‌ವಿಶ್ವಕಪ್‌ ಗೆಲುವು| 2.5 ಕೋಟಿ ರೂ. ಬೋನಸ್ ಹಣ ನಿರಾಕರಿಸಿದ ರಾಹುಲ್ ದ್ರಾವಿಡ್
x

‌ವಿಶ್ವಕಪ್‌ ಗೆಲುವು| 2.5 ಕೋಟಿ ರೂ. ಬೋನಸ್ ಹಣ ನಿರಾಕರಿಸಿದ ರಾಹುಲ್ ದ್ರಾವಿಡ್


ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಮುಖ್ಯ ಕೋಚ್ ರಾಹುಲ್‌ ದ್ರಾವಿಡ್‌ ಅವರಿಗೆ ಬಿಸಿಸಿಐ ಘೋಷಿಸಿದ್ದ ಹೆಚ್ಚುವರಿ ಬೋನಸ್‌ ಹಣವನ್ನು ನಿರಾಕರಿಸಿದ್ದಾರೆ.

ತಂಡದ ಇತರ ಕೋಚ್‌ಗಳು 2.5 ಕೋಟಿ ಪಡೆಯುತ್ತಿರುವಾಗ ನಾನು ಗಳಿಕೆಗಿಂತ ದೊಡ್ಡ ಬಹುಮಾನದ ಹಣ ಪಡೆಯುವುದು ಸೂಕ್ತವಲ್ಲ ಎಂದು ಕಾರಣ ತಿಳಿಸಿದ್ದಾರೆ.

ಕೆರಿಬಿಯನ್ಸ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ 17 ವರ್ಷಗಳ ನಂತರ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ, 15 ಆಟಗಾರರು, ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ತಂಡಕ್ಕೆ ಒಟ್ಟು 125 ಕೋಟಿ ರೂಪಾಯಿ ಬಹುಮಾನವನ್ನು ನೀಡಲಾಗುವುದು ಎಂದು ಬಿಸಿಸಿಐ ಘೋಷಿಸಿತು. .

ಮುಖ್ಯ ಕೋಚ್ ದ್ರಾವಿಡ್ ಅವರಿಗೆ 5 ಕೋಟಿ ರೂ., ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರಿಗೆ ತಲಾ 2.5 ಕೋಟಿ ರೂ. ನೀಡಲಾಗುವುದು ಎಂದು ಹೇಳಲಾಗಿತ್ತು.

ಆಟಗಾರನಾಗಿ ಮತ್ತು ತನ್ನ ಆಟದ ವೃತ್ತಿಜೀವನದ ನಂತರ ಯಾವಾಗಲೂ ಶ್ರೇಷ್ಠತೆಯನ್ನು ಮೆರೆಯುತ್ತ ಬಂದಿರುವ ರಾಹುಲ್ ದ್ರಾವಿಡ್, ತಂಡದ ಇತರ ತರಬೇತುದಾರರಿಗೆ ಸಮಾನವಾದ ಬೋನಸ್ ಅನ್ನು ನೀಡಬೇಕು ಎಂದು ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

2018 ರಲ್ಲಿಯೂ, ಅವರು ವಿಶ್ವಕಪ್ ಗೆದ್ದ U-19 ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದರು. ಬಿಸಿಸಿಐ ದ್ರಾವಿಡ್‌ಗೆ 50 ಲಕ್ಷ ರೂಪಾಯಿ ಬೋನಸ್ ಮತ್ತು ಇತರ ಸಹಾಯಕ ಸಿಬ್ಬಂದಿಗೆ ಕೇವಲ ₹ 20 ಲಕ್ಷ ಬೋನಸ್ ಘೋಷಿಸಿತ್ತು. ಆ ಸಂದರ್ಭದಲ್ಲಿಯೂ, "ಜೆಂಟಲ್‌ಮನ್ ಕ್ರಿಕೆಟಿಗ" ಉಳಿದ ಸಹಾಯಕ ಸಿಬ್ಬಂದಿಗಿಂತ ಹೆಚ್ಚಿನ ಬೋನಸ್ ಅನ್ನು ಸ್ವೀಕರಿಸಲು ನಿರಾಕರಿಸಿದ್ದರು.

Read More
Next Story