
SM Krishna: ಎಸ್‌ಎಂ ಕೃಷ್ಣ ಸ್ಮರಣಾರ್ಥ ಐಟಿಎಫ್ ಟೆನಿಸ್ ಟೂರ್ನಮೆಂಟ್
ಕೃಷ್ಣ ಅವರು ಟೆನಿಸ್ ಬಗ್ಗೆ ಒಲವು ಹೊಂದಿದ್ದರು ಮತ್ತು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು.
ಟೆನಿಸ್ ಉತ್ಸಾಹಿಯಾಗಿದ್ದ ಮತ್ತು 1999ರಿಂದ 2020ರವರೆಗೆ ಕೆಎಸ್‌ಎಲ್‌ಟಿಎಗೆ ಎರಡು ದಶಕಗಳ ಕಾಲ ಅಧ್ಯಕ್ಷರಾಗಿ ಮುನ್ನಡೆಸಿದ ಎಸ್‌ಎಂ ಕೃಷ್ಣ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಟೂರ್ನಮೆಂಟ್ ಆಯೋಜಿಸಲಾಗಿದೆ.
ಮಾಜಿ ಸಿಎಂ ದಿವಂಗತ ಎಸ್‌ಎಂ ಕೃಷ್ಣ ಅವರಿಗೆ ಟೆನಿಸ್ ಪ್ರೀತಿಯ ಕ್ರೀಡೆ. ಇದೀಗ ಅವರ ಸ್ಮರಣಾರ್ಥ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಮೊದಲ ಬಾರಿಗೆ ಎಸ್‌ಎಂ ಕೃಷ್ಣ ಸ್ಮಾರಕ ಐಟಿಎಫ್ ಪುರುಷರ ಎಂ25 ಟೂರ್ನಮೆಂಟ್ ಆಯೋಜಿಸಿದೆ. 30,000 ಡಾಲರ್ ಬಹುಮಾನದ ಮೊತ್ತ ಹೊಂದಿರುವ ಟೂರ್ನಿ, ಮಾರ್ಚ್ 31ರಿಂದ ಏಪ್ರಿಲ್ 6ರವರೆಗೆ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪ್ರತಿಷ್ಠಿತ ಟೂರ್ನಮೆಂಟ್ ಕೆಎಸ್‌ಎಲ್‌ಟಿಎ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಜಂಟಿಯಾಗಿ ಆಯೋಜಿಸುತ್ತಿದೆ. ಟೆನಿಸ್ ಉತ್ಸಾಹಿಯಾಗಿದ್ದ ಮತ್ತು 1999ರಿಂದ 2020ರವರೆಗೆ ಕೆಎಸ್‌ಎಲ್‌ಟಿಎಗೆ ಎರಡು ದಶಕಗಳ ಕಾಲ ಅಧ್ಯಕ್ಷರಾಗಿ ಮುನ್ನಡೆಸಿದ ಎಸ್‌ಎಂ ಕೃಷ್ಣ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಟೂರ್ನಮೆಂಟ್ ಆಯೋಜಿಸಗಿದೆ. ಅವರು 2015ರಿಂದ 2023ರವರೆಗೆ ಎಐಟಿಎ (ಅಖಿಲ ಭಾರತ ಟೆನಿಸ್ ಸಂಸ್ಥೆ) ಯ ಜೀವಮಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ಕೆಎಸ್‌ಎಲ್‌ಟಿಎ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಟೆನಿಸ್ ಬಗ್ಗೆ ಒಲವು
ಕೃಷ್ಣ ಅವರು ಟೆನಿಸ್ ಬಗ್ಗೆ ಒಲವು ಹೊಂದಿದ್ದರು ಮತ್ತು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು. ಅವರ ನಾಯಕತ್ವದಲ್ಲಿ, ಕೋರ್ಟ್ ಮತ್ತು ಕೆಎಸ್‌ಎಲ್‌ಟಿಎ ಕ್ರೀಡಾ ಸೌಲಭ್ಯವನ್ನು ಅವರು ಆಧುನಿಕಗೊಳಿಸಲಾಗಿತ್ತು. ಅದೀಗ ಅನ್ಯುನ್ನತ ಟೆನಿಸ್ ಕೋರ್ಟ್ ಆಗಿ ಮಾರ್ಪಟ್ಟಿದೆ.
