IPL 2024| ಇಂದು KKR Vs SRH ಫೈನಲ್‌ ಪಂದ್ಯ: ಈ ಸಲ ಕಪ್‌ ಯಾರಿಗೆ?
x

IPL 2024| ಇಂದು KKR Vs SRH ಫೈನಲ್‌ ಪಂದ್ಯ: ಈ ಸಲ ಕಪ್‌ ಯಾರಿಗೆ?


ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಫೈನಲ್ ಪಂದ್ಯ ಇಂದು ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆಯಲಿದೆ. ಅಂತಿಮ ಹಣಾಹಣಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್​ರೈಸರ್ಸ್ ಹೈದಾರಾಬಾದ್​ (SRH) ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯದೊಂದಿಗೆ ಐಪಿಎಲ್ ಸೀಸನ್ 17ಕ್ಕೆ ತೆರೆ ಬೀಳಲಿದೆ.

ಪಂದ್ಯದ ಕುರಿತಾದ ಸಂಕ್ಷಿಪ್ತ ಮಾಹಿತಿ:

ಮುಖಾಮುಖಿ: ಕೆಕೆಆರ್ vs ಎಸ್​ಆರ್​ಹೆಚ್

ನಾಯಕರುಗಳು: ಶ್ರೇಯಸ್ ಅಯ್ಯರ್ (ಕೆಕೆಆರ್), ಪ್ಯಾಟ್ ಕಮಿನ್ಸ್ (ಎಸ್​ಆರ್​ಹೆಚ್​)

ಪಂದ್ಯ ನಡೆಯುವ ಸ್ಥಳ: ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

ಟಾಸ್ ಪ್ರಕ್ರಿಯೆ: ರಾತ್ರಿ 7 ಗಂಟೆಗೆ

ಪಂದ್ಯ ಶುರು: ರಾತ್ರಿ 7.30 ರಿಂದ

ಕೊಲ್ಕತ್ತಾ ನೈಟ್ ರೈಡರ್ಸ್ ಈವರೆಗೆ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದೀಗ ಮೂರನೇ ಸಲ ಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. ಅತ್ತ ಹೈದರಾಬಾದ್ ಫ್ರಾಂಚೈಸಿ ಕೂಡ ಈಗಾಗಲೇ 2 ಸಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದೀಗ ಮೂರನೇ ಬಾರಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.

2012: ಕೊಲ್ಕತ್ತಾ ನೈಟ್ ರೈಡರ್ಸ್

2014: ಕೊಲ್ಕತ್ತಾ ನೈಟ್ ರೈಡರ್ಸ್

2009: ಡೆಕ್ಕನ್ ಚಾರ್ಜರ್ಸ್​ ಹೈದರಾಬಾದ್ (ಈಗಿನ ಎಸ್​ಆರ್‌ಹೆಚ್)

2016: ಸನ್‌ರೈಸರ್ಸ್ ಹೈದರಾಬಾದ್

ಇನ್ನು ಉಭಯ ತಂಡಗಳು ಈವರೆಗೆ 27 ಬಾರಿ ಮುಖಾಮುಖಿಯಾಗಿದ್ದು, ಕೆಕೆಆರ್ ತಂಡ 18 ಬಾರಿ ಜಯ ಸಾಧಿಸಿದರೆ, ಎಸ್​ಆರ್‌ಹೆಚ್ ತಂಡ ಗೆದ್ದಿರುವುದು ಕೇವಲ 9 ಬಾರಿ ಮಾತ್ರ. ಅದರಲ್ಲೂ ಈ ಸಲ ಆಡಲಾದ ಎರಡೂ ಪಂದ್ಯಗಳಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿದೆ. ಎಸ್​ಆರ್‌ಹೆಚ್ ವಿರುದ್ಧ ಕೆಕೆಆರ್ ಮೇಲುಗೈ ಹೊಂದಿರುವುದು ಸ್ಪಷ್ಟ. ಇದಾಗ್ಯೂ ಅಂತಿಮ ಪಂದ್ಯದಲ್ಲಿ ಎಸ್‌ಆರ್‌ಹೆಚ್‌ ಕಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

Read More
Next Story