IND vs PAK Cricket | ರೋಹಿತ್​ ಪಡೆಗೆ ಪಾಕ್ ಮಣಿಸಿ ಸೆಮಿಫೈನಲ್ ಸ್ಥಾನ ಭದ್ರವಾಗಿಸುವ ಗುರಿ
x

IND vs PAK Cricket | ರೋಹಿತ್​ ಪಡೆಗೆ ಪಾಕ್ ಮಣಿಸಿ ಸೆಮಿಫೈನಲ್ ಸ್ಥಾನ ಭದ್ರವಾಗಿಸುವ ಗುರಿ

IND vs PAK: ಹಿಂದಿನ ಪಂದ್ಯಗಳಲ್ಲಿ ಭಾರತವು ಬಾಂಗ್ಲಾದೇಶ ವಿರುದ್ಧ 6 ವಿಕೆಟ್ ವಿಜಯ ಸಾಧಿಸಿದ್ದರೆ, ಪಾಕಿಸ್ತಾನವು ಕರಾಚಿಯಲ್ಲಿ ನಡೆದ ಹಣಾಹಣಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 60 ರನ್​ಗಳ ಸೋಲಿನ ನಿರಾಶೆಯಲ್ಲಿದೆ.


ಚಾಂಪಿಯನ್ಸ್​ ಟ್ರೋಫಿಯ (Champions Trophy) ಗುಂಪು ಒಂದರಲ್ಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೆಬ್ರವರಿ 23 (ಭಾನುವಾರ ದುಬೈ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ DICS) ಮುಖಾಮುಖಿಯಾಗಲಿವೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸು ಗುರಿ ಹೊಂದಿದ್ದರೆ, ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡ ಸೆಮಿಫೈನಲ್​ ಅವಕಾಶ ಜೀವಂತವಾಗಿಡುವುದಕ್ಕೆ ಪ್ರಯತ್ನಿಸಲಿದೆ.

ಹಿಂದಿನ ಪಂದ್ಯಗಳಲ್ಲಿ ಭಾರತವು ಬಾಂಗ್ಲಾದೇಶ ವಿರುದ್ಧ 6 ವಿಕೆಟ್ ವಿಜಯ ಸಾಧಿಸಿದ್ದರೆ, ಪಾಕಿಸ್ತಾನವು ಕರಾಚಿಯಲ್ಲಿ ನಡೆದ ಹಣಾಹಣಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 60 ರನ್​ಗಳ ಸೋಲಿನ ನಿರಾಶೆಯಲ್ಲಿದೆ.

ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾದಾಗ, ಪಾಕಿಸ್ತಾನ ವಿಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಲಂಡನ್‌ನಲ್ಲಿ ಪಡೆದ ಆ ಯಶಸ್ಸಿನಿಂದ ಪಾಕಿಸ್ತಾನ ಉತ್ತೇಜನ ಪಡೆಯಬಹುದು. ಆದರೆ, ಭಾರತ ತಂಡ ಈ ಬಾರಿ ಸುಲಭವಾಗಿ ಬಗ್ಗುವುದಿಲ್ಲ ಎಂದೇ ಭಾವಿಸಬಹುದು.

ಎರಡೂ ದೇಶಗಳ ನಡುವಿನ ಆಟಗಾರರ ನಡುವೆ ರಾಜಕೀಯ ಕಾರಣಗಳಿಂದಾಗಿ ಹಿಂದಿನಂತೆ ಜಿದ್ದು ಇಲ್ಲ. ಆದರೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ ತಟಸ್ಥ ತಾಣವಾಗಿರುವ ದುಬೈನಲ್ಲಿ ನಡೆಯುವ ಕಾರಣ ವಿಶೇಷ ಮಹತ್ವ ಹೊಂದಿದೆ.

