ಸ್ನೇಹಮಯಿ ಕೃಷ್ಣ ವಿರುದ್ಧ ವಾಮಾಚಾರ: ತಲೆಮರೆಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿ!
x
ಸ್ನೇಹಮಯಿ ಕೃಷ್ಣ

ಸ್ನೇಹಮಯಿ ಕೃಷ್ಣ ವಿರುದ್ಧ ವಾಮಾಚಾರ: ತಲೆಮರೆಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿ!

ವಾಮಾಚಾರ ಪ್ರಕರಣದಲ್ಲಿ ಉಡುಪಿಯ ಮಹಿಳಾ ಸಬ್​ಇನ್​ಸ್ಪೆಕ್ಟರ್ ಸುಮಾ​ ಹೆಸರು ಥಳುಕು ಹಾಕಿಕೊಂಡಿದೆ. ರಾಮಸೇನಾ ಮುಖಂಡ ಪ್ರಸಾದ್ ಅತ್ತಾವರ್ ಪತ್ನಿ ಸುಮಾ ನಂಟಿದೆ ಎಂದು ಹೇಳಲಾಗಿದೆ.


ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಗೋವಿಂದರಾಜು ಸೇರಿ ಹಲವರ ಮೇಲೆ ವಾಮಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ತಲೆಮರೆಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸ್ನೇಹಮಯಿ ಕೃಷ್ಣ ಮೇಲೆ ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಇಬ್ಬರು ಆರೋಪಿಗಳು ಕಾಳಿಕಾಂಬ ಗುಡಿಯ ಅರ್ಚಕರಿಗೆ ವಿಚಾರ ತಿಳಿಸದೆ ಕುರಿಗಳನ್ನು ಬಲಿ ನೀಡಿ, ವಾಮಾಚಾರ ಮಾಡಿದ್ದಾರೆ ಎಂದು ಪೊಲೀಸರು ತನಿಖೆಯಲ್ಲಿ ತಿಳಿದುಬಂದಿತ್ತು.

ವಾಮಾಚಾರ ಪ್ರಕರಣದಲ್ಲಿ ಉಡುಪಿಯ ಮಹಿಳಾ ಸಬ್​ಇನ್​ಸ್ಪೆಕ್ಟರ್ ಸುಮಾ​ ಹೆಸರು ಥಳುಕು ಹಾಕಿಕೊಂಡಿದೆ. ರಾಮಸೇನಾ ಮುಖಂಡ ಪ್ರಸಾದ್ ಅತ್ತಾವರ್ ಪತ್ನಿ ಸುಮಾ ನಂಟಿದೆ ಎಂದು ಹೇಳಲಾಗಿದೆ. ಮಹಿಳಾ ಪೊಲೀಸ್ ಅಧಿಕಾರಿ ನಂಟಿನ ಬಗ್ಗೆ ಖುದ್ದಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ವಾಮಾಚಾರ ಪ್ರಕರಣದಲ್ಲಿ ಅವರ ಹೆಸರು ಕೇಳಿಬರುತ್ತಿದ್ದಂತೆ ಅವರು ತಲೆಮರೆಸಿಕೊಂಡಿದ್ದಾರೆ. ಮಂಗಳೂರು ಪೊಲೀಸರು ನೋಟಿಸ್ ಕಳುಹಿಸಿದರೂ ಯಾವ ಉತ್ತರವೂ ಬಂದಿಲ್ಲ. ಪ್ರಸಾದ್ ಅತ್ತಾವರ ಮೊಬೈಲ್​ನಲ್ಲಿ ಸಿಕ್ಕ ವಾಮಾಚಾರ ಫೋಟೊಗಳಲ್ಲೂ ಸುಮಾ ಹೆಸರಿದೆ. ಪ್ರಾಣಿ ಬಲಿ ಕೊಡುವ ವೇಳೆ ಚೀಟಿಯಲ್ಲೂ ಸುಮಾ ಹೆಸರು ಉಲ್ಲೇಖಿಸಲಾಗಿದೆ. ಪ್ರಸಾದ್ ಅತ್ತಾವರ, ಸ್ನೇಹಮಯಿ ಕೃಷ್ಣ, ಗಂಗರಾಜು, ಶ್ರೀನಿಧಿ ಹೆಸರಿನ ಜೊತೆ ಸುಮಾ ಹೆಸರು ಉಲ್ಲೇಖಿಸಲಾಗಿದೆ.

Read More
Next Story