Cyber Crime | ಬೆಂಗಳೂರು ಸೈಬ‌ರ್ ವಂಚನೆಯ ಹಬ್: ದಯಾನಂದ
x
ಪೊಲೀಸ್ ಕಮಿಷನರ್ ಬಿ.ದಯಾನಂದ

Cyber Crime | ಬೆಂಗಳೂರು ಸೈಬ‌ರ್ ವಂಚನೆಯ ಹಬ್: ದಯಾನಂದ

'ಬೆಂಗಳೂರು ನಗರ ಸೈಬರ್ ವಂಚನೆಗಳ ಹಬ್ ಆಗಿ ಬದಲಾಗುತ್ತಿದ್ದು ವಿದ್ಯಾವಂತರು, ವೃತ್ತಿಪರರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಸೈಬರ್ ಜಗತ್ತಿನಲ್ಲಿ ವ್ಯವಹರಿಸುವಾಗ ಹೆಚ್ಚು ಎಚ್ಚರದಿಂದ ಇರಬೇಕು' ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಸಲಹೆ ನೀಡಿದರು.


Click the Play button to hear this message in audio format

'ಬೆಂಗಳೂರು ನಗರವು ಸೈಬರ್ ವಂಚನೆಗಳ ಹಬ್ ಆಗಿ ಬದಲಾಗುತ್ತಿದ್ದು ವಿದ್ಯಾವಂತರು, ವೃತ್ತಿಪರರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಸೈಬರ್ ಜಗತ್ತಿನಲ್ಲಿ ವ್ಯವಹರಿಸುವಾಗ ಹೆಚ್ಚು ಎಚ್ಚರದಿಂದ ಇರಬೇಕು' ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಸಲಹೆ ನೀಡಿದರು.

ಬೆಂಗಳೂರು ಆಕಾಶವಾಣಿ, ಮಂಗಳೂರಿನ ಮೀಡಿಯಾ ಅಲ್ಯೂಮಿನಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ (ಮ್ಯಾಮ್) ಮತ್ತು ನಗರದ ಶಾರದಾ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಬನ್ನೇರುಘಟ್ಟ ರಸ್ತೆಯ ಬಸವನಪುರದ ರಾಕ್‌ವುಡ್ ಗ್ರೀನ್ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಸೈಬ‌ರ್ ಅಪರಾಧ ನಡೆದ ತಕ್ಷಣವೇ ನಮಗೆ ಮಾಹಿತಿ ನೀಡಿದರೆ, ವಂಚಿಸಿದ ಹಣವನ್ನು ವಾಪಸ್ ಪಡೆಯಬಹುದು. ವಂಚನೆಗೆ ಒಳಗಾಗಿರುವುದು ಗೊತ್ತಾದ ತಕ್ಷಣವೇ, 1930 ಸಹಾಯವಾಣಿಗೆ ಕರೆ ಮಾಡಬಹುದು. ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲೂ ದೂರು ನೀಡಬಹುದು' ಎಂದು ಹೇಳಿದರು.

ಬೆಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಎ.ಎಸ್. ಶಂಕರನಾರಾಯಣ ಮಾತನಾಡಿ, 'ಅಪರಾಧಗಳು ಈಗ ಹೊಸ ಸ್ವರೂಪ ಪಡೆದುಕೊಂಡಿವೆ. ದೈಹಿಕ ಅಪರಾಧಗಳಂತೆಯೇ ಬೌದ್ಧಿಕ ಅಪರಾಧಗಳೂ ಹೆಚ್ಚಳವಾಗಿವೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ' ಎಂದರು.

ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ.ವೆಂಕಟೇಶ್ ಮೂರ್ತಿ, ಬೆಂಗಳೂರು ಉತ್ತರ ಸೆನ್ ಠಾಣೆ ಇನ್‌ಸ್ಪೆಕ್ಟ‌ರ್ ಶಿವರತ್ನಾ ಎಸ್. ಮತ್ತು ಆ್ಯಂಝನ್ ಟೆಕ್ನಾಲಜೀಸ್‌ನ ಆಡಳಿತ ನಿರ್ದೇಶಕ ತರುಣ್ ಕೃಷ್ಣಮೂರ್ತಿ ಅವರು ಸೈಬ‌ರ್ ಅಪರಾಧಗಳ ಬಗ್ಗೆ ವಿವರಿಸಿದರು. ಶಾರದಾ ವಿಕಾಸ ಟ್ರಸ್ಟ್ ಅಧ್ಯಕ್ಷ ಡಿ.ವಿ. ವೆಂಕಟಾಚಲಪತಿ, ಏವಿಯೇಷನ್ ಅಕಾಡೆಮಿ ಸಿಇಒ ಶ್ರೀಲತಾ ದಿವಾಕರ್, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿ ಫ್ಲೋರಿನ್ ರೋಜ್ ಭಾಗವಹಿಸಿದ್ದರು.

Read More
Next Story