ಬೆಂಗಳೂರಿಗೆ ಲೆಜೆಂಡ್ಸ್ ಟೂರ್, ವರ್ಲ್ಡ್ ಡಬಲ್ಸ್ ಚಾಂಪಿಯನ್‌ಶಿಪ್ ಮತ್ತು ಡಬ್ಲ್ಯೂಟಿಎ ಇಂಡಿಯನ್ ಓಪನ್‌ನಂತಹ ಜಾಗತಿಕ ಮಟ್ಟದ ಕ್ರೀಡಾಕೂಟಗಳನ್ನು ಬೆಂಗಳೂರಿಗೆ ತಂದಿದ್ದರ. ಸೆರೆನಾ ಮತ್ತು ವೀನಸ್ ವಿಲಿಯಮ್ಸ್ ಸಹೋದರಿಯರು ಬೆಂಗಳೂರಿಗೆ ಬಂದಿದ್ದರು.
ಕರ್ನಾಟಕದಲ್ಲಿ ಟೆನಿಸ್‌ನ ರಾಜರೋಗಿಯಾಗಿ, ಕೃಷ್ಣ ಅವರು ಈ ಕ್ರೀಡೆಯನ್ನು ದ್ವಿತೀಯ ಶ್ರೇಣಿಯ ನಗರಗಳು ಮತ್ತು ಇತರ ಜಿಲ್ಲೆಗಳಿಗೆ ಕೊಂಡೊಯ್ಯುಲು ಶ್ರಮಿಸಿದ್ದರು. ಇಂದು ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಐಟಿಎಫ್ ಟೂರ್ನಮೆಂಟ್‌ಗಳು ನಡೆಯುತ್ತವೆ. ಐಟಿಎಫ್ ಮತ್ತು ಎಟಿಪಿ ಚಾಲೆಂಜರ್ ಕ್ರೀಡಾಕೂಟಗಳನ್ನು ಆಯೋಜಿಸಬಲ್ಲ ಮೂಲಸೌಕರ್ಯವನ್ನು ಹೊಂದಿರುವ ದೇಶದ ಏಕೈಕ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ಹೊಂದಿದೆ.
"ದಿವಂಗತ ಶ್ರೀ ಎಸ್‌ಎಂ ಕೃಷ್ಣ ಅವರ ಹೆಸರಿನಲ್ಲಿ ಸ್ಮಾರಕ ಟೂರ್ನಮೆಂಟ್ ಆಯೋಜಿಸುವುದು ಪ್ರಿಯಾಂಕ್ ಖರ್ಗೆ ಮತ್ತು ಕೆಎಸ್‌ಎಲ್‌ಟಿಎಯ ಚಿಂತನಶೀಲ ಉಪಕ್ರಮವಾಗಿದೆ," ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಮಾತನಾಡಿ, "ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎಸ್‌ಎಂ ಕೃಷ್ಣ ಅವರು ಕರ್ನಾಟಕದ ಟೆನಿಸ್‌ಗೆ ನೀಡಿದ ಕೊಡುಗೆ ಅಪಾರ. ಅವರ ದೂರದೃಷ್ಟಿಯಿಂದ ಕ್ರೀಡೆಯನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಮತ್ತು ಅವರ ಮಾರ್ಗದರ್ಶನದಲ್ಲಿ ಕೆಎಸ್‌ಎಲ್‌ಟಿಎ ದಿನೇ ದಿನೇ ಬಲಗೊಂಡಿದೆ. ಇಂದು ಇದು ದೇಶದಲ್ಲಿ ಅತಿದೊಡ್ಡ ಐಟಿಎಫ್ ಮತ್ತು ಎಟಿಪಿ ಟೂರ್ನಮೆಂಟ್‌ಗಳನ್ನು ಆಯೋಜಿಸುವ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ," ಎಂದು ತಿಳಿಸಿದರು.
ಟೂರ್ನಮೆಂಟ್‌ನ ಅರ್ಹತಾ ಸುತ್ತುಗಳು ಮಾರ್ಚ್ 29 ಮತ್ತು 30ರಂದು ನಡೆಯಲಿದ್ದು, ಮುಖ್ಯ ಸುತ್ತುಗಳು ಮಾರ್ಚ್ 31ರಿಂದ ಆರಂಭವಾಗಿ ಸಿಂಗಲ್ಸ್ ಫೈನಲ್ ಏಪ್ರಿಲ್ 6ರಂದು ನಡೆಯಲಿದೆ. ಪ್ರೇಕ್ಷಕರಿಗೆ ಪ್ರವೇಶ ಉಚಿತವಾಗಿರುತ್ತದೆ.