
ವಿಂಗ್ ಕಮಾಂಡರ್ ಹಾಗೂ ಟೆಕಿ ನಡುವಿನ ಸಿಸಿಟಿವಿ ಕ್ಯಾಮರ ದೃಶ್ಯ
Case registered ಹಲ್ಲೆ ನಾಟಕವಾಡಿದ್ದ ಕಮಾಂಡರ್ ವಿರುದ್ಧ ಪ್ರಕರಣ ದಾಖಲು
ಟೆಕಿ ಮೇಲೆ ದಾಳಿ ಮಾಡಿ ತನ್ನ ಮೇಲೆಯೇ ದಾಳಿಯಾಗಿದೆ ಎಂದು ನಾಟಕವಾಡಿದ್ದ ವಿಂಗ್ ಕಮಾಂಡರ್ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಬೈಯಪನಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಾಹನ ಸವಾರ ಟೆಕಿ ಮೇಲೆ ದಾಳಿ ಮಾಡಿ ತನ್ನ ಮೇಲೆಯೇ ದಾಳಿಯಾಗಿದೆ ಎಂದು ನಾಟಕವಾಡಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಸಿಸಿಟಿವಿ ಕ್ಯಾಮೆರಾದಲ್ಲಿನ ದೃಶ್ಯ ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಬೈಯಪನಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೊಲ್ಕತ್ತಾ ಮೂಲದ ವಿಂಗ್ ಕಮಾಂಡರ್ ತನ್ನ ಪತ್ನಿಯನ್ನು ಭೇಟಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದರು. ಸೋಮವಾರ (ಏಪ್ರಿಲ್ 21) ವಾಪಸ್ ಕೊಲ್ಕತ್ತಾಗೆ ಮರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ತೆರಳುತ್ತಿದ್ದಾಗ ಖಾಸಗಿ ಕಂಪನಿಯ ಟೆಕಿ ವಿಕಾಸ್ ಕುಮಾರ್ ಹಾಗೂ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ನಡುವೆ ಮಾತಿನ ಚಕಮಕಿ ನಡೆದು ನಂತರ ಪರಸ್ಪರ ಕೈ ಮಿಲಾಯಿಸಿದ್ದರು. ಟೆಕಿ ಮೇಲೆ ಹಲ್ಲೆ ಮಾಡಿ ತನ್ನ ಮೇಲೇಯೇ ಹಲ್ಲೆಯಾಗಿದೆ ಎಂದು ವಿಂಗ್ ಕಮಾಂಡರ್ ನಾಟಕವಾಡಿದ್ದರು. ಪೊಲೀಸರು ವಿಂಗ್ ಕಮಾಂಡರ್ ಪತ್ನಿ ನೀಡಿದ ದೂರನ್ನು ಆಧರಿಸಿ ಟೆಕಿ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಿದ್ದರು.
ಟೆಕಿ ವಿಕಾಸ್ ಕುಮಾರ್ ಮೇಲೆಯೇ ವಿಂಗ್ ಕಮಾಂಡರ್ ಶಿಲಾದಿತ್ಯ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ವಿಂಗ್ ಕಮಾಂಡರ್ ನಾಟಕ ಬಯಲಾಗಿದ್ದು ಇದೀಗ ವಿಂಗ್ ಕಮಾಂಡರ್ ಮೇಲೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.