AICC ರಾಜ್ಯ ಉಸ್ತುವಾರಿ | ಹರಿಪ್ರಸಾದ್ ಹರ್ಯಾಣಕ್ಕೆ, ನಾಸಿರ್‌ ಜಮ್ಮು-ಕಾಶ್ಮೀರಕ್ಕೆ
x
ಬಿ.ಕೆ ಹರಿಪ್ರಸಾದ್‌

AICC ರಾಜ್ಯ ಉಸ್ತುವಾರಿ | ಹರಿಪ್ರಸಾದ್ ಹರ್ಯಾಣಕ್ಕೆ, ನಾಸಿರ್‌ ಜಮ್ಮು-ಕಾಶ್ಮೀರಕ್ಕೆ

ಹರಿಯಾಣ ರಾಜ್ಯದ ಪಕ್ಷದ ಉಸ್ತುವಾರಿಯಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಿಸಲಾಗಿದೆ.


ಎಐಸಿಸಿ ರಾಜ್ಯ ಉಸ್ತುವಾರಿಗಳನ್ನು ಬದಲಾಯಿಸಲಾಗಿದ್ದು, ಹಿರಿಯ ನಾಯಕ ಬಿ ಕೆ ಹರಿಪ್ರಸಾದ್, ಪ್ರಧಾನ ಕಾರ್ಯದರ್ಶಿ ನಾಸೀರ್ ಹುಸೇನ್ ಸೇರಿದಂತೆ ಹಲವರಿಗೆ ವಿವಿಧ ರಾಜ್ಯಗಳ ಹೊಣೆಗಾರಿಕೆ ನೀಡಲಾಗಿದೆ.

ಹರಿಯಾಣ ರಾಜ್ಯದ ಪಕ್ಷದ ಉಸ್ತುವಾರಿಯಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಿಸಲಾಗಿದೆ. ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿ‌ರ್ ಹುಸೇನ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪಕ್ಷದ ಸಂಘಟನೆಯ ಪುನರ್ ರಚನೆ ಪ್ರಕ್ರಿಯೆಗೆ ಪಕ್ಷ ಚಾಲನೆ ನೀಡಿದೆ. ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಫೇಲ್ ಅವರಿಗೂ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಹರಿಪ್ರಸಾದ್?

ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿ ರಾಜ್ಯ ಸಚಿವ ಸಂಪುಟದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೂ ಬಿ.ಕೆ. ಹರಿಪ್ರಸಾದ್ ಪೈಪೋಟಿಯಲ್ಲಿದ್ದಾರೆ.

ಹರಿಪ್ರಸಾದ್ ಅವರು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿದ್ದು ಹಲವು ರಾಜ್ಯಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಮೂರು ವರ್ಷಗಳ ಹಿಂದೆ ರಾಜ್ಯ ರಾಜಕಾರಣಕ್ಕೆ ಬಂದಿದ್ದರು. ರಾಷ್ಟ್ರ ರಾಜಕಾರಣದಲ್ಲಿ ಅವರ ಅನುಭವವನ್ನು ಮತ್ತೆ ಬಳಸಿಕೊಳ್ಳಲು ಪಕ್ಷ ತೀರ್ಮಾನಿಸಿದ್ದು, ಮತ್ತೆ ಅವರು ದೆಹಲಿಗೆ ವಾಪಸ್ಸಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

Read More
Next Story