Womens T20 World Cup | ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು
x

Women's T20 World Cup | ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು


ದುಬೈ: ನಾಯಕಿ ಸೋಫಿ ಡಿವೈನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮಹಿಳಾ ಟಿ 20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ 58 ರನ್‌ಗಳ ಜಯ ಸಾಧಿಸಿದೆ. ಟಿ 20I ಪಂದ್ಯದಲ್ಲಿ ಭಾರತದ ವಿರುದ್ಧ ಅತಿ ದೊಡ್ಡ ಗೆಲುವಿನೊಂದಿಗೆ, ನ್ಯೂಜಿಲೆಂಡಿನ ಸರಣಿ ಸೋಲು ಕೊನೆಗೊಂಡಿದೆ.

ಬ್ಯಾಟಿಂಗಿಗೆ ಕಷ್ಟಕರವಾಗಿದ್ದ ಪಿಚ್‌ನಲ್ಲಿ, ಡಿವೈನ್(36 ಎಸೆತ, ಅಜೇಯ 57 ರನ್ ) ಅವರ ಆಟದಿಂದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 160 ರನ್‌ ತಲುಪಿತು.

35 ವರ್ಷ ವಯಸ್ಸಿನ ಕಿವಿ ದಂತಕಥೆ ತಮ್ಮ ನಿಧಾನಗತಿಯ ಬೌಲರ್‌ಗಳನ್ನು ಬಳಸಿಕೊಂಡು, ಭಾರತೀಯ ಆಟಗಾರ್ತಿಯರನ್ನು ಉಸಿರುಗಟ್ಟಿಸಿದರು. ಆನಂತರ ವೇಗದ ಬೌಲರ್‌ ಗಳನ್ನು ಬಳಸಿಕೊಂಡು, 19 ಓವರ್‌ಗಳಲ್ಲಿ 102 ರನ್‌ ಗಳಿಸಲಷ್ಟೇ ಅವಕಾಶ ನೀಡಿದರು.

ಡಿವೈನ್ ಮತ್ತು ಅವರ ಆರಂಭಿಕ ಆಟಗಾರರಾದ ಸುಜಿ ಬೇಟ್ಸ್ ಮತ್ತು ಜಾರ್ಜಿಯಾ ಪ್ಲಿಮ್ಮರ್ ಜವಾಬ್ದಾರಿಯುತ ಆಟ ಆಡಿದರು. ಭಾರತ ಹೆಚ್ಚಿನ ಬ್ಯಾಟರ್‌ಗಳು 30 ಗಜ ವೃತ್ತವನ್ನು ತೆರವುಗೊಳಿಸುವಷ್ಟು ಸ್ನಾಯು ಬಲ ಹೊಂದಿರಲಿಲ್ಲ. ಬೇಟ್ಸ್ (24 ಎಸೆತಗಳಲ್ಲಿ 27) ಮತ್ತು ಯಂಗ್ ಪ್ಲಿಮ್ಮರ್ (23 ಎಸೆತಗಳಲ್ಲಿ 34) ಮೊದಲ ಆರು ಓವರ್‌ಗಳಲ್ಲಿ 55 ರನ್ ಸೇರಿಸಿತು. ಭಾರತ ಶಫಾಲಿ ವರ್ಮಾ (2), ಸ್ಮೃತಿ ಮಂಧಾನ (12) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (15) ಅವರನ್ನು ಬೇಗ ಕಳೆದುಕೊಂಡಿತು. ಪವರ್‌ಪ್ಲೇಯಲ್ಲಿ ಕೇವಲ 43 ರನ್‌ ಗಳಿಸಲು ಸಾ ಧ್ಯವಾಯಿತು.

ಡಿವೈನ್‌ ಒಂದು ತುದಿಯಿಂದ ಎಡಗೈ ಸ್ಪಿನ್ನರ್ ಈಡನ್ ಕಾರ್ಸನ್ (4 ಓವರ್‌, 2/34) ಅವರಿಂದ ಬೌಲಿಂಗ್ ಪ್ರಾರಂಭಿಸಿದರು. ಶಫಾಲಿ ಬೌಲರ್‌ಗೆ ಸರಳ ರಿಟರ್ನ್ ಕ್ಯಾಚ್ ಕೊಟ್ಟರು. ಕಳೆದ ಕೆಲವು ವರ್ಷಗಳಿಂದ ಭಾರತದ ಅತ್ಯುತ್ತಮ ಮತ್ತು ಸ್ಥಿರ ಪ್ರದರ್ಶನ ನೀಡುತ್ತಿರುವ ಮಂಧಾನಾ ಬೇಗ ಔಟಾದರು. ರೋಸ್ಮರಿ ಮೈರ್ (4 ಓವರ್‌ಗಳಲ್ಲಿ 4/19) ಅವರ ಚೆಂಡು ಹರ್ಮನ್‌ಪ್ರೀತ್‌ ಅವರ ಪ್ಯಾಡ್‌ಗೆ ಹೊಡೆಯಿತು.

ಲಿಯಾ ತಹುಹು (4 ಓವರ್‌, 3/15) ಅವರನ್ನು ಜೆಮಿಮಾ ರಾಡ್ರಿಗಸ್ ಮಿಡ್ ಆನ್‌ನಲ್ಲಿ ಹೊಡೆಯಲು ಯತ್ನಿಸಿದರು. ಆದರೆ ಹೊಡೆತದಲ್ಲಿ ಶಕ್ತಿಯ ಕೊರತೆಯಿದ್ದಿತು; ರಿಚಾ ಘೋಷ್ ಮಿಡ್ ಆಫ್‌ ಹೊಡೆತದಲ್ಲಿ ಮುಗ್ಗರಿಸಿದರು. ಭಾರತೀಯ ಸವಾಲು ಕ್ಷಣಾರ್ಧದಲ್ಲಿ ಅಂತ್ಯಗೊಂಡಿತು.

ಜಿಗುಟಾದ ಟ್ರ್ಯಾಕ್‌ನಲ್ಲಿ ದೀಪ್ತಿ ಶರ್ಮಾ (4 ಓವರ್‌, 0/45) ಬೌಲಿಂಗಿನಲ್ಲಿ ಡಿವೈನ್ ಏಳು ಬೌಂಡರಿ ಹೊಡೆದರು. ಶ್ರೇಯಾಂಕಾ ಪಾಟೀಲ್ ಅವರು ಎಸೆದ ಚೆಂಡ‌ನ್ನು ಕವರ್ ಡ್ರೈವ್‌ ಮಾಡಿದರು. ರಾಡ್ರಿಗಸ್ ಹೊರತುಪಡಿಸಿ, ಉಳಿದ ಭಾರತೀಯ ಆಟಗಾರರ ಫೀಲ್ಡಿಂಗ್‌ ಕಳಪೆಯಾಗಿತ್ತು. ಲೆಗ್ ಸ್ಪಿನ್ನರ್ ಆಶಾ ಸೋಭಾನಾ (4 ಓವರ್‌, 1/22) ಪವರ್‌ಪ್ಲೇ ನಂತರ ನ್ಯೂಜಿಲೆಂಡ್‌ ವೇಗಕ್ಕೆ ತಡೆಯೊಡ್ಡಿದರು. ಆದರೆ ಡಿವೈನ್ ಅವರ ಭರ್ಜರಿ ಹೊಡೆತಗಳಿಂದ ಭಾರತೀಯ ಬೌಲರ್‌ಗಳಿಗೆ ಹೆಚ್ಚೇನೂ ಆಯ್ಕೆ ಉಳಿಯಲಿಲ್ಲ.

Read More
Next Story