Kho Kho World Cup 2025: 2025ರ ಖೋ ಖೋ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಪುರುಷ, ಮಹಿಳೆಯರ ತಂಡ
Kho Kho World Cup 2025 : ತಮ್ಮ ರಣತಂತ್ರದ ಅಮೋಘ ನಿರ್ವಹಣೆ ಮತ್ತು ಅಥ್ಲೆಟಿಕ್ ಪರಾಕ್ರಮ ಪ್ರದರ್ಶಿಸುವ ಪ್ರಬಲ ಪ್ರದರ್ಶನದೊಂದಿಗೆ ತಮ್ಮ ಚಾಂಪಿಯನ್‌ಶಿಪ್‌ನಲ್ಲಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.
ಭಾರತ ಪುರುಷರ ತಂಡ 2025ರ ಖೋ ಖೋ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪೆರು ವಿರುದ್ಧ 70-38 ಅಂತರದ ಭರ್ಜರಿ ಗೆಲುವು ಸಾಧಿಸಿ 8ನೇ ಸುತ್ತಿಗೆ ಪ್ರವೇಶ ಪಡೆಯಿತು.
ವಿಶ್ವ ಕಪ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶ ಮುಂದುವರೆಸಿದ ಮೆನ್ ಇನ್ ಬ್ಲೂ ತಮ್ಮ ರಣತಂತ್ರದ ಅಮೋಘ ನಿರ್ವಹಣೆ ಮತ್ತು ಅಥ್ಲೆಟಿಕ್ ಪರಾಕ್ರಮ ಪ್ರದರ್ಶಿಸುವ ಪ್ರಬಲ ಪ್ರದರ್ಶನದೊಂದಿಗೆ ತಮ್ಮ ಚಾಂಪಿಯನ್‌ಶಿಪ್‌ನಲ್ಲಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.
ಮೊದಲ ಟರ್ನ್‌ನ ಆರಂಭಿಕ ಹಂತಗಳಲ್ಲಿ ಟೀಮ್ ಇಂಡಿಯಾ ಪ್ರಾಬಲ್ಯ ಸಾಧಿಸಿತು. ಆದರೆ ಎರಡನೇ ಟರ್ನ್‌ನಲ್ಲಿ ಪೆರು ಸಣ್ಣ ರಕ್ಷಣಾತ್ಮಕ ನಿಲುವಿನೊಂದಿಗೆ ತಿರುಗೇಟು ನೀಡುವ ಲಕ್ಷಣ ತೋರಿತು. ಹಾಗಿದ್ದರೂ, ಆತಿಥೇಯ ತಂಡ ಪ್ರತೀಕ್ ವೈಕರ್ ಅವರ ನಾಯಕತ್ವದ ಮೂಲಕ ತಮ್ಮ ಅಧಿಕಾರ ತೋರಿತು. . ಇದರಿಂದಾಗಿ ಭಾರತ ತಂಡ ಮೊದಲ ಸುತ್ತನ್ನು 36 ಅಂಕಗಳ ಮುನ್ನಡೆಯೊಂದಿಗೆ ಮುಕ್ತಾಯಗೊಳಿಸಿತು.
ಆದಿತ್ಯ ಪೋಟೆ, ಶಿವಾ ರೆಡ್ಡಿ ಮತ್ತು ಸಚಿನ್ ಭಾರ್ಗೊ ಅವರ ಅತ್ಯುತ್ತಮ ಪ್ರದರ್ಶನದೊಂದಿಗೆ ಎರಡನೇ ಟರ್ನ್ ನಲ್ಲೂ ಭಾರತ ತಂಡದ ಆಟದ ಮಟ್ಟ ಹೆಚ್ಚುತ್ತಲೇ ಹೋಯಿತು. ಭಾರತದ ಪ್ರಾಬಲ್ಯವು ಮೂರನೇ ಟರ್ನ್ ವರೆಗೂ ವಿಸ್ತರಿಸಿತು ಮತ್ತು ನಾಲ್ಕನೇ ಟರ್ನ್ ಹೊತ್ತಿಗೆ ಸ್ಕೋರ್ 70 ಅಂಕಗಳಿಗೆ ಏರಿತು.
