KFD Cases | ಚಿಕ್ಕಮಗಳೂರಿನಲ್ಲಿ ಒಂದೇ ದಿನ ನಾಲ್ವರಲ್ಲಿ  ಮಂಗನ ಕಾಯಿಲೆ ದೃಢ
x
ಕೆಎಫ್‌ಡಿ

KFD Cases | ಚಿಕ್ಕಮಗಳೂರಿನಲ್ಲಿ ಒಂದೇ ದಿನ ನಾಲ್ವರಲ್ಲಿ ಮಂಗನ ಕಾಯಿಲೆ ದೃಢ

KFD Disease | ಮಂಗನ ಕಾಯಿಲೆ ಪತ್ತೆಯಾದ ಗ್ರಾಮಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಮಾಡಿದ್ದು, ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಸದ್ಯ ಕಾಡಿಗೆ ತೆರಳದಂತೆ ಸೂಚನೆ ನೀಡಲಾಗಿದೆ.


ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿದ್ದು, ಒಂದೇ ದಿನ ನಾಲ್ವರಲ್ಲಿ ಮಂಗನ ಕಾಯಿಲೆ ದೃಢ ಪಟ್ಟಿದೆ. ಕೊಪ್ಪ ಮತ್ತು ಎನ್​ಆರ್​ ಪುರ ತಾಲೂಕಿನ ನಾಲ್ವರಲ್ಲಿ ಕೆಎಫ್​ಡಿ ದೃಢಪಟ್ಟಿದೆ.

ಒಟ್ಟು ಜಿಲ್ಲೆಯಲ್ಲಿ 18 ಜನರಲ್ಲಿ ಕೆಎಫ್​ಡಿ ಪತ್ತೆಯಾಗಿದೆ. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಮಂಗನ ಕಾಯಿಲೆ ಪತ್ತೆಯಾದ ಗ್ರಾಮಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಮಾಡಿದ್ದು, ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಸದ್ಯ ಕಾಡಿಗೆ ತೆರಳದಂತೆ ಸೂಚನೆ ನೀಡಲಾಗಿದೆ.

ಆರಂಭದಲ್ಲಿ ಕೆ.ಎಫ್.ಡಿ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮತ್ತಿಖಂಡ‌ ಗ್ರಾಮದ 25 ವರ್ಷದ ಯುವಕನಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಜಿಲ್ಲೆಯಲ್ಲಿ 7 ಜನರಲ್ಲಿ ಮಂಗನ ಕಾಯಿಲೆ ಕಾಣಸಿಕೊಂಡು ಆತಂಕ ಸೃಷ್ಟಿ ಮಾಡಿತ್ತು. NR ಪುರ ಗ್ರಾಮದ ಮೇಲ್ಪಾಲ್ ಗ್ರಾಮದಲ್ಲೇ ಮೂರು ಜನರಲ್ಲಿ KFD ಕಾಣಿಸಿಕೊಂಡಿತ್ತು.

ಕಳೆದ‌ ವರ್ಷ ಜಿಲ್ಲೆಯಲ್ಲಿ 132 ಜನರಲ್ಲಿ KFD ಕಾಣಿಸಿಕೊಂಡು ನಾಲ್ವರನ್ನ ಬಲಿ ಪಡೆದಿತ್ತು. ಕಾಡಂಚಿನ ತಾಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ತನ್ನ ರುದ್ರರೂಪ ತಾಳುವ ಮುನ್ನ ಅರೋಗ್ಯ ಇಲಾಖೆ ‌KFD ಅಲರ್ಟ್ ಘೋಷಣೆ ಮಾಡಿತ್ತು.

Read More
Next Story