ಭಾರತಕ್ಕೆ ಹೆಚ್ಚು ಅನುಕೂಲ

ಭಾರತವು ದುಬೈ ಸ್ಟೇಡಿಯಮ್​ನಲ್ಲಿ ನಡೆದ ಏಕದಿನ ಕ್ರಿಕೆಟ್​ ಪಂದ್ಯಗಳಲ್ಲಿ ಇದುವರೆಗೆ ಅಜೇಯ ದಾಖಲೆ ಹೊಂದಿದೆ. 2018ರ ಏಷ್ಯಾ ಕಪ್ ಗೆಲುವು ಸೇರಿ ಭಾರತವು ಈ ಮೈದಾನದಲ್ಲಿ ಪಾಕಿಸ್ತಾನವನ್ನು ಎರಡು ಬಾರಿ ಸೋಲಿಸಿದೆ.

ಇನ್ನು ಪಾಕಿಸ್ತಾನ ತಂಡ ನ್ಯೂಜಿಲೆಂಡ್​ ವಿರುದ್ಧ ಸೋತ ಕೇವಲ ಎರಡು ದಿನಗಳ ಹಿಂದೆ ದುಬೈಗೆ ಆಗಮಿಸಿದೆ. ಈ ಕಾರಣದಿಂದಾಗಿ, ಮನಸ್ಥಿತಿಯ ದೃಷ್ಟಿಯಿಂದ ಮತ್ತು ತಯಾರಿಯ ಅಂಶದಲ್ಲೂ ಭಾರತಕ್ಕೆ ಸ್ಪಷ್ಟ ಮುನ್ನಡೆ ಸಿಗಲಿದೆ.

ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿದ ಸೂಚನೆ

ಭಾರತದ ನಾಯಕ ರೋಹಿತ್ ಶರ್ಮಾ ಟೂರ್ನಮೆಂಟ್ ಆರಂಭಕ್ಕೂ ಮೊದಲು ಸ್ಫೋಟಕ ಬ್ಯಾಟಿಂಗ್ ಮಾಡುತ್ತಿಲ್ಲ ಎಂಬ ಚಿಂತೆಯಲ್ಲಿದ್ದರು. ಆದರೆ ಬಾಂಗ್ಲಾದೇಶ ವಿರುದ್ಧ 41 ರನ್ ಗಳಿಸಿದ ಮೂಲಕ ತಮ್ಮ ಫಾರ್ಮ್‌ಗೆ ಮರಳುತ್ತಿರುವ ಸೂಚನೆ ನೀಡಿದರು. ಶುಭ್ಮನ್ ಗಿಲ್ ಶತಕ ಬಾರಿಸಿದರೂ, ರೋಹಿತ್ ಅವರ ವೇಗದ ಆಟ ಕೂಡ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಬಾಬರ್ ಅಜಮ್‌ನ ನಿಧಾನಗತಿಯ ಬ್ಯಾಟಿಂಗ್ ಮೇಲೆ ಟೀಕೆ

ಪಾಕಿಸ್ತಾನದ ನಾಯಕ ಬಾಬರ್ ಆಜಮ್ ನ್ಯೂಜಿಲೆಂಡ್ ವಿರುದ್ಧ 90 ಎಸೆತಗಳಲ್ಲಿ ಕೇವಲ 64 ರನ್ ಗಳಿಸಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. 320 ರನ್​ಗೆ ಪ್ರತಿಯಾಗಿ ಆಡುವಾಗ ಅವರು ನಿಧಾನಗತಿಯ ಆಟ ಆಡಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿತ್ತು.

ಫಖರ್ ಜಮಾನ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಇಮಾಮ್ ಉಲ್ ಹಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಪಾಕಿಸ್ತಾನಕ್ಕೆ ಖುಷ್ದಿಲ್ ಶಾ ಬಾರಿಸಿವು 69 ರನ್ ಪಾಸಿಟಿವ್ ವಿಷಯವಾಗಿದೆ.

ವಿರಾಟ್ ಕೊಹ್ಲಿ ತೀವ್ರ ಒತ್ತಡದಲ್ಲಿ

ಭಾರತದ ಪರ ವಿರಾಟ್ ಕೊಹ್ಲಿ ಆಟವನ್ನು ದೊಡ್ಡ ಮೊತ್ತಕ್ಕೆ ಪರಿವರ್ತಿಸಲು ವಿಫಲರಾಗುತ್ತಿದ್ದಾರೆ. ಆದರೆ ಪಾಕಿಸ್ತಾನ ವಿರುದ್ಧ ಅವರು ಹಲವು ಮಹತ್ವದ ಇನ್ನಿಂಗ್ಸ್ ಆಡಿರುವುದರಿಂದ ಈ ಪಂದ್ಯದಲ್ಲಿ ಅವರ ಮೇಲೆ ಗಮನ ಇರಲಿದೆ.

