮನವಿ ಬಂದಿದೆ‌ ಎಂದು ಮುನಿರತ್ನ ಪತ್ರಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಮಾರ್ಮಿಕ ವ್ಯಂಗ್ಯವಾಡಿದರು.

ರೇಪಿಸ್ಟ್ ಬಗ್ಗೆ ನಾನು ಮಾತಾಡಲ್ಲ, ವಿಧಾನಸೌಧದಲ್ಲಿ ರೇಪ್ ಮಾಡಿದ್ದಾನೆ ಎಂದು ನಾನು ಹೇಳ್ತಿಲ್ಲ, ದೂರು ಕೊಟ್ಟಿರೋರು ಹೇಳಿದ್ದಾರೆ. ವಿಧಾನಸೌಧದಿಂದ ಆತನನ್ನ ನಿಷೇಧ ಮಾಡಬೇಕು. ವಿಧಾನಸೌಧ ದೇವಾಲಯ, ಅಲ್ಲಿ ಅತ್ಯಾಚಾರ ಮಾಡಿದ್ದಾರೆ. ವಿಧಾನಸೌಧ ಏನು ರೇಪಿಸ್ಟ್ ಸೆಂಟ್ರಾ..? ಯಾವ್ಯಾವ ಅವಾಚ್ಯ ಪದಗಳನ್ನು ಬಳಸಿದ್ದಾನೆ. ನಿರ್ದೋಷಿ ಅಂತಾ ಪ್ರೂವ್ ಮಾಡಿಕೊಂಡು ಬರಲಿ ಎಂದು ವಾಗ್ದಾಳಿ ನಡೆಸಿದರು.

Read More
Next Story