
TCS World 10K : ಏಪ್ರಿಲ್ 27ರಂದು ಟಿಸಿಎಸ್ 10ಕೆ ಮ್ಯಾರಾಥಾನ್
TCS World 10K : ಕಬ್ಬನ್ ರಸ್ತೆಯಿಂದ (ಆರ್ ಎಸ್ ಎಒಐ ಗೇಟ್ ನಂ.5ರ ಎದುರು) ರೇಸ್ ಗೆ ಚಾಲನೆ ಸಿಗಲಿದ್ದು, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಪೆರೇಡ್ ಮೈದಾನದ ಹೊರಭಾಗದಲ್ಲಿ ಎಲ್ಲಾ ರೇಸ್ ಗಳು ಅಂತಿಮಗೊಳ್ಳಲಿವೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10ಕೆ ಬೆಂಗಳೂರು (ಟಿಸಿಎಸ್ ವರ್ಲ್ಡ್ 10ಕೆ) ನ 17ನೇ ಆವೃತ್ತಿಯ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ 2025ರ ಏಪ್ರಿಲ್ 27ರಂದು ಭಾನುವಾರ ನಡೆಯಲಿದೆ. ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಾರಿಯ ಓಟದ ದಿನಾಂಕ ಪ್ರಕಟಿಸಲಾಯಿತು.
ಒಟ್ಟು 210,000 ಯುಎಸ್ ಡಾಲರ್ ಬಹುಮಾನ ಮೊತ್ತ ಹೊಂದಿರುವ ಟಿಸಿಎಸ್ ವರ್ಲ್ಡ್ 10ಕೆ ವಿಶ್ವದ ಪ್ರಮುಖ 10ಕೆ ಸ್ಪರ್ಧೆಗಳಲ್ಲಿ ಒಂದಾಗಿದೆ. ದಿನಾಂಕ ಪ್ರಕಟಿಸಿದ ಬಳಿಕ ಟಿಸಿಎಸ್ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮಾತನಾಡಿ, " ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು ಕೇವಲ ಓಟಕ್ಕಿಂತ ಮಿಗಿಲಾದುದು. ಇದು ಫಿಟ್ನೆಸ್ ಮತ್ತು ಲೋಕೋಪಕಾರಕ್ಕೆ ದಾರಿದೀಪವಾಗುವ ಜತೆಗೆ ಬೆಂಗಳೂರನ್ನು ಜಾಗತಿಕ ಕ್ರೀಡಾ ನಕ್ಷೆಯಲ್ಲಿ ದೃಢವಾಗಿ ಇರಿಸುತ್ತಿದೆ,'' ಎಂದು ಹೇಳಿದರು.
ಕಬ್ಬನ್ ರಸ್ತೆಯಲ್ಲಿ ಆಯೋಜನೆ
ಕಬ್ಬನ್ ರಸ್ತೆಯಿಂದ (ಆರ್ ಎಸ್ ಎಒಐ ಗೇಟ್ ನಂ.5ರ ಎದುರು) ರೇಸ್ ಗೆ ಚಾಲನೆ ಸಿಗಲಿದ್ದು, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಪೆರೇಡ್ ಮೈದಾನದ ಹೊರಭಾಗದಲ್ಲಿ ಎಲ್ಲಾ ರೇಸ್ ಗಳು ಅಂತಿಮಗೊಳ್ಳಲಿವೆ.
17ನೇ ಆವೃತ್ತಿಗೆ ಮುಂಚಿತವಾಗಿ, ಪ್ರೊಕ್ಯಾಮ್ ಇಂಟರ್ ನ್ಯಾಷನಲ್ನ ವಿವೇಕ್ ಸಿಂಗ್, "16 ವರ್ಷಗಳಿಂದ, ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು ನಗರದ ಏಕತೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ನಾವು 2025 ರ ಆವೃತ್ತಿಗಾಗಿ ನೋಂದಣಿಗಳನ್ನು ಹೊಸ ಉತ್ಸಾಹದಿಂದ ತೆರೆಯುತ್ತಿದ್ದೇವೆ ’’ ಎಂದರು
ಎಸಿಕ್ಸ್ನಿಂದ ಫಿನಿಶರ್ ಟಿಶರ್ಟ್
ಜಪಾನಿನ ಕ್ರೀಡಾ ಪ್ರದರ್ಶನ ಬ್ರಾಂಡ್ ಎಸಿಕ್ಸ್ ಓಪನ್ 10ಕೆ ನಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಅಗ್ರ 1000 ಫಿನಿಶರ್ ಗಳಿಗೆ ವಿಶೇಷ ಫಿನಿಶರ್ ಟಿಶರ್ಟ್ ನೀಡಲಿದೆ.
ನೋಂದಣಿ ವಿವರ
ಆನ್-ಗ್ರೌಂಡ್ ರನ್
ಓಪನ್ 10 ಕೆ, ಮಜ್ಜಾ ರನ್ (5.1 ಕಿ.ಮೀ), ಸೀನಿಯರ್ ಸಿಟಿಜನ್ಸ್ ರನ್ ಮತ್ತು ಚಾಂಪಿಯನ್ಸ್ ವಿತ್ ಡಿಸೆಬಿಲಿಟಿ (4.2 ಕಿ.ಮೀ) ಎಲ್ಲಾ ರೇಸ್ ವಿಭಾಗಗಳಿಗೆ ನೋಂದಣಿ ಫೆಬ್ರವರಿ 20 ರ ಗುರುವಾರ ಬೆಳಗ್ಗೆ 7:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 28 ರ ಶುಕ್ರವಾರ ರಾತ್ರಿ 11:59 ಕ್ಕೆ ಕೊನೆಗೊಳ್ಳುತ್ತದೆ.
ವರ್ಚುವಲ್ ರನ್
ವರ್ಚುವಲ್ ಆವೃತ್ತಿಯು ಜನಪ್ರಿಯತೆ ಗಳಿಸುತ್ತಲೇ ಇದೆ, ವಿಶ್ವದಾದ್ಯಂತದ ಓಟಗಾರರಿಗೆ ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು ಅಪ್ಲಿಕೇಶನ್ ಮೂಲಕ ಕೂಟದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತದೆ. ಸ್ಪರ್ಧಿಗಳು ಓಪನ್ 10ಕೆ ಮತ್ತು 5ಕೆ ವಿಭಾಗಗಳಿಂದ ಆಯ್ಕೆ ಮಾಡಬಹುದು. ವರ್ಚುವಲ್ ರನ್ ಗಾಗಿ ನೋಂದಣಿಗಳು ಫೆಬ್ರವರಿ 20, ಗುರುವಾರ ತೆರೆಯುತ್ತವೆ .