
ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ ಮಿಂಚಿದ ಕನ್ನಡ ಕುವರಿಯರು!
ಶ್ರೇಯಾಂಕ ಪಾಟೀಲ್ ಅವರ ಹೆಸರು ಇದೀಗ ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದೆ.
ಬರೋಬ್ಬರಿ 16 ವರ್ಷಗಳ ನಂತರ ಆರ್‌ಸಿಬಿ ಕನಸು ನನಸಾಗಿದೆ. ಕಳೆದ ಹಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದು, ಈ ಟ್ರೋಲ್‌ಗಳಿಗೆ ಮಹಿಳಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ( ಮಾರ್ಚ್ 17) ಫುಲ್ ಸ್ಟಾಪ್ ಇಟ್ಟಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಳ್ಳುವ ಮೂಲಕ ಹಲವಾರು ವರ್ಷಗಳಿಂದ ಆರ್‌ಸಿಬಿ ಅಭಿಮಾನಿಗಳಿದ್ದ ಕಪ್ ಗೆಲ್ಲುವ ಕನಸು ಕೊನೆಗೂ ನನಸಾಗಿದೆ.
ಬೆಂಗಳೂರು ತಂಡ 2024ರ ಸಾಲಿನ WPL ( Women's Premier League) ಕಪ್ ಗೆದ್ದು ಇತಿಹಾಸ ನಿರ್ಮಿಸಲು ಮೂಲ ಕಾರಣರಾದವರು ಕನ್ನಡತಿ. ಅವರೇ ಬೆಂಗಳೂರಿನ ಶ್ರೇಯಾಂಕಾ ಪಾಟೀಲ್. ಸದ್ಯ ಶ್ರೇಯಾಂಕಾ ಪಾಟೀಲ್ ಈಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.
ಬೆಂಗಳೂರಿನ ಮನೆಮಗಳು ಶ್ರೇಯಾಂಕಾ ಪಾಟೀಲ್!
ಸದ್ಯ ನ್ಯಾಷನಲ್ ಕ್ರಶ್ ಆಗಿರುವ ಶ್ರೇಯಾಂಕಾ ಪಾಟೀಲ್ ಅಪ್ಪಟ್ಟ ಕನ್ನಡತಿ. ಆಕೆ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಶ್ರೇಯಾಂಕಾ ಅವರ ತಂದೆ ರಾಜೇಶ್ ಪಾಟೀಲ್ ಕೂಡ ಕ್ರಿಕೆಟ್ ಆಟಗಾರನಾಗಿದ್ದು, ಮಗಳಿಗೂ ಬೆಂಬಲ ನೀಡಿ, ಕ್ರಿಕೆಟ್‌ನಲ್ಲಿ ಸಾಧನೆ ಮಾಡಲು ಎಲ್ಲಾ ರೀತಿ ಸಹಾಯ ಮಾಡಿದ್ದಾರೆ. ಶ್ರೇಯಾಂಕಾ ಅವರ ತಮ್ಮ ಶ್ರೇಯಾಂಕಾರ ತಮ್ಮ ಕೂಡ ಕ್ರಿಕೆಟ್ ಪ್ಲೇಯರ್ ಆಗಿದ್ದಾರೆ. ಶ್ರೇಯಾಂಕ ಪಾಟೀಲ್ ಅವರ ಹೆಸರು ಇದೀಗ ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಶೇಯಾಂಕ ಪಾಟೀಲ್ ಕ್ರಿಕೆಟ್ ವಿಡಿಯೋಗಳನ್ನು ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ಹಾಗೇ ಶೇಯಾಂಕ ಆಟಕ್ಕೂ ಫ್ಯಾನ್ಸ್ ಈಗ ಫಿದಾ ಆಗಿದ್ದಾರೆ. ಆರ್‌ಸಿಬಿ ಮೊದಲ ಬಾರಿ ಕಪ್ ಗೆದ್ದ ನಂತರ ಶ್ರೇಯಾಂಕಾ ಹವಾ ಮತ್ತಷ್ಟು ಜೋರಾಗಿದೆ. ಈ ಸಲ ಕಪ್ ನಮ್ದೇ ಎಂದು ಕಳೆದ 16 ವರ್ಷಗಳಿಂದ ಕನಸು ಕಾಣುತ್ತಿದ್ದ ಆರ್ ಸಿಬಿ ಅಭಿಮಾನಿಗಳ ಕನಸನ್ನು ಆರ್ ಸಿಬಿ ಆಟಗಾರ್ತಿಯರು ಕೊನೆಗೂ ನನಸು ಮಾಡಿದ್ದು, ಈ ಟ್ರೋಫಿಯನ್ನು ಶ್ರೇಯಾಂಕ ಪಾಟೀಲ್ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡದ ಶ್ರೇಯಾಂಕ ಮಾತ್ರವಲ್ಲ, ಉಳಿದ ಟೀಂಗಳಲ್ಲಿಯೂ ನಮ್ಮ ಕನ್ನಡದ ವನಿತೆಯರು ಆಟವಾಡಿದ್ದಾರೆ. ಯುಪಿ ವಾರಿಯರ್ಸ್, ಗುಜರಾತ್ ಮಹಿಳಾ ಟೀಂನಲ್ಲಿ ಕನ್ನಡತಿಯರು ಆಟವಾಡಿದ್ದಾರೆ.