ಪಾಕಿಸ್ತಾನ ತಂಡಕ್ಕೆ ದೊಡ್ಡ ಸಮಸ್ಯೆ ಅವರ ನಂಬಿಕಸ್ತ ವೇಗದ ಬೌಲರ್​ಗಳು. ಶಾಹೀನ್ ಶಾ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಬೌಲರ್​ಗಳು ನ್ಯೂಜಿಲೆಂಡ್ ವಿರುದ್ಧ ದುಬಾರಿ ಎನಿಸಿದ್ದರು.

ಶಮಿ, ರಾಣಾ ವಿಶ್ವಾಸ

ಭಾರತದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಪಡೆದಿದ್ದು, ತಂಡಕ್ಕೆ ಭರವಸೆಯ ಸಂಗತಿ. ಅವರ ಜೊತೆಗೆ ಹರ್ಷಿತ್ ರಾಣಾ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ತಂಡದಲ್ಲಿ ಇಲ್ಲದಿದ್ದರೂ ಶಮಿ ಅವರ ಫಾರ್ಮ್ ಭಾರತಕ್ಕೆ ಪ್ಲಸ್ ಪಾಯಿಂಟ್.

ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಐಸಿಸಿ ಟೂರ್ನಮೆಂಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಅವರು ಒಬ್ಬರೇ ಹೋರಾಡಿದರೂ, ಭಾರತವನ್ನು ಗೆಲುವಿಗೆ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ.

ಭಾರತ ತಂಡ ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡದಿರಬಹುದು. ಆದರೆ, ,ಮಿಸ್ಟ್ರಿ ಸ್ಪಿನ್ನರ್ ವರುಣ್​ ಚಕ್ರವರ್ತಿ ಅಚ್ಚರಿಯ ಆಯ್ಕೆಯಾಗಿ ಬಳಸುವ ಸಾಧ್ಯತೆಯಿದೆ. ಆ ಸಮಯದಲ್ಲಿ ಕುಲ್ದೀಪ್ ಯಾದವ್ ಅವರನ್ನು ಹೊರಬಿಡಬಹುದು. ಜತೆಗೆ ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ಪ್ರಮುಖ ಸ್ಪಿನ್ನರ್ ಆಗಿ ಮುಂದುವರಿಯಲಿದ್ದಾರೆ.

ಭಾರತ vs ಪಾಕಿಸ್ತಾನ: ಚಾಂಪಿಯನ್ಸ್ ಟ್ರೋಫಿ ಇತಿಹಾಸ

- ಆಡಿದ ಪಂದ್ಯಗಳು: 5

- ಪಾಕಿಸ್ತಾನ ಗೆದ್ದದ್ದು: 3

- ಭಾರತ ಗೆದ್ದದ್ದು: 2

ತಂಡಗಳ ವಿವರ

ಭಾರತ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಾಮಿ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವರೂಣ್ ಚಕ್ರವರ್ತಿ.

ಪಾಕಿಸ್ತಾನ

ಮೊಹಮ್ಮದ್ ರಿಜ್ವಾನ್ (ನಾಯಕ, ವಿಕೆಟ್ ಕೀಪರ್), ಸಲ್ಮಾನ್ ಅಲಿ ಆಗಾ (ಉಪನಾಯಕ), ಬಾಬರ್ ಆಜಮ್, ಫಖರ್ ಜಮಾನ, ಕಾಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಾಬ್ ತಾಹಿರ್, ಫಹೀಮ್ ಅಶ್ರಫ್, ಖುಷ್ದಿಲ್ ಶಾಹ್, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಹೀನ್ ಶಾ ಆಫ್ರಿದಿ.

Read More
Next Story