Namma Metro Fare Hike | ಮೆಟ್ರೋ ಪ್ರಯಾಣ ದರ ಕಡಿತ ಇಲ್ಲ; ಸ್ಟೇಜ್‌ ಮರ್ಜ್‌: ಬಿಎಂಆರ್‌ಸಿಎಲ್‌
x
ನಮ್ಮ ಮೆಟ್ರೋ

Namma Metro Fare Hike | ಮೆಟ್ರೋ ಪ್ರಯಾಣ ದರ ಕಡಿತ ಇಲ್ಲ; ಸ್ಟೇಜ್‌ ಮರ್ಜ್‌: ಬಿಎಂಆರ್‌ಸಿಎಲ್‌

Namma Metro Fare Hike | ಕಮಿಟಿಯ ವರದಿ ಪ್ರಕಾರ ದರ ನಿಗದಿ ಮಾಡಿದ್ದೇವೆ. ದರ ನಿಗದಿ ಮಾಡುವಾಗ ಸ್ಟೇಜ್ ಜಂಪ್ ಆಗಿದೆ ಎಂಬ ದೂರುಗಳು ಬಂದಿದ್ದು, ಆ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ


ನಮ್ಮ ಮೆಟ್ರೋದ ಕೆಲವು ಸ್ಟೇಜ್‌ಗಳಲ್ಲಿ ಹೆಚ್ಚಾಗಿರುವ ಪ್ರಯಾಣ ದರವನ್ನು ಪರಿಷ್ಕರಿಸುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್‌ ತಿಳಿಸಿದ್ದಾರೆ.

ಮೆಟ್ರೋ ಪ್ರಯಾಣ ದರ ಏರಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, 2010ರಿಂದ ಆರಂಭವಾಗಿರುವ ಮೆಟ್ರೋ 15 ವರ್ಷಗಳಿಂದ ಸೇವೆ ನೀಡುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ದರ ಪರಿಷ್ಕರಣೆಗೆ ಮನವಿ ಮಾಡಿದ್ದೆವು. ಕಮಿಟಿಯ ವರದಿ ಪ್ರಕಾರ ದರ ನಿಗದಿ ಮಾಡಿದ್ದೇವೆ. ಮಾಹಿತಿ ಪ್ರಕಾರ ದರ ನಿಗದಿ ಮಾಡುವಾಗ ಹಲವು ಕಡೆ ಸ್ಟೇಜ್ ಜಂಪ್ ಆಗಿದೆ ಎಂಬ ದೂರುಗಳು ಬಂದಿವೆ. ಈ ಹಿನ್ನಲೆ ದರ ಪರಿಷ್ಕರಣೆ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಿದ್ದೇವೆ. ಈ ಬಗ್ಗೆ ನಿರ್ದೇಶಕರ ಮಂಡಳಿಯಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

ಪ್ರಯಾಣ ದರ ಇಳಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಸೂಚಿಸಿದ್ದಾರೆ. ಬುಧವಾರ ರಾತ್ರಿ ಈ ಸಂಬಂಧ ಕಾರ್ಯದರ್ಶಿಗಳ ಜೊತೆ ಬೋರ್ಡ್ ಮೀಟಿಂಗ್ ಮಾಡಿದ್ದೇವೆ. ಮೆಟ್ರೋ ಕಾಯ್ದೆಯ ಸೆಕ್ಷನ್ 37 ಪ್ರಕಾರ ದರ ಪರಿಷ್ಕರಣೆ ಬಗ್ಗೆ ಕಮಿಟಿ ಮಾಡಿದ್ದೇವೆ. ಜಂಪ್ ಆಗಿರೋ ಫೇರ್‌ನಲ್ಲಿ 90-100 % ಹೆಚ್ಚಾಗಿದ್ರೆ‌, ಅದನ್ನು ಪರಿಶೀಲಿಸಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮೆಟ್ರೋ ನಿಯಮಗಳ ಪ್ರಕಾರವೇ ನಡೆಯುತ್ತಿದೆ. ದರ ಏರಿಕೆ ಮಾಡಿದರೆ ನಮಗೆ ಸಾಕಷ್ಟು ಅನುಕೂಲ ಆಗಲಿದೆ. ಸರ್ಕಾರದ ಸಬ್ಸಿಡಿ ಬಳಿಕವೂ ನಷ್ಟವಾದ್ರೆ ಸಮಸ್ಯೆ ಆಗಲಿದೆ. ಸ್ಟಾಫ್‌ಗಳಿಗೂ ಸಮಸ್ಯೆ ಆಗಲಿದೆ. ಶೀಘ್ರವೇ ಟಿಕೆಟ್ ದರ ಕಡಿಮೆ ಮಾಡಿ ಅದರ ಚಾರ್ಟ್‌ ನೀಡುತ್ತೇವೆ. ಡಬಲ್ ಜಂಪ್ ಆಗಿರುವ ದರ ಪರಿಶೀಲನೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಏರಿಕೆಯಾಗಿರುವ ದರವನ್ನು ಸಾರಾಸಗಟಾಗಿ ಕಡಿಮೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆದಿರುವ ಅವರು, ನಿಲ್ದಾಣಗಳ ನಡುವೆ ಸ್ಟೇಜ್‌ ಜಂಪ್‌ ಆಗಿ ಶೇ.50ಕ್ಕಿಂತ ಅಧಿಕ ದರ ಹೆಚ್ಚಳವಾಗಿರುವುದನ್ನು ಪರಿಶೀಲಿಸಿ ಸ್ಟೇಜ್‌ ಮರ್ಜ್‌ ಮಾಡುವ ಮೂಲಕ ಸರಿಪಡಿಸಲಾಗುವುದು. ಆ ಮೂಲಕ ಪ್ರಯಾಣಿಕರಿಗೆ ಒಂದಿಷ್ಟು ಸಮಾಧಾನಕರ ದರ ದೊರೆಯಲಿದೆ ಎಂದು ಅವರು ಹೇಳಿದರು.

Read More
Next Story