
ಪ್ರಾತಿನಿಧಿಕ ಚಿತ್ರ.
ಹೈಡ್ರೊ ಗಾಂಜಾ ಸರಬರಾಜು; ಥಾಯ್ಲೆಂಡ್ನ ಐವರು ಬೆಂಗಳೂರು ಏರ್ಪೋರ್ಟ್ನಲ್ಲಿ ಅರೆಸ್ಟ್
ಬಂಧಿತರಿಂದ 20 ಕೆ.ಜಿ. ಹೈಪ್ರೊ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.
ಥಾಯ್ಲೆಂಡ್‌ನಿಂದ ವಿಮಾನದ ಮೂಲಕ ಹೈಡ್ರೊ ಗಾಂಜಾ ತಂದಿದ್ದ ಐವರನ್ನು, ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತರಿಂದ 20 ಕೆ.ಜಿ. ಹೈಡ್ರೊ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.
'ಬಂಧಿತರು 25ರಿಂದ 30 ವರ್ಷ ವಯಸ್ಸಿನ ಒಳಗಿನವರು. ಮಧ್ಯವರ್ತಿಗಳಿಂದ ಹೈಡ್ರೊ ಗಾಂಜಾವನ್ನು ಖರೀದಿಸಿ ಬೆಂಗಳೂರಿಗೆ ತಂದಿದ್ದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು' ಎಂದು ಎನ್‌ಸಿಬಿ ಹೇಳಿದೆ.
''ನಗರದಲ್ಲಿರುವ ಡ್ರಗ್ ಪೆಡ್ಲರ್ಗಳಿಗೆ ಹೈಡ್ರೊ ಗಾಂಜಾ ಪೂರೈಸಲು ವಿದೇಶದಿಂದ ತಂದಿದ್ದರು. ಹೈಡ್ರೊ ಗಾಂಜಾಕ್ಕೆ ಕಪ್ಪು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿದೆ. ಬಂಧಿತ ಆರೋಪಿಗಳ ವಿಚಾರಣೆ ನಡೆಯುತ್ತಿದೆ,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story