Attack on Bus Conductor | ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಭಾಪತಿ ಹೊರಟ್ಟಿ ಒತ್ತಾಯ
x
ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

Attack on Bus Conductor | ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಭಾಪತಿ ಹೊರಟ್ಟಿ ಒತ್ತಾಯ

ಸ್ಥಳೀಯ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಎಲ್ಲರೂ ವೋಟ್ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ, ಚುನಾವಣೆ ಬಿಡಬೇಕು. ಕರ್ನಾಟಕದ ಹೆಬ್ಬಾಗಿಲು ಬೆಳಗಾವಿ. ಇಲ್ಲಿ ಇಂತಹುದು ನಡೆಯಬಾರದು. ಇದನ್ನು ಹತ್ತಿಕ್ಕುವ ಕೆಲಸ ಮಾಡಬೇಕು. ಈ ಸಂಬಂಧ ನಾಡಿದ್ದು ನಾನು ಸಿಎಂ ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.


ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದು, ಮಾತ್ರವಲ್ಲದೆ ಸಂಬಂಧವೇ ಇಲ್ಲದೆ ಕಂಡೆಕ್ಟರ್‌ ಮೇಲೆ ಪೋಕ್ಸೊ ಕಾಯಿದೆ ಕೇಸ್ ಹಾಕಿದ್ದಾರೆ. ಎಂಇಎಸ್‌ ಕನ್ನಡಿಗರ ಉದಾರಿತನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಆಗ್ರಹಿಸಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಘಟನೆ ಗಮನಕ್ಕೆ ಬಂದಾಗಲೇ ಗಂಭೀರವಾಗಿ ತೆಗೆದುಕೊಳ್ಳಲು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ನಾನೇ ಹೇಳಿದ್ದೆ. ಈಗ ಗಲಾಟೆ ಮಾಡಿದವರು ಹೊರಗಿನವರಲ್ಲ. ಬೆಳಗಾವಿಯಲ್ಲಿ ಇದ್ದವರೇ ಗಲಾಟೆ ಮಾಡಿದ್ದಾರೆ. ಪ್ರತಿ ಸಲ ಅವರು ಹೀಗೆ ಮಾಡುತ್ತಾರೆ. ನಾವು ಕನ್ನಡಿಗರು ಉದಾರವಾದಿಗಳು, ಅವರಂತೆ ಮಾಡಲು ಬಯಸುವುದಿಲ್ಲ ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಎಂಇಎಸ್‌ ಅವರು ನಮ್ಮ ರಾಜ್ಯದ ಮೇಲೆಯೇ ಅವಲಂಬಿತರಾಗಿದ್ದಾರೆ. ಬೆಳಗಾವಿಯಲ್ಲಿ ಈಗ ಎಂಇಎಸ್‌ ನವರಿಗೆ ಉದ್ಯೋಗ ಇಲ್ಲ. ನಾನು ಹಿಂದೆ ಅವರಿಗೆ ಜೋರು ಮಾಡಿದ್ದೇನೆ. ಸುವರ್ಣ ಸೌಧ ಎಂಇಎಸ್ ಕಾಟಕ್ಕೆ ಒಳಗಾಗಿದೆ. ಬೆಳಗಾವಿಯ ಕೆಲ ರಾಜಕಾರಣಿಗಳು ಎಂಇಎಸ್‌ಗರನ್ನು ಸೌಮ್ಯವಾಗಿ ನೋಡುತ್ತಾರೆ. ಹಾಗೆ ನೋಡಬಾರದು. ಚುನಾವಣೆ ನಮಗೆ ಮುಖ್ಯ ಅಲ್ಲ. ಬೆಳಗಾವಿ ಮತ್ತು ಬೆಳಗಾವಿ ಜನ ನಮಗೆ ಮುಖ್ಯ ಎಂದು ಅವರು ತಿಳಿಸಿದರು.

