ದೇಶಿ ಕ್ರಿಕೆಟ್‌ ಗೆ ಲಭ್ಯತೆ ಖಾತ್ರಿಗೊಳಿಸಿ: ರೋಹಿತ್‌ ಶರ್ಮಾ
x

ದೇಶಿ ಕ್ರಿಕೆಟ್‌ ಗೆ ಲಭ್ಯತೆ ಖಾತ್ರಿಗೊಳಿಸಿ: ರೋಹಿತ್‌ ಶರ್ಮಾ


ಧರ್ಮಶಾಲಾ, ಮಾ. 6- ಬಿಸಿಸಿಐ ವೈದ್ಯಕೀಯ ತಂಡ ʻಅನರ್ಹʼ ಎಂದು ಘೋಷಿಸದ ಹೊರತು, ರಾಷ್ಟ್ರೀಯ ತಂಡದಲ್ಲಿ ಇಲ್ಲದ ಆಟಗಾರರು ದೇಶಿ ಕ್ರಿಕೆಟ್‌ಗೆ ಲಭ್ಯವಾಗಬೇಕು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಒಂದೇ ಸ್ವರೂಪದ ಆಟಕ್ಕೆ ಆದ್ಯತೆ ನೀಡುವ ಆಟಗಾರರಿಗೆ ಕಠಿಣ ಸಂದೇಶ ಕಳಿಸಿದ ಭಾರತೀಯ ಕ್ರಿಕೆಟ್ ಮಂಡಳಿ ನಿಯಮ ಉಲಲಘಿಸಿದ ಇಶಾನ್‌ ಕಿಶನ್‌ ಮತ್ತು ಶ್ರೇಯಸ್‌ ಐಯ್ಯರ್‌ ಅವರನ್ನು ಒಪ್ಪಂದದಿಂದ ಹೊರಗಿಟ್ಟು ಕಠಿಣ ಸಂದೇಶ ಕಳಿಸಿತು.

ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ ಎಂದು ರೋಹಿತ್ ಸ್ಪಷ್ಟಪಡಿಸಿದ್ದಾರೆ.

ʻಈ ಬಗ್ಗೆ ಬಹಳ ಕಾಲದಿಂದ ಚರ್ಚೆ ನಡೆಯುತ್ತಿದೆ. ಆಟಗಾರರು ವೈದ್ಯಕೀಯವಾಗಿ ಸಮರ್ಥರಿರುವಾಗ ದೇಶೀ ಕ್ರಿಕೆಟ್ ಗೆ ಲಭ್ಯವಿರಬೇಕುʼ ಎಂದು ರೋಹಿತ್ ಹೇಳಿದರು. ರೋಹಿತ್ ಧರ್ಮಶಾಲಾ ಟೆಸ್ಟ್‌ಗಾಗಿ ತಯಾರಿಯಲ್ಲಿ ನಿರತರಾಗಿದ್ದಾರೆ. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ರಣಜಿ ಟ್ರೋಫಿಯ ಸೆಮಿಫೈನಲ್‌ಗಳನ್ನು ವೀಕ್ಷಿಸಿದ್ದಾರೆ. ಈ ವಾರ ರಣಜಿ ಟ್ರೋಫೀ ಪಂದ್ಯಗಳನ್ನು ನೀವು ನೋಡಿರಬಹುದು. ತಮಿಳುನಾಡು ಮತ್ತು ಮುಂಬೈ ನಡುವಿನ ಪಂದ್ಯ ಕುತೂಹಲಕಾರಿಯಾಗಿತ್ತು. ದೇಶಿ ಕ್ರಿಕೆಟ್ಟಿನಲ್ಲಿ ಇಂದಿಗೂ ಕುತೂಹಲಕರ ಪಂದ್ಯಗಳು ನಡೆಯುತ್ತವೆ. ವಿದರ್ಭ ಗೆಲುವು ಸಾಧಿಸಿತು ಎಂದು ಭಾವಿಸಿದ್ದೇನೆʼ( ಬುಧವಾರ ಗೆಲುವು ಸಾಧಿಸಿದೆ).

ʻಅಂತಹ ಪಂದ್ಯಗಳನ್ನು ವೀಕ್ಷಿಸಲು ಜನ ಬರುವುದನ್ನು ನೀವು ನೋಡುತ್ತೀರಿ. ನಾವು ದೇಶಿ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡುವುದು ಮುಖ್ಯ. ಇದು ಭಾರತೀಯ ಕ್ರಿಕೆಟ್‌ನ ತಿರುಳುʼ ಎಂದು ಶರ್ಮಾ ಹೇಳಿದರು.

Read More
Next Story