ಈಗ ಕಪ್‌ ನಮ್ದೇ!   ಪುರುಷರ ತಂಡಕ್ಕಿಂತ ಮೊದಲೇ ಟ್ರೋಫಿ ಗೆದ್ದ  ಮಹಿಳಾ ಆರ್‌ಸಿಬಿ
x

ಈಗ ಕಪ್‌ ನಮ್ದೇ! ಪುರುಷರ ತಂಡಕ್ಕಿಂತ ಮೊದಲೇ ಟ್ರೋಫಿ ಗೆದ್ದ ಮಹಿಳಾ ಆರ್‌ಸಿಬಿ

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ಪ್ರೀಮಿಯರ್ ಲೀಗ್ (WPL) 2024 ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ, ಆರ್‌ಸಿಬಿ ತಂಡ ಟ್ರೋಫಿ ಎತ್ತುವ ಅಭಿಮಾನಿಗಳ ಬಹುದಿನಗಳ ಕನಸನ್ನು ಮಹಿಳಾ ತಂಡ ಈಡೇರಿಸಿದೆ.


ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್‌ 17) ಫೈನಲ್ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ಪ್ರೀಮಿಯರ್ ಲೀಗ್ (WPL) 2024 ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ, ಆರ್‌ಸಿಬಿ ತಂಡ ಟ್ರೋಫಿ ಎತ್ತುವ ಅಭಿಮಾನಿಗಳ ಹದಿನಾರು ವರ್ಷಗಳ ಕನಸನ್ನು ಮಹಿಳಾ ತಂಡ ಎರಡನೇ ವರ್ಷಗಳಲ್ಲಿ ಪೂರೈಸಿದೆ.

ಈ ಮೂಲಕ ́"ಈ ಬಾರಿ ಕಪ್‌ ನಮ್ದೇʼ ಎನ್ನುವ ಆರ್‌ಸಿಬಿ ಅಭಿಮಾನಿಗಳ ಮಹದಾಸೆಯನ್ನು ಮಹಿಳಾ ತಂಡ ಸಾಕಾರಗೊಳಿಸಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ "ಈಗ ಕಪ್‌ ನಮ್ದೇ" ಎಂಬ ಘೋಷಣೆ ಮೊಳಗುತ್ತಿದೆ. ಪುರುಷರ ತಂಡ "ಕಪ್‌ ನಮ್ದೇ" ಅನ್ನುವ ಅಭಿಮಾನಿಗಳ ಅಭಿಯಾನಕ್ಕೆ ನಿರಾಸೆಯನ್ನೇ ಮಾಡಿದ್ದರೆ, ಮಹಿಳಾ ತಂಡ ಭರ್ಜರಿಯಾಗಿ ಕಪ್‌ ಗೆಲ್ಲುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಆಡಿದ ಪಂದ್ಯದಲ್ಲಿ ಎಂಟು ವಿಕೆಟ್ ಗಳ ಭರ್ಜರಿ ಗೆಲುವನ್ನು ಆರ್‌ಸಿಬಿ ದಾಖಲಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಕೇವಲ 18.3 ಓವರ್​ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 113 ರನ್ ಆಲ್ ಔಟ್ ಆಗಿದೆ. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ 2 ವಿಕೆಟ್ ಮಾತ್ರ ಕಳೆದುಕೊಂಡು, ಕೇವಲ 4 ಎಸೆತಗಳು ಬಾಕಿ ಇರುವಂತೆಯೇ ವಿಜಯನಗೆ ಬೀರಿದೆ.
ಆರಂಭಿಕರಾದ ಸೋಫಿ ಡಿವೈನ್ ಮತ್ತು ಸ್ಮೃತಿ ಮಂದಣ್ಣ 49 ರನ್ ಗಳ ಜೊತೆಯಾಟ ಆಡಿ, ತಂಡಕ್ಕೆ ಉತ್ತಮ ಓಪನಿಂಗ್ ನೀಡಿದರು. ಸೋಫಿ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 32 ರನ್​ ಗಳಿಸಿದರು.

ನಂತರ ಬಂದ ಎಲ್ಲಿಸ್ ಪೆರ್ರಿ 37 ಬಾಲ್ ಗಳಲ್ಲಿ ನಾಲ್ಕು ಫೋರ್ ಗಳೊಂದಿಗೆ 35 ರನ್ ಗಳಿಸಿದರು. ಸ್ಮೃತಿ ಹಾಗೂ ಎಲ್ಲಿಸ್ ಪೆರ್ರಿ 33 ರನ್​ಗಳ ಜೊತೆಯಾಟ ನಡೆಸಿದರು. ತಂಡ ಗೆಲುವಿನಂಚಿನಲ್ಲಿ ಇರುವಾಗ ಲಯ ಕಳೆದುಕೊಂಡ ಸ್ಮೃತಿ ಮಂದಣ್ಣಾ 39 ಎಸೆತಗಳಲ್ಲಿ 3 ಬೌಂಡರಿ ಸಹಿತ 33 ರನ್​ಗಳನ್ನು ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು.

ಅಂತ್ಯದಲ್ಲಿ ಬಂದ ರಿಚಾ ಘೋಷ್, ಎಲ್ಲಿಸ್ ಪೆರ್ರಿಗೆ ಅಜೇಯ ಸಾಥ್ ನೀಡಿದ್ದು, ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ರಿಚಾ ಅವರು 14 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 17 ರನ್ ಗಳಿಸಿದರು.


Read More
Next Story