ವೆಲ್ಲಲಾಗೆ ಸ್ಪಿನ್ ಜಾಲ: ಶ್ರೀಲಂಕಾಗೆ 110 ರನ್ ಜಯ
ಕೊಲಂಬೊ: ಮೂರನೇ ಏಕದಿನ ಪಂದ್ಯದಲ್ಲಿ ಭಾರತವನ್ನು 110 ರನ್‌ಗಳಿಂದ ಸೋಲಿಸಿದ ಶ್ರೀಲಂಕಾ, ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಮೊದಲ ಪಂದ್ಯ ರೋಚಕ ಡ್ರಾನಲ್ಲಿ ಕೊನೆಗೊಂಡ ನಂತರ ಆತಿಥೇಯರು ಎರಡನೇ ಏಕದಿನ ಪಂದ್ಯವನ್ನು 32 ರನ್‌ಗಳಿಂದ ಗೆದ್ದಿದ್ದರು.
249 ರನ್‌ಗಳನ್ನು ಬೆನ್ನಟ್ಟಿದ ಭಾರತ ಮತ್ತೊಮ್ಮೆ ಉತ್ತಮವಾಗಿ ಆರಂಭಿಸಿತು. ಆದರೆ, ಶ್ರೀಲಂಕಾದ ಸ್ಪಿನ್ನರ್ ದುನಿತ್ ವೆಲ್ಲಲಾಗೆ (5.1-0-27-5) ಉತ್ತಮವಾಗಿ ಬೌಲ್ ಮಾಡಿದರು. ನಾಯಕ ರೋಹಿತ್ ಶರ್ಮಾ (35) ಮತ್ತು ವಾಷಿಂಗ್ಟನ್ ಸುಂದರ್ (30) ಏಕಾಂಗಿ ಹೋರಾಟದಿಂದ ಭಾರತ 26.1 ಓವರ್‌ಗಳಲ್ಲಿ 138 ರನ್‌ಗೆ ಆಲೌಟಾಯಿತು.
ಇದಕ್ಕೂ ಮೊದಲು, ಆಲ್‌ರೌಂಡರ್ ರಿಯಾನ್ ಪರಾಗ್ ಚೊಚ್ಚಲ ಪಂದ್ಯದಲ್ಲೇ 54ಕ್ಕೆ 3 ವಿಕೆಟ್ ಪಡೆದರು ಆದರೆ, ಅವಿಷ್ಕಾ ಫೆರ್ನಾಂಡೋ( 96 ರನ್, 102 ಎಸೆತ, 2 ಸಿಕ್ಸರ್, 9 ಬೌಂಡರಿ) ಮತ್ತು ಕುಸಾಲ್ ಮೆಂಡಿಸ್ ( 59) ನೆರವಿನಿಂದ 7 ವಿಕೆಟ್‌ಗೆ 248 ರನ್ ಗಳಿಸಿತು. ರಿಯಾನ್ ಆಫ್ ಬ್ರೇಕ್ ಬೌಲಿಂಗ್ ಮೂಲಕ ಫೆರ್ನಾಂಡೋ ಅವರನ್ನು ಶತಕ ವಂಚಿತರನ್ನಾಗಿಸಿದರು. ಫೆರ್ನಾಂಡೊ ಮೊದಲ ವಿಕೆಟ್‌ಗೆ ಪಾತುಮ್ ನಿಸ್ಸಾಂಕ (45) ಅವರೊಂದಿಗೆ 89 ರನ್ ಮತ್ತು ಮೆಂಡಿಸ್ ಅವರೊಂದಿಗೆ ಎರಡನೇ ವಿಕೆಟ್‌ಗೆ 82 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ- 50 ಓವರ್‌ಗಳಲ್ಲಿ 248/7 (ಪಾತುಮ್ ನಿಸ್ಸಾಂಕ 45, ಅವಿಷ್ಕಾ ಫೆರ್ನಾಂಡೊ 96, ಕುಸಲ್ ಮೆಂಡಿಸ್ 59; ರಿಯಾನ್ ಪರಾಗ್ 3/54)
ಭಾರತ- 26.1 ಓವರ್‌ಗಳಲ್ಲಿ 138 (ರೋಹಿತ್ ಶರ್ಮಾ 35, ವಾಷಿಂಗ್ಟನ್ ಸುಂದರ್ 30, ವೆಲ್ಲಲಾಗೆ 5/27 )