ವೇದಾ ಕೃಷ್ಣಮೂರ್ತಿ
ವೇದಾ ಕೃಷ್ಣಮೂರ್ತಿ ಇವರು ಮಹಿಳೆಯರ ಕ್ರಿಕೆಟ್ ಟೀಂನಲ್ಲಿ ಮಿಂಚುತ್ತಿರುವ ಮತ್ತೊಬ್ಬ ಕನ್ನಡತಿ. ಮೂಲತ: ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಇವರು wpl ನಲ್ಲಿ ಗುಜರಾತ್ ತಂಡಕ್ಕೆ ಆಡಿದ್ದಾರೆ. 18 ನೇ ವಯಸ್ಸಿನಲ್ಲಿ, ವೇದಾ ಡರ್ಬಿಯಲ್ಲಿ ಭಾರತದ ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕವನ್ನು ಗಳಿಸಿದ್ದರು. ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟರ್ ಆಗಿರುವ ವೇದಾ, ಬಿಡುಬೀಸಿನ ಹೊಡೆತಗಳಿಗೆ ಹೆಸರಾಗಿದ್ದಾರೆ.
ವೃಂದಾ ದಿನೇಶ್
22 ವರ್ಷ ವಯಸ್ಸಿನ ಬ್ಯಾಟರ್ ವೃಂದಾ ದಿನೇಶ್ ಮೂಲತ: ಬೆಂಗಳೂರಿನವರು. ಇವರು ಮಹಿಳೆಯರ ಪ್ರೀಮಿಯರ್ ಲೀಗ್ ಹರಾಜು 2024 (WPL) ನಲ್ಲಿ UP ವಾರಿಯರ್ಸ್‌ಗೆ 1.3 ಕೋಟಿಗೆ ಖರೀದಿಸಲ್ಪಟ್ಟ ಆಟಗಾರರಾಗಿದ್ದಾರೆ. ಇವರು WPL ಇತಿಹಾಸದಲ್ಲಿ ಮಾರಾಟವಾದ ಎರಡನೇ ಅತಿ ಹೆಚ್ಚು ಅನ್‌ಕ್ಯಾಪ್ಡ್ ಆಟಗಾರರಾಗಿದ್ದಾರೆ.
ರಾಜೇಶ್ವರಿ ಶಿವಾನಂದ ಗಾಯಕ್‌ವಾಡ್
ಇವರು ಮೂಲತ: ಕರ್ನಾಟಕದ ಬಿಜಾಪುರ ಜಿಲ್ಲೆಯವಾಗಿದ್ದು ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರು ಮಹಿಳಾ ಪ್ರೀಮಿಯರ್ ಯುಪಿ ವಾರಿಯರ್ಜ್ ತಂಡಕ್ಕೆ ಆಡಿದ್ದಾರೆ. 32 ವರ್ಷ ವಯಸ್ಸಿನವರು ಎಡಗೈ ವೇಗದ ಬೌಲರ್ ಆಗಿರುವ ರಾಜೇಶ್ವರಿ ಒಟ್ಟು wplನಲ್ಲಿ ಒಟ್ಟು 8 ಮ್ಯಾಚ್‌ಗಳಲ್ಲಿ ಆಡಿದ್ದಾರೆ.
ಒಟ್ಟಿನಲ್ಲಿ ಈ ಮಹಿಳಾ ಮಣಿಗಳು ಕರ್ನಾಟಕದ ಕುವರಿಗಳು ಎಂದು ಹೇಳಲು ಹೆಮ್ಮೆಯಾಗುತ್ತದೆ.