ಹುಬ್ಬಳ್ಳಿ – ಧಾರವಾಡ ಪೊಲೀಸರ ಕ್ರಿಯೇಟಿವಿಟಿಗೆ ಜನ ಫಿದಾ
x
ಹುಬ್ಬಳ್ಳಿ - ಧಾರವಾಡ ಪೊಲೀಸ್‌

ಹುಬ್ಬಳ್ಳಿ – ಧಾರವಾಡ ಪೊಲೀಸರ ಕ್ರಿಯೇಟಿವಿಟಿಗೆ ಜನ ಫಿದಾ

RCB ಚೆನ್ನಾಗಿ ಆಡಿದ್ರೇ ಗೆಲ್ತಾರೆ ಈ ಬಾರಿ ಕಪ್..🏆 ಕ್ರಿಕೆಟ್ ಬೆಟ್ಟಿಂಗ್ ಏನಾದ್ರೂ ಆಡಿದ್ರೆ ಹಾಕ್ತೀವಿ ನಿಮಗೆ Law 'ಕಪ್'..


ಕ್ರಿಕೆಟ್ ಪ್ರಿಯರ ಬಹು ನಿರೀಕ್ಷೆಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ಮಾರ್ಚ್ 22ರಿಂದ ಪ್ರಾರಂಭವಾಗಲಿದೆ. ಐಪಿಎಲ್ 2024ರ ಜ್ವರ ಈಗಾಗಲೇ ಜೋರಾಗಿದ್ದು, ಕ್ರಿಕೆಟ್ (Cricket ) ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಐಪಿಎಲ್ ಶುರುವಾಗುತ್ತಿದ್ದಂತೆಯೇ ಬೆಟ್ಟಿಂಗ್ ದಂಧೆಯೂ ಜೋರಾಗಿ ನಡೆಯುತ್ತದೆ. ಬೆಟ್ಟಿಂಗ್ ದಂಧೆಯ ಬಗ್ಗೆ ಹುಬ್ಬಳ್ಳಿ – ಧಾರವಾಡ (Twincity-Hubli- Dharwad) ಸೋಷಿಯಲ್ ಮೀಡಿಯಾದಲ್ಲಿ ಕ್ರಿಯೇಟಿವ್ ಜಾಗೃತಿ ಮೂಡಿಸಿದ್ದು, ಜನ ಫಿದಾ ಆಗಿದ್ದಾರೆ.

ಹುಬ್ಬಳ್ಳಿ – ಧಾರವಾಡ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಲೈನ್‌ಗಳನ್ನು ಬಳಸಿ, “ನಮ್ಮ IPL ನಮ್ಗೆ ಖುಷಿ ಕೊಟ್ರೆ ದೇವ್ರು ಅಷ್ಟೇ.. ಬೆಟ್ಟಿಂಗ್ ಯಾಕೆ ನಮ್ಗೆ...? ಏನಂತೀರಾ.. ? say no to cricket betting " ಎಂದು ಜಾಗೃತಿ ಮೂಡಿಸಿದ್ದಾರೆ.

RCB ಚೆನ್ನಾಗಿ ಆಡಿದ್ರೇ ಗೆಲ್ತಾರೆ ಈ ಬಾರಿ ಕಪ್..🏆

RCB ಚೆನ್ನಾಗಿ ಆಡಿದ್ರೇ ಗೆಲ್ತಾರೆ ಈ ಬಾರಿ ಕಪ್..🏆

ಕ್ರಿಕೆಟ್ ಬೆಟ್ಟಿಂಗ್ ಏನಾದ್ರೂ ಆಡಿದ್ರೆ ಹಾಕ್ತೀವಿ ನಿಮಗೆ Law 'ಕಪ್'.. ಎನ್ನುವ ಬರಹವನ್ನು ಹಂಚಿಕೊಂಡಿದ್ದು, ಕ್ರಿಕೆಟ್ ಬೆಟ್ಟಿಂಗ್ ಆಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹುಬ್ಬಳ್ಳಿ – ಧಾರವಾಡ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

“Hi Honey ಅಂದ್ರೆ Money ಎಂದರ್ಥ”


ಹುಬ್ಬಳ್ಳಿ – ಧಾರವಾಡ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹನಿಟ್ರ್ಯಾಪ್ ಬಗ್ಗೆ ಹಂಚಿಕೊಂಡಿರುವ ಪೋಸ್ಟ್ ಸಹ ಮೆಚ್ಚುಗೆ ಪಡೆದಿದೆ. ಆನ್‌ಲೈನ್‌ನಲ್ಲಿ ಅಪರಿಚಿತರು Hi Honey ಎಂದು ಹೇಳಿದರೆ, ನೆನಪಿಡಿ ಅವರ ಟಾರ್ಗೆಟ್ ನಿಮ್ಮ Money ಎನ್ನುವ ಬರಹವೂ ವೈರಲ್ ಆಗಿದೆ.

Read More
Next Story