India v/s Bangladesh Test series | ಭಾರತಕ್ಕೆ ಸರಣಿ 2-0  ಜಯ
x
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ ಗಳಿಸಿದ ಯಶಸ್ವಿ ಜೈಸ್ವಾಲ್

India v/s Bangladesh Test series | ಭಾರತಕ್ಕೆ ಸರಣಿ 2-0 ಜಯ


ಕಾನ್ಪುರ: ಯಶಸ್ವಿ ಜೈಸ್ವಾಲ್ ಅವರ ಮತ್ತೊಂದು ಅರ್ಧ ಶತಕದೊಂದಿಗೆ ಭಾರತ ಮಂಗಳವಾರ ನಡೆದ ಎರಡನೇ ಟೆಸ್ಟ್‌ನಲ್ಲಿ ಬಾಂಗ್ಲಾ ದೇಶವನ್ನು ಮಣಿಸಿತು.

ಬಾಂಗ್ಲಾ ದೇಶವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 146 ರನ್‌ಗಳಿಗೆ ಆಲೌಟ್ ಮಾಡಿತು. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್‌ ಗಳಿಸಿದರು. ಆನಂತರ, 17.2 ಓವರ್‌ಗಳಲ್ಲಿ 95 ರನ್‌ಗಳ ಗೆಲುವಿನ ಗುರಿಯನ್ನು ಸುಲಭವಾಗಿ ಸಾಧಿಸಿತು; ಜೈಸ್ವಾಲ್ 51 ಮತ್ತು ಕೊಹ್ಲಿಅಜೇಯ 29 ರನ್ ಗಳಿಸಿದರು.

ಇದಕ್ಕೂ ಮೊದಲು, ಅಶ್ವಿನ್ (3/50), ಜಡೇಜಾ (3/34) ಮತ್ತು ಬೂಮ್ರಾ (3/17) ಬಾಂಗ್ಲಾ ದೇಶದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಬಾಂಗ್ಲಾ ತಂಡವು ರಾತ್ರಿಯ ಮೊತ್ತ 26-2 ಕ್ಕೆ ಕೇವಲ 120 ರನ್‌ ಸೇರಿಸಲು ಸಾಧ್ಯವಾಯಿತು. ರಾತ್ರಿ ಕಾವಲುಗಾರ ಶಾದ್ಮನ್ ಇಸ್ಲಾಂ, 50 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಬಾಂಗ್ಲಾದೇಶ ಇನ್ನಿಂಗ್ಸ್ ಪೂರ್ಣಗೊಳಿಸಲು ಊಟದ ಅವಧಿಯನ್ನು ಸುಮಾರು ಒಂದು ಗಂಟೆ ವಿಸ್ತರಿಸಲಾಯಿತು.

ಬಾಂಗ್ಲಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಆಲೌಟ್ ಆಗುವ ಮೊದಲು ಭಾರತವು ತ್ವರಿತ ಗತಿಯಲ್ಲಿ 9 ವಿಕೆಟ್‌ಗೆ 285 ರನ್‌ ಗಳಿಸಿ, ಡಿಕ್ಲೇರ್ ಮಾಡಿಕೊಂಡಿತು. ಮಳೆಯಿಂದ ಎರಡು ದಿನ ಆಟ ನಡೆಯಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ 47 ಓವರ್‌ಗಳಲ್ಲಿ 233 ಆಲೌಟ್ ಮತ್ತು 146 ಆಲೌಟ್ (ಶಾದ್ಮನ್ ಇಸ್ಲಾಂ 50; ರವಿಚಂದ್ರನ್ ಅಶ್ವಿನ್ 3/50, ರವೀಂದ್ರ ಜಡೇಜಾ 3/34, ಜಸ್ಪ್ರೀತ್ ಬುಮ್ರಾ 3/17).

ಭಾರತ 34.4 ಓವರ್‌ಗಳಲ್ಲಿ 285/9 ಡಿಕ್ಲೇರ್ಡ್ ಮತ್ತು 17.2 ಓವರ್‌ಗಳಲ್ಲಿ 98 ಕ್ಕೆ 3 (ಯಶಸ್ವಿ ಜೈಸ್ವಾಲ್ 51, ವಿರಾಟ್ ಕೊಹ್ಲಿ ಔಟಾಗದೆ 29).

Read More
Next Story