Shreyanka Patil : ವರ್ಷದ ಮಹಿಳಾ ಉದಯೋನ್ಮುಖ ಕ್ರಿಕೆಟರ್ ಪ್ರಶಸ್ತಿಗೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ನಾಮನಿರ್ದೇಶನ
x
ಶ್ರೇಯಾಂಕ ಪಾಟೀಲ್‌.

Shreyanka Patil : ವರ್ಷದ ಮಹಿಳಾ ಉದಯೋನ್ಮುಖ ಕ್ರಿಕೆಟರ್ ಪ್ರಶಸ್ತಿಗೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ನಾಮನಿರ್ದೇಶನ

Shreyanka Patil: ಪಾಟೀಲ್‌ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಕೆಳ ಕ್ರಮಾಂಕದ ಬ್ಯಾಟರ್‌ ಕೂಡ ಆಗಿದ್ದಾರೆ. ಅವರ ಬ್ಯಾಟಿಂಗ್ ಕೌಶಲಗಳು ಇನ್ನೂ ಪ್ರದರ್ಶನಗೊಂಡಿಲ್ಲ. ಆದಾಗ್ಯೂ ಈ ಸಾಮರ್ಥ್ಯ ಅವರ ಆಯ್ಕೆಗೆ ನೆರವಾಗಿದೆ.


ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯುವ ಸ್ಪಿನ್ನರ್ ಹಾಗೂ ಕನ್ನಡತಿ ಶ್ರೇಯಂಕಾ ಪಾಟೀಲ್ ಐಸಿಸಿ ವರ್ಷದ ಮಹಿಳಾ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಪಾಟೀಲ್ ಅವರೊಂದಿಗೆ ದಕ್ಷಿಣ ಆಫ್ರಿಕಾದ ಅನ್ನೆರಿ ಡೆರ್ಕ್ಸೆನ್, ಸ್ಕಾಟ್ಲೆಂಡ್‌ನ ಸಾಸ್ಕಿಯಾ ಹಾರ್ಲೆ ಮತ್ತು ಐರ್ಲೆಂಡ್‌ ಫ್ರೇಯಾ ಸಾರ್ಜೆಂಟ್ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದಾರೆ.

ಕರ್ನಾಟಕದ 22 ವರ್ಷದ ಆಫ್-ಸ್ಪಿನ್ನರ್ 2023 ರ ಡಿಸೆಂಬರ್‌ನಲ್ಲಿ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಂದಿನಿಂದ ಎಲ್ಲಾ ಸ್ವರೂಪಗಳ ಕ್ರಿಕೆಟ್‌ನಲ್ಲಿ ಪ್ರಭಾವ ಬೀರುತ್ತಿದ್ದಾರೆ.

ಡಿಸೆಂಬರ್ 2023ರಲ್ಲಿ ಪಾದಾರ್ಪಣೆ ಮಾಡಿದ ನಂತರ ಅವರು ಆಡಿದ 13 ಟಿ 20 ಪಂದ್ಯಗಳಲ್ಲಿ ಪಾಟೀಲ್ 15 ವಿಕೆಟ್‌ನಲ್ಲಿ ಪಡೆದಿದ್ದಾರೆ. ಅವರು ಆಡಿದ ಎರಡು ಏಕದಿನ ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ.

ಮಹಿಳಾ ಟಿ 20 ಏಷ್ಯಾ ಕಪ್ ಮತ್ತು ಟಿ 20 ವಿಶ್ವಕಪ್‌ನಂಥ ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುವುದರ ಜೊತೆಗೆ ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿಪಕ್ಷೀಯ ಸರಣಿಗಳಲ್ಲಿ ಆಡುವ ಮೂಲಕ ಪಾಟೀಲ್ ಈ ವರ್ಷ ಭಾರತದ ಸಾಲಿನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ವಿಶ್ವಕಪ್ ಟಿ 20ಯಲ್ಲಿ ಅವರ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ. ಅಲ್ಲಿ ಅವರು ಮುನೀಬಾ ಅಲಿ ಮತ್ತು ತುಬಾ ಹಸನ್ ಅವರ ಪ್ರಮುಖ ವಿಕೆಟ್‌ ಒಳಗೊಂಡಂತೆ 14ರನ್‌ಗೆ 2 ವಿಕೆಟ್‌ ಪಡೆದಿದ್ದರು.

ಶ್ರೇಯಾಂಕ ಅವರ ಸಾಹಸದಿಂದಾಗಿ ಪಾಕಿಸ್ತಾನವನ್ನು ಗೆಲ್ಲಲೇಬೇಕಾದ ಗುಂಪು ಹಂತದ ಪಂದ್ಯದಲ್ಲಿ ನಿಯಂತ್ರಿಸಲು ಭಾರತಕ್ಕೆ ಸಹಾಯ ಮಾಡಿತ್ತು.

ಪಾಟೀಲ್‌ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಕೆಳ ಕ್ರಮಾಂಕದ ಬ್ಯಾಟರ್‌ ಕೂಡ ಆಗಿದ್ದಾರೆ. ಅವರ ಬ್ಯಾಟಿಂಗ್ ಕೌಶಲಗಳು ಇನ್ನೂ ಪ್ರದರ್ಶನಗೊಂಡಿಲ್ಲ. ಆದಾಗ್ಯೂ ಈ ಸಾಮರ್ಥ್ಯ ಅವರ ಆಯ್ಕೆಗೆ ನೆರವಾಗಿದೆ. ಅವಕಾಶ ಬಂದಾಗ ಅವರು ಮಿಂಚಲು ಸಿದ್ಧರಾಗಿದ್ದಾರೆ.

Read More
Next Story