ಅಧಿಕಾರಯುತ 32 ಅಂಕಗಳ ಗೆಲುವಿನೊಂದಿಗೆ, ಭಾರತವು ಕ್ವಾರ್ಟರ್-ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಮಹಿಳೆಯರೂ ಕ್ವಾರ್ಟರ್‌ಗೆ
ದಿನದ ಆರಂಭದಲ್ಲಿ, ಟೀಮ್ ಇಂಡಿಯಾ ಇರಾನಿನ ಮಹಿಳೆಯರ ಮೊದಲ ಬ್ಯಾಚ್ ಅನ್ನು ಔಟ್ ಮಾಡಲು ಕೇವಲ 33 ಸೆಕೆಂಡುಗಳನ್ನು ತೆಗೆದುಕೊಂಡಿತು, ಇದು ಮಹಿಳಾ ತಂಡಕ್ಕೆ ಮತ್ತೊಂದು ಗೆಲುವಿಗೆ ವೇದಿಕೆ ಸಿದ್ಧಪಡಿಸಿತು. ಅಶ್ವಿನಿ ಈ ಬಾರಿ ಪಂದ್ಯದ ಜವಾಬ್ದಾರಿ ವಹಿಸಿಕೊಂಡರು, ಆದರೆ ಟೀಮ್ ಇರಾನ್ ತಿರುಗೇಟು ನೀಡಲು ಪ್ರಯತ್ನಿಸಿತು. ಭಾರತೀಯ ಅಟಾಕ್ಯರ್‌ಗಳ ಉತ್ತಮ ನಿರ್ವಹಣೆಯ ಕಾರಣದಿಂದಾಗಿ ಅವರು ತಮ್ಮ ಡಗೌಟ್‌ಗೆ ಹಿಂತಿರುಗುವ ಮೊದಲು ಉತ್ತಮ 2 ನಿಮಿಷಗಳ ಕಾಲ ಮ್ಯಾಟ್‌ನಲ್ಲಿಯೇ ಕಳೆದರು.
ಇರಾನಿನ ಮಹಿಳೆಯರ ಆರಂಭ ಕೂಡ ಉತ್ತಮವಾಗಿತ್ತಾದರೂ, ನಾಯಕಿ ಪ್ರಿಯಾಂಕಾ ಇಂಗಲ್ ಮತ್ತು ನಿರ್ಮಲಾ ಭಾಟಿ ತಂಡವನ್ನು ಮುನ್ನಡೆಗೆ ಕೊಂಡೊಯ್ದರು.
ಟರ್ನ್ 3ರಲ್ಲಿ ಇರಾನ್ ಪರ ಅತಿ ಉದ್ದದ ಬ್ಯಾಚ್ ಸುಮಾರು ಎರಡು ನಿಮಿಷಗಳ ಕಾಲ ಮ್ಯಾಟ್‌ನಲ್ಲಿ ಉಳಿದುಕೊಂಡಿತು. ಆದರೆ ಈ ಬಾರಿ ವಜೀರ್ ನಿರ್ಮಲಾ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ಭಾರತೀಯ ಅಟಾಕ್ಯರ್‌ಗಳ ಪಾಲಿಗೆ ಸಣ್ಣ ಗಲಿಬಿಲಿ ಎದುರಿಸಿದರು. ನಸ್ರೀನ್ ಕೂಡ ತಂಡವನ್ನು ಸೇರಿಕೊಂಡರು, ತಂಡವು 3 ನಿಮಿಷಗಳ ಅವಧಿಯಲ್ಲಿ 3 ಬ್ಯಾಚ್ ಇರಾನಿಯನ್ನರನ್ನು ತ್ವರಿತವಾಗಿ ಆಲ್ ಔಟ್ ಮಾಡಿತು. ಇದು ಇರಾನ್ ತಂಡ ಕುಸಿತಕ್ಕೆ ಕಾರಣವಾಯಿತು, ಇರಾನ್ ಪಂದ್ಯದ ಅಂತಿಮ ಟರ್ನ್‌ನಲ್ಲಿ 42 ಅಂಕಗಳನ್ನು ಬಿಟ್ಟುಕೊಟ್ಟಿತು.