ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಶಖೆ ಅಂತ್ಯ?
x

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಶಖೆ ಅಂತ್ಯ?

ನವೆಂಬರ್ 2021 ರಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡ ದ್ರಾವಿಡ್‌ ಅವರಿಗೆ 2023 ರ ವಿಶ್ವಕಪ್ ಚಾಂಪಿಯನ್‌ಶಿಪ್ ನಂತರ ವಿಸ್ತರಣೆ ನೀಡಲಾಯಿತು. ವಿದೇಶಿ ಕೋಚ್‌ ಆಯ್ಕೆಯ ಸಾಧ್ಯತೆಯೂ ಇದೆ. ರಾಹುಲ್‌ ದ್ರಾವಿಡ್‌ ಕೂಡ ನೂತನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.


'ದಿ ವಾಲ್' ಎಂದು ಜನಪ್ರಿಯವಾಗಿರುವ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಟೀಮ್ ಇಂಡಿಯಾದ ಮುಖ್ಯ ಕೋಚ್ ಅಧಿಕಾರಾವಧಿ ಈ ಜೂನ್‌ನಲ್ಲಿ ಕೊನೆಗೊಳ್ಳಲಿದೆ. ಅವರಿಗೆ ವಿಸ್ತರಣೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ಹೊಸ ಮುಖ್ಯ ಕೋಚ್‌ಗೆ ಜಾಹೀರಾತು ಪ್ರಕಟಿಸಲಿದೆ. ಆದರೆ, ಮಾಧ್ಯಮ ವರದಿಗಳ ಪ್ರಕಾರ, ದ್ರಾವಿಡ್ ಕೂಡ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ʻರಾಹುಲ್ ಅವರ ಅಧಿಕಾರಾವಧಿ ಜೂನ್ ವರೆಗೆ ಮಾತ್ರ. ಅರ್ಜಿ ಸಲ್ಲಿಸಲು ಬಯಸಿದರೆ, ಅವರು ಹಾಗೆ ಮಾಡಲು ಸ್ವತಂತ್ರರುʼ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಉಲ್ಲೇಖಿಸಿ ಕ್ರಿಕ್‌ ಬಜ್ ವರದಿ ಮಾಡಿದೆ.

ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಇತರ ಕೋಚಿಂಗ್ ಸಿಬ್ಬಂದಿಯನ್ನು ನೇಮಕ ಮಾಡುವ ಪ್ರಕ್ರಿಯೆ ಹೊಸ ಮುಖ್ಯ ಕೋಚ್ ಆಯ್ಕೆಯೊಂದಿಗೆ ಪ್ರಾರಂಭವಾಗುತ್ತದೆ.

ಪ್ರತ್ಯೇಕ ತರಬೇತುದಾರರಿಲ್ಲ: ವಿದೇಶಿ ಮುಖ್ಯ ಕೋಚ್‌ನ ಸಾಧ್ಯತೆಯನ್ನು ಶಾ ತಳ್ಳಿಹಾಕಲಿಲ್ಲ. ʻಹೊಸ ಕೋಚ್ ಭಾರತೀಯ ಅಥವಾ ವಿದೇಶಿ ಎಂದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಇದು ಕ್ರಿಕೆಟ್ ಸಲಹಾ ಸಮಿತಿ( ಸಿಎಸಿ)ಗೆ ಸಂಬಂ ಧಿಸಿದ ವಿಷಯ. ನಾವು ಒಂದು ಜಾಗತಿಕ ಸಂಸ್ಥೆʼ ಎಂದು ಷಾ ಹೇಳಿದರು, ಆದರೆ, ಬಿಸಿಸಿಐ ವಿವಿಧ ಸ್ವರೂಪಗಳಾದ ಏಕದಿನ, ಟಿ 20 ಮತ್ತು ಟೆಸ್ಟ್ ಪಂದ್ಯಗಳಿಗೆ ಪ್ರತ್ಯೇಕ ತರಬೇತು ದಾರರನ್ನು ನೇಮಿಸಿಕೊಳ್ಳುವ ಸಾಧ್ಯತೆಯಿಲ್ಲ.

ʻಆ ನಿರ್ಧಾರವನ್ನು ಸಹ ಸಿಎಸಿ ತೆಗೆದುಕೊಳ್ಳುತ್ತದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಅವರಂತಹ ಅನೇಕ ಎಲ್ಲ ವಿಧದಲ್ಲೂ ಆಡಬಲ್ಲ ಆಟಗಾರರಿದ್ದಾರೆ. ಇದಲ್ಲದೆ, ಭಾರತದಲ್ಲಿ ಪ್ರತ್ಯೇಕ ತರಬೇತಿದಾರರನ್ನು ನೇಮಿಸಿಕೊಂಡ ಪೂರ್ವನಿದರ್ಶನವಿಲ್ಲʼ ಎಂದು ಶಾ ಹೇಳಿದ್ದಾರೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಕ್ರಿಕೆಟ್ ಮಂಡಳಿಗಳು ವಿಭಿನ್ನ ಸ್ವರೂಪಗಳಿಗೆ ವಿಭಿನ್ನ ತರಬೇತುದಾರರನ್ನು ನೇಮಿಸಿಕೊಳ್ಳುತ್ತವೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ: ಅಂತಾರಾಷ್ಟ್ರೀಯ ಆಟಗಾರರಿಂದ ಹೆಚ್ಚು ಟೀಕೆಗೊಳಗಾಗಿರುವ ಇಂಪ್ಯಾಕ್ಟ್‌ ಆಟಗಾರರ ನಿಯಮವನ್ನು ಭಾಗಿದಾರರೊಂದಿಗೆ ಚರ್ಚಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದರು. ʻಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯನ್ನು ಪರೀಕ್ಷೆಗೆಂದು ಮಾಡಲಾಗಿತ್ತು. ಇದರಿಂದ ಇಬ್ಬರು ಭಾರತೀಯ ಆಟಗಾರರು ಐಪಿಎಲ್‌ನಲ್ಲಿ ಅವಕಾಶ ಪಡೆದಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್‌ ಗಳ ಮುಂದುವರಿಕೆಯನ್ನು ಫ್ರಾಂಚೈಸಿಗಳು ಮತ್ತು ಬ್ರಾಡ್‌ಕಾಸ್ಟರ್‌ಗಳೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ. ಇದು ಶಾಶ್ವತ ವ್ಯವಸ್ಥೆಯಲ್ಲ; ಆದರೆ, ಇದರ ಬಗ್ಗೆ ಯಾರೂ ಹಿಮ್ಮಾಹಿತಿ ನೀಡಿಲ್ಲʼ ಎಂದು ಹೇಳಿದರು.

ನವೆಂಬರ್ 2021 ರಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡ ದ್ರಾವಿಡ್‌ ಅವರಿಗೆ 2023 ರ ವಿಶ್ವಕಪ್ ಚಾಂಪಿಯನ್‌ಶಿಪ್ ನಂತರ ವಿಸ್ತರಣೆ ನೀಡಲಾಯಿತು.

Read More
Next Story