
ಅಪ್ಪನಂತೆಯೇ ಮಗ; ಸ್ಫೋಟಕ 297 ರನ್ ಬಾರಿಸಿದ ವೀರೇಂದ್ರ ಸೆಹ್ವಾಗ್ ಪುತ್ರ
ಪುತ್ರ ಆರ್ಯವೀರ್ ಸಾಹಸದ ಬಗ್ಗೆ ಸೆಹ್ವಾಗ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಆತ ಫೆರಾರಿ ಗೆಲ್ಲುವ ಅವಕಾಶವನ್ನು ನಷ್ಟ ಮಾಡಿಕೊಂಡಿರುವ ಬಗ್ಗೆಯೂ ಬರೆದುಕೊಂಡಿದ್ದಾರೆ.
ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಕೂಚ್ ಬೆಹಾರ್ ಟ್ರೋಫಿ ಪಂದ್ಯದಲ್ಲಿ 297 ರನ್ ಗಳಿಸಿದ್ದಾರೆ. ಈ ಮೂಲಕ ಅಪ್ಪನಂತೆಯೇ ಸ್ಫೋಟಕ ಹಾಗೂ ದೈತ್ಯ ಬ್ಯಾಟರ್ ಎಂಬುದನ್ನು ಸಾಬೀತು ಮಾಡಿದ್ದಾರೆ.
ಬಿಸಿಸಿಐನ ಅಂಡರ್-19 ಟೂರ್ನಮೆಂಟ್‌ನಲ್ಲಿ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ದೆಹಲಿ ತಂಡದ ಪರ ಅವರು ಈ ಸಾಧನೆ ಮಾಡಿದ್ದಾರೆ. ಆದಾಗ್ಯೂ ಅವರು 3 ರನ್‌ಗಳಿಂದ ತ್ರಿಶತಕದ ಚಾನ್ಸ್ ಕಳೆದುಕೊಂಡಿದ್ದಾರೆ. ಅದೇ ರೀತಿ 23 ರನ್‌ಗಳಿಂದ ಫೆರಾರಿ ಗೆಲ್ಲುವ ಅವಕಾಶವನ್ನೂ ನಷ್ಟ ಮಾಡಿಕೊಂಡಿದ್ದಾರೆ.
ಪುತ್ರನ ಸಾಹಸದ ಬಗ್ಗೆ ಸೆಹ್ವಾಗ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಆತ ಫೆರಾರಿ ಗೆಲ್ಲುವ ಅವಕಾಶವನ್ನು ನಷ್ಟ ಮಾಡಿಕೊಂಡಿರುವ ಬಗ್ಗೆಯೂ ಬರೆದುಕೊಂಡಿದ್ದಾರೆ. ಸೆಹ್ವಾಗ್ ತಮ್ಮ ವೈಯಕ್ತಿಕ ಅತ್ಯಧಿಕ ಟೆಸ್ಟ್ ಸ್ಕೋರ್ 319 ದಾಟಿದ್ದರೆ ಫೆರಾರಿ ಕೊಡಿಸುವ ಭರವಸೆ ಕೊಟ್ಟಿದ್ದರು ಎಂದು ಹೇಳಲಾಗಿದೆ.
"ಶಿಲ್ಲಾಂಗ್‌ನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ಆರ್ಯವೀರ್ 319 ಎಸೆತಗಳಲ್ಲಿ 51 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 297 ರನ್ ಗಳಿಸಿದ್ದಾನೆ. ಚೆನ್ನಾಗಿ ಆಡಿದರೂ 23 ರನ್ ಕೊರತೆಯಿಂದ ಫೆರಾರಿ ಕಳೆದುಕೊಂಡಿದ್ದಾರೆ. ಏನೇ ಆದರೂ ಉತ್ತಮ. ನನ್ನಂತೆಯೇ ಉತ್ತಮವಾಗಿ ಆಡು ಎಂದು ಸೆಹ್ವಾಗ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಸೆಹ್ವಾಗ್ 2008ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ತ್ರಿಶತಕ ಬಾರಿಸಿದ್ದರು. ಇದಕ್ಕೂ ಮುನ್ನ 2004ರಲ್ಲಿ ಮುಲ್ತಾನ್ ನಲ್ಲಿ ಪಾಕಿಸ್ತಾನ ವಿರುದ್ಧ ತ್ರಿಶತಕ (309) ಗಳಿಸಿದ್ದರು.