ತಣ್ಣಗೆ ಆಸ್ವಾದಿಸಿ... ಬಿಸಿಬಿಸಿ, ಗರಿಗರಿ ಐಸ್ ಕ್ರೀಂ ದೋಸೆ - ಬೋಂಡಾ
x
ಅಮರ್‌ನಾಥ್‌ ಚಾಟ್ಸ್‌

ತಣ್ಣಗೆ ಆಸ್ವಾದಿಸಿ... ಬಿಸಿಬಿಸಿ, ಗರಿಗರಿ ಐಸ್ ಕ್ರೀಂ ದೋಸೆ - ಬೋಂಡಾ

ಬೆಂಗಳೂರಿನ ಸೌತ್‌ ಎಂಡ್‌ ಸರ್ಕಲ್‌ ಬಳಿ ʻಅಮರ್‌ನಾಥ್‌ ಚಾಟ್ಸ್‌ʼ ಸ್ಟ್ರೀಟ್‌ಫುಡ್‌ ಇದೆ. ಇಲ್ಲಿ ಐಸ್‌ಕ್ರೀಮ್‌ನಿಂದ ಮಾಡುವ ದೋಸೆ, ಬೋಂಡಾ ಮತ್ತಿತರ ತಿಂಡಿಗಳು ಗ್ರಾಹಕರನ್ನು ಸೆಳೆಯುತ್ತಿವೆ.


ಉದ್ಯಾನನಗರಿ ಬೆಂಗಳೂರು ವಿಶ್ವ ವಿಖ್ಯಾತಿ ಪಡೆಯಲು ಕೇವಲ ಐಟಿ ಕಂಪನಿಗಳು ಮಾತ್ರ ಕಾರಣವಲ್ಲ. ಇನ್ನೂ ಅನೇಕ ವಿಷಯಗಳು ಬೆಂಗಳೂರನ್ನು ಜಗತ್ತಿಗೆ ಪರಿಚಯಿಸುತ್ತಿವೆ.

ಅವುಗಳಲ್ಲೊಂದು ಇಲ್ಲಿನ ಬೀದಿಬದಿ ಆಹಾರ ಖಾದ್ಯಗಳು (ಸ್ಟ್ರೀಟ್‌ ಫುಡ್‌ಗಳು). ಸಿಲಿಕಾನ್‌ ಸಿಟಿಯ ಹಲವಡೆ ಸಿಗುವ ಬಗೆಬಗೆಯ ಭಕ್ಷ್ಯಗಳು ದೇಶ- ವಿದೇಶದ ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತವೆ. ಅದಕ್ಕೆ ಕಾರಣ ಇಲ್ಲಿಯ ಖಾದ್ಯಗಳಲ್ಲಿನ ವೈವಿಧ್ಯ ಹಾಗೂ ಆವಿಷ್ಕಾರ. ಅಂಥದ್ದೇ ಹೊಸ ಬಗೆಯ ಖಾದ್ಯ ನಿಮಗೆ ಇಲ್ಲಿ ಸಿಗುತ್ತದೆ.

ಬೆಂಗಳೂರಿನ ಸೌತ್‌ ಎಂಡ್‌ ಸರ್ಕಲ್‌ ಬಳಿ ʻಅಮರ್‌ನಾಥ್‌ ಚಾಟ್ಸ್‌ʼ ಸ್ಟ್ರೀಟ್‌ಫುಡ್‌ ಇದೆ. ಇಲ್ಲಿ ಐಸ್‌ಕ್ರೀಮ್‌ನಿಂದ ಮಾಡುವ ದೋಸೆ, ಬೋಂಡಾ ಮತ್ತಿತರ ತಿಂಡಿಗಳನ್ನು ಲಭ್ಯವಿದೆ. ಐಸ್‌ಕ್ರೀಮ್‌ನಿಂದಲೇ ಇಲ್ಲಿ ಬಗೆಬಗೆಯ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ಐಸ್‌ಕ್ರೀಂ ಇಡ್ಲಿ, ದೋಸೆ, ಬೋಂಡಾ ಈ ಮೆನುವಿನಲ್ಲಿ ಪ್ರಮುಖ. ಬಿಸಿ ಮತ್ತು ತಂಪನ್ನು ಜತೆಜತೆಯಾಗಿ ಹೊಟ್ಟೆಯೊಳಗೆ ಇಳಿಸುವುದಕ್ಕೆ ಇಲ್ಲಿ ಸಾಧ್ಯವಾಗುತ್ತದೆ. ವಿಶೇಷವಾಗಿರುವ ಏನಾದರೂ ತಿನ್ನಬೇಕು ಎಂದು ಅನಿಸಿದರೆ ಇಲ್ಲಿಗೆ ಭೇಟಿ ನೀಡಬಹುದು. 30 ರೂಪಾಯಿಂದ ಹಿಡಿದು 150 ರೂಗಳವರೆಗಿನ ತಿನಿಸುಗಳನ್ನು ಸವಿಯಬಹುದು.

