RCB UNBOXing : ಅಭಿಮಾನಿಗಳಿಗೆ ಕೊಹ್ಲಿಯ ಹೃದಯಸ್ಪರ್ಶಿ ಸಂದೇಶ
x

ವಿರಾಟ್ ಕೊಹ್ಲಿ ತಂಡದ ನಾಯಕರಾಗಿರುವ ರಜತ್ ಪಟಿದಾರ್ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದರು. 

RCB UNBOXing : ಅಭಿಮಾನಿಗಳಿಗೆ ಕೊಹ್ಲಿಯ ಹೃದಯಸ್ಪರ್ಶಿ ಸಂದೇಶ

ನೂತನ ನಾಯಕ ​ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಈ ತಂಡವನ್ನು ದೀರ್ಘಕಾಲದವರೆಗೆ ಮುನ್ನಡೆಸಲಿದ್ದಾರೆ. ಅವರಿಗೆ ನೀವು ಸಾಧ್ಯವಾದಷ್ಟು ಪ್ರೀತಿ ನೀಡಿ.


ಪ್ರತಿ ವರ್ಷ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಅಭಿಮಾನಿಗಳಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಈ ಬಾರಿ ಸೋಮವಾರ (ಮಾರ್ಚ್ ೧೭) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ಆರ್‌ಸಿಬಿ ಅನ್‌ಬಾಕ್ಸ್' ಕಾರ್ಯಕ್ರಮ ಏರ್ಪಟ್ಟಿತ್ತು.

ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಆರ್​ಸಿಬಿಯ ದತ್ತು ಪುತ್ರ ವಿರಾಟ್ ಕೊಹ್ಲಿ ತಂಡದ ನಾಯಕರಾಗಿರುವ ರಜತ್ ಪಾಟಿದಾರ್ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದರು. ನೂತನ ನಾಯಕನ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಈ ತಂಡವನ್ನು ದೀರ್ಘಕಾಲದವರೆಗೆ ಮುನ್ನಡೆಸಲಿದ್ದಾರೆ. ಅವರಿಗೆ ನೀವು ಸಾಧ್ಯವಾದಷ್ಟು ಪ್ರೀತಿ ನೀಡಿ. ರಜತ್ ಈ ಅದ್ಭುತ ಫ್ರಾಂಚೈಸಿಗಾಗಿ ಉತ್ತಮ ಕೆಲಸ ಮಾಡುತ್ತಾರೆ ಮತ್ತು ಈ ತಂಡವನ್ನು ಮುಂದೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು.

ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಟಿಕೆಟ್‌ಗಳು ಕೇವಲ ಒಂದು ತಾಸಿನಲ್ಲಿ ಮಾರಾಟವಾಗಿದ್ದು, ಇದು ಅಭಿಮಾನಿಗಳ ಆರ್‌ಸಿಬಿ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಈ ಕಾರ್ಯಕ್ರಮದಲ್ಲಿ ತಂಡದ ಆಟಗಾರರ ಪರಿಚಯ, ಹೊಸ ಜೆರ್ಸಿಯ ಅನಾವರಣ, ಮತ್ತು ಸಂಗೀತ ಕಾರ್ಯಕ್ರಮಗಳು ನಡೆದವು. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರರನ್ನು ಸಮೀಪದಿಂದ ನೋಡುಬ ಮತ್ತು ಅವರೊಂದಿಗೆ ಮಾತನಾಡುವ ಅವಕಾಶ ಕೂಡ ಲಭ್ಯವಾಗಿತ್ತು.

ಆರ್‌ಸಿಬಿ ತಂಡವು ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್ಸ್ಟೋನ್, ಜೋಶ್ ಹ್ಯಾಝಲ್‌ವುಡ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಈ ತಂಡದಲ್ಲಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ತಂಡದಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ರಜತ್ ಪಟಿದಾರ್ ಅವರ ನಾಯಕತ್ವದಲ್ಲಿ, ತಂಡವು ಐಪಿಎಲ್ ಕಪ್ ಗೆಲ್ಲುವ ಕನಸು ನನಸಾಗುವತ್ತ ಹೆಜ್ಜೆ ಹಾಕುತ್ತಿದೆ.

Read More
Next Story