
ನಟಿ ರನ್ಯಾ
ನಟಿ ರನ್ಯಾ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ
ಬಳಿಕ, ಜನವರಿ 18 ರಂದು ಅಮೆರಿಕಾಕ್ಕೆ ತೆರಳಿ ಏಳು ದಿನ ಅಲ್ಲೇ ತಂಗಿದ್ದರು. ಜನವರಿ 25 ರಂದು ಅಮೆರಿಕಾದಿಂದ ಬೆಂಗಳೂರಿಗೆ ವಾಪಸ್ಸು ಆಗಿದ್ದರು. ನಂತರ ಫೆಬ್ರವರಿಯಿಂದ ನಿರಂತರವಾಗಿ ದುಬೈಗೆ ತೆರಳಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರನ್ಯಾ ರಾವ್ ವಿರುದ್ಧ ಡಿಆರ್‌ಐ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಕೇಂದ್ರ ತನಿಖಾ ದಳ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣ ಸಂಬಂಧ ಸಿಬಿಐ ಮುಂಬೈ ಹಾಗೂ ಬೆಂಗಳೂರಿನಲ್ಲಿ ತನಿಖೆ ಆರಂಭಿಸಿದೆ. 14.20 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪ ನಟಿಯ ಮೇಲಿದೆ. ನಟಿ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಡಿಆರ್‌ಐ ಅಧಿಕಾರಿಗಳು ಈಗಾಗಲೇ ವಶಪಡಿಸಿಕೊಂಡಿದ್ದಾರೆ.
ರನ್ಯಾ ರಾವ್ ಡಿಆರ್‌ಐ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯ ಪ್ರಕಾರ, ಯೂರೋಪ್, ಅಮೇರಿಕ, ದುಬೈ ದೇಶಗಳನ್ನು ಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ 24 ರಂದು ದುಬೈಗೆ ತೆರಳಿ, ಡಿಸೆಂಬರ್ 27 ಕ್ಕೆ ಭಾರತಕ್ಕೆ ವಾಪಸ್ಸು ಆಗಿದ್ದರು.
ಬಳಿಕ, ಜನವರಿ 18 ರಂದು ಅಮೆರಿಕಾಕ್ಕೆ ತೆರಳಿ ಏಳು ದಿನ ಅಲ್ಲೇ ತಂಗಿದ್ದರು. ಜನವರಿ 25 ರಂದು ಅಮೆರಿಕಾದಿಂದ ಬೆಂಗಳೂರಿಗೆ ವಾಪಸ್ಸು ಆಗಿದ್ದರು. ನಂತರ ಫೆಬ್ರವರಿಯಿಂದ ನಿರಂತರವಾಗಿ ದುಬೈಗೆ ತೆರಳಿದ್ದಾರೆ. ಫೆಬ್ರವರಿ 2 ರಿಂದ ಮಾರ್ಚ್ 3ವರೆಗೂ ಐದು ಬಾರಿ ರನ್ಯಾ ರಾವ್ ದುಬೈಗೆ ತೆರಳಿದ್ದರು.
ಮಾರ್ಚ್ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಪ್ತಿ ಮಾಡಿದ್ದರು. ಕಸ್ಟಮ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ಚಿನ್ನವನ್ನು ಬೆಲ್ಟ್ ಮತ್ತು ಜಾಕೆಟ್ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎನ್ನಲಾಗಿದೆ. ಆನಂತರ ಆಕೆಯ ಮನೆಯಲ್ಲಿ ಶೋಧ ನಡೆಸಿದ್ದ ಡಿಆರ್‌ಐ ಅಧಿಕಾರಿಗಳು ₹2.06 ಕೋಟಿ ಮೌಲ್ಯದ ಆಭರಣ ಮತ್ತು ₹2.67 ಕೋಟಿ ನಗದು ಜಪ್ತಿ ಮಾಡಿದ್ದರು. ಇದರಿಂದ ಪ್ರಕರಣದಲ್ಲಿ ಒಟ್ಟು ಜಪ್ತಿಯು ₹17.29 ಕೋಟಿಗೆ ಏರಿಕೆಯಾಗಿದೆ.