ಮಂಜುನಾಥ್‌ ಎಂಬವವರು ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ. "ಜನರು ಹೊಸದಾಗಿ ಏನಾದರೂ ಇದೆಯಾ ಎಂದು ಕೇಳುತ್ತಾ ಇದ್ದರು. ಅವರಿಗಾಗಿ ಹೊಸದೇನಾದರೂ ಕೊಡಬೇಕು ಎಂಬ ಗುರಿಯೊಂದಿಗೆ ಐಸ್‌ಕ್ರೀಂ ಖಾದ್ಯಗಳು ಆರಂಭಿಸಿದ್ದೇನೆ," ಎನ್ನುತ್ತಾರೆ ಮಂಜುನಾಥ್‌. ತಾವೇ ಐಸ್‌ಕ್ರೀಮ್‌ ತಿನಿಸುಗಳನ್ನು ಹೇಗೆ ಮಾಡಬಹುದು ಎಂದು ಪ್ರಯೋಗ ಮಾಡಿ ಜನರಿಗೆ ಉಣಬಡಿಸುತ್ತಿದ್ದಾರೆ. ಐಸ್‌ ಕ್ರೀಂ ಖಾದ್ಯಗಳ ಜತೆಗೆ ಇಲ್ಲಿ ಹಲವು ಬಗೆಯ ಇಡ್ಲಿಗಳು, ಮಂಚೂರಿಯನ್ಸ್‌ ಮತ್ತು ಲೇಸ್‌ ಮಂಚೂರಿಯನ್‌ನಂಥ ಎಲ್ಲೂ ಸಿಗದ ಭಕ್ಷ್ಯಗಳು ಸಿಗುತ್ತವೆ.

ಬೆಂಗಳೂರು ಭಾರತದ ಸಿಲಿಕಾನ್‌ ಸಿಟಿ. ಹೈಟೆಕ್‌ ಕಂಪನಿಗಳು ಇಲ್ಲಿವೆ. ಜತೆಗೆ ನಾನಾ ಕೈಗಾರಿಕೆಗಳು ಇಲ್ಲಿ ನೆಲೆಯೂರಿವೆ. ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಜನರು ಬರುತ್ತಾರೆ. ಅವರೆಲ್ಲರಿಗೂ ನಾನಾ ಬಗೆಯ ತಿನಿಸುಗಳು ಇಷ್ಟವಾಗುತ್ತವೆ. ಅವುಗಳ ನಡುವೆ ಈ ಐಸ್‌ಕ್ರೀಂ ದೋಸೆ ಮತ್ತು ಬೋಂಡಾ ಮಾಡುವ ಅಮರನಾಥ್‌ ಫುಡ್ಸ್‌ ಗಮನ ಸೆಳೆಯುತ್ತಿದೆ. ಸಂಜೆಯಾದರೆ ಇಲ್ಲಿಗೆ ನೂರಾರು ಜನರು ಬಂದು ಸಾಲಾಗಿ ನಿಂತು ವಿಶೇಷ ತಿಂಡಿಗಳನ್ನು ಸವಿಯುತ್ತಿರುತ್ತಾರೆ.

ಈ ಬಗ್ಗೆ ದ ಫೆರಡಲ್‌ ಕರ್ನಾಟಕ ದ ವರದಿ ಇಲ್ಲಿದೆ.

Read More
Next Story