Filter Coffee | ಬಿಸಿ ಬಿಸಿ ಕಾಫಿ; ಬೆಂಗಳೂರಿನಲ್ಲಿ ಕಾಫಿ ಬೆಲೆ ಶೀಘ್ರ ಏರಿಕೆ
x
ಸಂಗ್ರಹ ಚಿತ್ರ.,

Filter Coffee | ಬಿಸಿ ಬಿಸಿ ಕಾಫಿ; ಬೆಂಗಳೂರಿನಲ್ಲಿ ಕಾಫಿ ಬೆಲೆ ಶೀಘ್ರ ಏರಿಕೆ

Filter Coffee ಕಾಫಿ ಪುಡಿಯ ಬೆಲೆ ಪ್ರತಿ ಕಿಲೋಗ್ರಾಂಗೆ 200 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಒಟ್ಟಾರೆ ಬೆಲೆ 800-850 ರೂ.ಗಳಿಗೆ ಏರಿಕೆಯಾಗಬಹುದು.


ಒಂದೆಡೆ ಕಾಫಿ ಬೆಳೆಗಾರರಿಗೆ ಶುಭ ಸುದ್ದಿ ಇದ್ದರೆ ಇನ್ನೊಂಡೆ ಕಾಫಿ ಪ್ರಿಯರಿಗೆ ಕಹಿ ಸುದ್ದಿ ಇದೆ. ಕಾಫಿ ಬೀಜಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಮುಂದಿನ ಮಾರ್ಚ್‌ ತಿಂಗಳಿನಿಂದ ಒಂದು ಕಪ್ ಕಾಫಿಯ ಬೆಲೆ 5 ರೂ.ಗಳವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಕಾಫಿ ಪುಡಿಯ ಬೆಲೆ ಪ್ರತಿ ಕಿಲೋಗ್ರಾಂಗೆ 200 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಒಟ್ಟಾರೆ ಬೆಲೆ 800-850 ರೂ.ಗಳಿಗೆ ಏರಿಕೆಯಾಗಬಹುದು. ಕೆಲವು ಅಂದಾಜಿನ ಪ್ರಕಾರ ಇದು 1,000ದಿಂದ 1,100 ರೂಗಳಿಗೂ ಏರಿಕೆಯಾಗಬಹುದು. ಹೀಗಾಗಿ ಹೋಟೆಲ್​ಗಳಲ್ಲಿ ಕಾಫಿಯ ದರವೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳಲ್ಲಿ, ಅರೇಬಿಕಾ ಕಾಫಿಯ ಕೊಯ್ಲು ಗಣನೀಯ ಕುಸಿತ ಕಂಡಿದೆ. ರೋಬಸ್ಟಾ ಉತ್ಪಾದನೆಯೂ ಕಡಿಮೆಯಾಗಿದ್ದು, ಇದು ಬೆಲೆ ಏರಿಕೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಹುರಿದ ಕಾಫಿ ಪುಡಿ ಮಾರಾಟ ಮಾಡುವ ರೋಸ್ಟರ್‌ಗಳು ಫೆಬ್ರವರಿ ಅಂತ್ಯದ ವೇಳೆಗೆ ಪ್ರತಿ ಕಿಲೋಗ್ರಾಂಗೆ 100 ರೂ ಹೆಚ್ಚಳ ಪ್ರಕಟಿಸಿದ್ದಾರೆ. ಮಾರ್ಚ್‌ ಅಂತ್ಯದ ವೇಳೆಗೆ 100 ರೂ.ಗಳಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

ಭಾರತೀಯ ಕಾಫಿ ರೋಸ್ಟರ್‌ಗಳ ಸಂಘ ಮತ್ತು ಕಾಫಿ ಮಂಡಳಿಯು ಹುರಿದ ಕಾಫಿಯ ಬೆಲೆ ಏರಿಕೆ ಅನಿವಾರ್ಯ ಎಂದು ದೃಢಪಡಿಸಿವೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡನೇ ಬೆಲೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿನ ಏರಿಳಿತಗಳು ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ಕಾಫಿ ಮಂಡಳಿಯ ಮೂಲಗಳು ತಿಳಿಸಿವೆ.

ಪರಿಣಾಮವಾಗಿ, ಕಾಫಿಯ ಬೆಲೆ ಏರಿಕೆಯ ಬಗ್ಗೆ ಕಳವಳ ಹೆಚ್ಚುತ್ತಿದೆ. ಆದರೂ ಏರಿಕೆಗೆ ನಿಖರವಾದ ಮೊತ್ತ ಮತ್ತು ಸಮಯವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಇದರ ಹೊರತಾಗಿಯೂ, ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪಿ.ಸಿ. ರಾವ್ ಅವರು ಬೆಲೆ ಏರಿಕೆ ಸಂಭವಿಸಿದಲ್ಲಿ ಅದು ತಾತ್ಕಾಲಿಕವಾಗಿರುತ್ತದೆ ಎಂದು ತಿಳಿಸಿದ್ದಾರೆ.

Read More
Next Story