ಕನ್ನಡ ಚಳವಳಿಗಾರರ ಮೇಲೆ ಕೇಸ್ ಹಾಕಬಾರದು

ಕನ್ನಡ ಬಂದವರೇ ಮರಾಠಿ ಮಾತನಾಡುತ್ತಾರೆ, ಇದು ದುರ್ದೈವ. ಬೆಳಗಾವಿಯ ಕನ್ನಡ ಹೋರಾಟಕ್ಕೆ ಸರ್ಕಾರ ಸಹಕಾರ ಕೊಡಬೇಕು. ಕರವೇ ಕಾರ್ಯಕರ್ತರ ಬಂಧನ ಇದು ನಮ್ಮ ದುರ್ದೈವ, ನಮಗೆ ನಮ್ಮವರೇ ವೈರಿ ಆಗಿದ್ದಾರೆ. ಕರ್ನಾಟಕದಲ್ಲಿ ಹೋರಾಟ ಮಾಡುವುದು ಬಿಟ್ಟು ಬೇರೆಲ್ಲಿ ಮಾಡಬೇಕು? ಬೆಳಗಾವಿಯದಲ್ಲಿ ಎಂಇಎಸ್ ಹೋರಾಟ ಮಾಡಿದ್ರೆ ಸುಮ್ಮನೆ ಇರುತ್ತಾರೆ. ನಮ್ಮವರು ಹೋರಾಟ ಮಾಡಿದರೆ ತಡಿಯುತ್ತಾರೆ. ಕನ್ನಡ ಚಳವಳಿಗಾರರ ಮೇಲೆ ಕೇಸ್ ಹಾಕಬಾರದು ಎಂದು ಅವರು ತಿಳಿಸಿದರು.

ಸ್ಥಳೀಯ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಎಲ್ಲರೂ ವೋಟ್ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ, ಚುನಾವಣೆ ಬಿಡಬೇಕು. ಕರ್ನಾಟಕದ ಹೆಬ್ಬಾಗಿಲು ಬೆಳಗಾವಿ. ಇಲ್ಲಿ ಇಂತಹುದು ನಡೆಯಬಾರದು. ಇದನ್ನು ಹತ್ತಿಕ್ಕುವ ಕೆಲಸ ಮಾಡಬೇಕು. ಈ ಸಂಬಂಧ ನಾಡಿದ್ದು ನಾನು ಸಿಎಂ ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.

ಎಂಎಇಎಸ್ ಬ್ಯಾನ್ ಆಗಬೇಕು

ಎಂಎಇಎಸ್‌ನವರು ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ. ಇವರು ನಮ್ಮ ರಾಜ್ಯದಲ್ಲೇ ಇದ್ದು, ನಮ್ಮದೇ ಅನ್ನ-ನೀರು ಕುಡಿದು ನಮಗೆ ದ್ರೋಹ ಮಾಡುತ್ತಿದ್ದಾರೆ. ಇಂಥ ಸಂಘಟನೆಗಳನ್ನು ಸರ್ಕಾರ ಬ್ಯಾನ್ ಮಾಡಲು ಹಿಂದೇಟು ಹಾಕಬಾರದು. ಎಂಇಎಸ್ ಬ್ಯಾನ್ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.

ನಾನು ಶಿಕ್ಷಣ ಸಚಿವರಿದ್ದಾಗ ಕಠಿಣ ಕ್ರಮ ತೆಗೆದುಕೊಂಡಿದ್ದೆ. ಅವರು ಮುಂಬೈದಲ್ಲಿ ಕನ್ನಡ ಶಾಲೆ ಬಂದ್ ಮಾಡಿದರು. ಅದಕ್ಕೆ ಪ್ರತಿಯಾಗಿ ನಾವು ತಿರುಗೇಟು ಕೊಟ್ಟಿದ್ದೆ. ನಾನು ಇಲ್ಲಿನ ಮರಾಠಿ ಶಾಲೆಗೆ ಪುಸ್ತಕ ಕೊಟ್ಟಿರಲಿಲ್ಲ. ಮುಂಬೈದಲ್ಲಿ ಕನ್ನಡ ಶಾಲೆ ಪುನರ್ ಆರಂಭ ಮಾಡಿದರು. ಆಗಲೇ ನಾ ಪುಸ್ತಕಗಳನ್ನು ನೀಡಿದೆ ಎಂದು ಅವರು ತಿಳಿಸಿದರು.

ಎಲ್ಲ ಸರ್ಕಾರ ಎಂಇಎಸ್ ನ್ನು ತಲೆ ಮೇಲೆ ಇಟ್ಟುಕೊಂಡಿದ್ದಾರೆ. ನಾನು ಕಠಿಣ ಕ್ರಮ ತೆಗೆದುಕೊಂಡಿದ್ದು ಸೊಲ್ಲಾಪುರದಲ್ಲಿ ನನಗೆ ಬಹಿಷ್ಕಾರ ಹಾಕಿದ್ರು. ಆದರೂ ನಾನು ಹಿಂದೆ ಸರಿದಿರಲಿಲ್ಲ. ನಮ್ಮ ಅನ್ನ ತಿಂದು ಹೀಗೆ ಮಾಡುತ್ತಿರಾ ಅಂತಾ ಕೇಳಿದ್ದೆ ಎಂದು ಅವರು ತಿಳಿಸಿದರು.

Read More
Next Story