ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಪರಾಕ್ರಮ; 27,000 ರನ್ ಪೂರೈಸಿದ ನಾಲ್ಕನೇ ಆಟಗಾರ
x

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಪರಾಕ್ರಮ; 27,000 ರನ್ ಪೂರೈಸಿದ ನಾಲ್ಕನೇ ಆಟಗಾರ

ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಪೂರೈಸಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.


ಕಾನ್ಪುರ: ಭಾರತದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಪೂರೈಸಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಅವರು ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನ ನಾಲ್ಕನೇ ದಿನವಾದ ಸೋಮವಾರ ಈ ಸಾಧನೆ ಮಾಡಿದರು. ಚುರುಕಾಗಿ ಆಟವಾಡಿ, 35 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 47 ರನ್ ಗಳಿಸಿದರು.

ಕೊಹ್ಲಿ 27,000 ರನ್‌ ಗಡಿ ದಾಟಿದ ಎರಡನೇ ಭಾರತೀಯ ಕ್ರಿಕೆಟಿಗ. 34,357 ರನ್‌ ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ನೇತೃತ್ವದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ 28,016 ರನ್‌ಗಳೊಂದಿಗೆ ಎರಡನೆಯ ಹಾಗೂ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ 27,483 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್‌ನಲ್ಲಿ 8,870 ಕ್ಕಿಂತ ಸ್ವಲ್ಪ ಹೆಚ್ಚು ರನ್ ಗಳಿಸಿರುವ ಕೊಹ್ಲಿ, 295 ಒಂದು ದಿನದ ಪಂದ್ಯಗಳಲ್ಲಿ 13,906 ರನ್ ಮತ್ತು 125 ಟಿ20ಐ ಗಳಲ್ಲಿ 4,188 ರನ್ ಗಳಿಸಿದ್ದಾರೆ. ಜೂನ್‌ನಲ್ಲಿ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ ನಂತರ ಅವರು ಆ ಸ್ವರೂಪದಿಂದ ನಿವೃತ್ತರಾದರು.

ʻ27,000 ಅಂತಾರಾಷ್ಟ್ರೀಯ ರನ್‌ ದಾಟಿದ ವಿರಾಟ್ ಕೊಹ್ಲಿ ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು! ನಿಮ್ಮ ಉತ್ಸಾಹ, ಸ್ಥಿರತೆ ಮತ್ತು ಉತ್ಕೃಷ್ಟತೆಯ ಹಸಿವು ಕ್ರಿಕೆಟ್ ಜಗತ್ತಿಗೆ ಸ್ಫೂರ್ತಿದಾಯಕವಾಗಿದೆ. ಅಭಿನಂದನೆಗಳು,ʼ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಕ್ಸ್ ನಲ್ಲಿ ಬರೆದಿದ್ದಾರೆ.‌

Read More
Next Story