ರೆಹಾನ್ ಅಹ್ಮದ್ ವೀಸಾ ಸಮಸ್ಯೆ ಶೀಘ್ರ ಪರಿಹಾರ: ಒಲ್ಲಿ ಪೋಪ್
x

ರೆಹಾನ್ ಅಹ್ಮದ್ ವೀಸಾ ಸಮಸ್ಯೆ ಶೀಘ್ರ ಪರಿಹಾರ: ಒಲ್ಲಿ ಪೋಪ್


ರಾಜ್‌ಕೋಟ್, ಫೆ.13: ರೆಹಾನ್‌ ಅಹ್ಮದ್‌ ವೀಸಾ ಸಮಸ್ಯೆ ಗುರುವಾರದ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಸಮಸ್ಯೆ ಬಗೆಹರಿಯಲಿದೆ ಎಂದು ಸ್ಪಿನ್ನರ್ ಒಲಿ ಪೋಪ್ ಭರವಸೆ ವ್ಯಕ್ತಪಡಿಸಿದ್ದಾರೆ.

ಮೂರನೇ ಟೆಸ್ಟ್‌ಗಾಗಿ ಇಂಗ್ಲೆಂಡ್‌ಗೆ ಆಗಮಿಸಿದ ರೆಹಾನ್ ಅಹ್ಮದ್ , ವೀಸಾ ಸಮಸ್ಯೆ ಎದುರಿಸುತ್ತಿದ್ದಾರೆ. ಅಬುಧಾಬಿಯಲ್ಲಿ ನಡೆದ ಎರಡನೇ ಟೆಸ್ಟ್ ಬಳಿಕ ಇಂಗ್ಲೆಂಡ್ 10 ದಿನಗಳ ವಿರಾಮ ಪಡೆದಿತ್ತು. ತಂಡವು ಶಾರ್ಜಾಗೆ ಹಿಂದಿರುಗಿದಾಗ, ಅಹ್ಮದ್ ಕೇವಲ ಏಕ-ಪ್ರವೇಶದ ವೀಸಾ ಹೊಂದಿದ್ದರು. ಆದ್ದರಿಂದ ಅವರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಿಲ್ಲ. ಸ್ಥಳೀಯ ಅಧಿಕಾರಿಗಳು ರೆಹಾನ್‌ ಗೆ ಎರಡು ದಿನಗಳ ತಾತ್ಕಾಲಿಕ ವೀಸಾ ನೀಡಿದರು.

ರೆಹಾನ್‌ ಮೊದಲ ಟೆಸ್ಟ್‌ನಲ್ಲಿ 28 ರನ್‌ ನೀಡಿ ಎರಡು ವಿಕೆಟ್ ಹಾಗೂ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆರು ವಿಕೆಟ್‌ ಪಡೆದರು ಮತ್ತು ಭಾರತ 106 ರನ್‌ಗಳಿಂದ ಗೆದ್ದು ಸರಣಿಯನ್ನು 1-1 ರಿಂದ ಸಮಬಲಗೊಳಿಸಿಕೊಂಡಿತು. ʻಅಹ್ಮದ್ ಅವರ ದಾಖಲೆಗಳಲ್ಲಿ ಕೆಲವು ವ್ಯತ್ಯಾಸಗಳನ್ನು ಭಾರತೀಯ ಅಧಿಕಾರಿಗಳು ಗಮನಿಸಿದ್ದಾರೆ ಮತ್ತು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆʼ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಉಲ್ಲೇಖಿಸಿದೆ.

Read More
Next Story